ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲು. ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಣೆ, ಹಿಂದೂ ಸಂಪ್ರದಾಯದಂತೆ ಉದ್ಘಾಟನೆ ನಡೆಯಬೇಕೆಂಬ ಒತ್ತಾಯ.
ಬೆಂಗಳೂರು (ಸೆ..11): ಮೈಸೂರಿನ ವಿಶ್ವ ವಿಖ್ಯಾತ ದಸರಾ ಉತ್ಸವದ ಉದ್ಘಾಟನೆಗೆ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಬೆಂಗಳೂರಿನ ಮೂವರು ವ್ಯಕ್ತಿಗಳಾದ ಟಿ ಗಿರೀಶ್ ಕುಮಾರ್, ಹೆಚ್.ಎಸ್.ಗೌರವ್ ಮತ್ತು ಆರ್. ಸೌಮ್ಯ ಅವರು ಕರ್ನಾಟಕ ಹೈಕೋರ್ಟ್‌ಗೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ದಾಖಲಿಸಿದ್ದಾರೆ. ಇದರ ಜೊತೆಗೆ, ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಿಐಎಲ್ ಸಲ್ಲಿಸಿದ್ದಾರೆ.
ತುರ್ತು ವಿಚಾರಣೆಗೆ ಹೈಕೋರ್ಟ್‌ನಿಂದ ನಿರಾಕರಣೆ
ನಿನ್ನೆ ದಾಖಲಾದ ಈ ಮೂರು ಪಿಐಎಲ್‌ಗಳ ತುರ್ತು ವಿಚಾರಣೆಗೆ ವಕೀಲರು ಮನವಿ ಸಲ್ಲಿಸಿದ್ದರೂ, ಕರ್ನಾಟಕ ಹೈಕೋರ್ಟ್ ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿಸಿದೆ. ಈ ಅರ್ಜಿಗಳು ಇನ್ನೂ ನಾಲ್ಕು ದಿನಗಳ ಬಳಿಕ ಲಿಸ್ಟ್ ಆಗಲಿವೆ ಹೀಗಾಗಿ ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಕೋರ್ಟ್ ಸೂಚಿಸಿದೆ. ಈ ನಡುವೆ, ದಸರಾ ಉದ್ಘಾಟನೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಬೇಕು ಎಂದು ಒತ್ತಾಯಿಸಿ, ಸರ್ಕಾರವು ಬಾನು ಮುಷ್ತಾಕ್ ಅವರಿಗೆ ನೀಡಿರುವ ಆಹ್ವಾನವನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಮೈಸೂರು ದಸರಾ ಬಾನು ಮುಷ್ತಾಕ್ ಉದ್ಘಾಟನೆ ಸರಿಯಲ್ಲ:
ಅರ್ಜಿದಾರರು ತಮ್ಮ ಪಿಐಎಲ್‌ಗಳಲ್ಲಿ, ಮೈಸೂರು ದಸರಾ ಉತ್ಸವವು ಶತಮಾನಗಳಿಂದ ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಆಚರಿಸಲ್ಪಟ್ಟಿದೆ. ಆದ್ದರಿಂದ, ಉದ್ಘಾಟನೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಬಾನು ಮುಷ್ತಾಕ್‌ರನ್ನ ಆಯ್ಕೆ ಮಾಡಿರುವ ಸರ್ಕಾರದ ಈ ನಿರ್ಧಾರವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಹೀಗಾಗಿ ಹಿಂದೂ ದೇವರು, ಕನ್ನಡ, ಭುವನೇಶ್ವರಿ ಬಗ್ಗೆ ಗೌರವವಿಲ್ಲದ ಬಾನು ಮುಷ್ತಾಕ್‌ರಿಂದ ಉದ್ಘಾಟಿುವುದು ಸರಿಯಲ್ಲ ಎಂದು ವಾದಿಸಲಾಗೆ. ಸದ್ಯ ಈ ವಿವಾದವು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ದಸರಾ ಉತ್ಸವದ ಉದ್ಘಾಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರೆ ಮತ್ತು ಸರ್ಕಾರದ ಮುಂದಿನ ಕ್ರಮವೇನು ಎಂಬುದು ಕುತೂಹಲ ಮೂಡಿಸಿದೆ. ಹೈಕೋರ್ಟ್‌ನ ತೀರ್ಪು ಈ ವಿಷಯದಲ್ಲಿ ನಿರ್ಣಾಯಕವಾಗಲಿದೆ.
