ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಟೀಕಿಸಿದ ರೇಣುಕಾಚಾರ್ಯ, ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರು (ಸೆ.11): ಗಣೇಶ ಮೆರವಣಿಗೆ ಮೇಲೆ ಕಲ್ಲೆಸೆಯುವ ಇವರು ಶಾಂತಿಧೂತರ? ಪಾಕಿಸ್ತಾನಕ್ಕೆ ಹೋಗಿ ಭಾರತದ ಪರ ಘೋಷಣೆ ಕೂಗಿದರೆ ಅವರು ಸುಮ್ಮನಿರ್ತಾರಾ? ಇಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣ ದೇಶಕ್ಕೆ ಕುತ್ತು ತರುವಂತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆ: ರೇಣುಕಾಚಾರ್ಯ ಕಿಡಿ

ಇಂದು ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳ ಹಬ್ಬ ಆಚರಣೆಗೆ ಡಿಜೆ ಅನುಮತಿ ಕೊಡುತ್ತಿಲ್ಲ. ಆದ್ರೆ ಮೈಕ್‌ನಲ್ಲಿ ಹಜಾನ್ ಕೂಗಬಹುದಂತೆ ಆಗ ಯಾರಿಗೆ ಶಬ್ದಮಾಲಿನ್ಯ, ಕರ್ಕಶವಾಗುವುದಿಲ್ಲವಾ? ಭಾರತ್ ಮಾತಾ ಕೀ ಜೈ ಎಂದವರನ್ನ ಅರೆಸ್ಟ್ ಮಾಡ್ತಾರೆ. ಆದ್ರೆ ದೇಶದ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಮತಾಂಧರ ವಿರುದ್ಹ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಕೇಸ್ ವಾಪಸ್ ಪಡೆಯುತ್ತದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇಲ್ಲ. ರಾಜ್ಯದಲ್ಲಿ ಪಾಕಿಸ್ತಾನ, ತಾಲಿಬಾನ್ ಸರ್ಕಾರವಿದೆ ಎಂದು ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟೀಕರಣ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೂ-ಪಾಕಿಸ್ತಾನಕ್ಕೂ ನಂಟು:

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರದಲ್ಲಿಲ್ಲ. ರಾಹುಲ್, ಸೋನಿಯಾ ಗಾಂಧಿ ಅಣತಿಯಂತೆ ನಡೆಯುತ್ತಿದೆ. ಕಾಂಗ್ರೆಸ್‌ನವರು ಆಪರೇಷನ್ ಸಿಂದೂರ್ ಬಗ್ಗೆ ಟೀಕೆ ಮಾಡ್ತಾರೆ. ಸಿದ್ದರಾಮಯ್ಯರ ಹೇಳಿಕೆಗಳು ಪಾಕಿಸ್ತಾನದಲ್ಲಿ ಪ್ರಸಾರ ಆಗುತ್ತೆ. ಕಾಂಗ್ರೆಸ್‌ಗೂ ಪಾಕಿಸ್ತಾನಕ್ಕೂ ನಂಟು, ವ್ಯಾಮೋಹ. ಇದೇ ಕಾರಣಕ್ಕೆ ಭಾರತ್ ಮಾತಾ ಕೀ ಜೈ ಎಂದವರನ್ನ ಅರೆಸ್ಟ್ ಮಾಡ್ತಾರೆ, ಪಾಕಿಸ್ತಾನ್ ಜಿಂದಾಬಾದ್ ಎಂದವನ್ನ ನಮ್ಮ ಬ್ರದರ್ ಅಂತಾರೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಪರಮೇಶ್ವರ ಹುಟ್ಟಿದ ಧರ್ಮ, ದೇಶಕ್ಕೆ ಅಪಮಾನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಭದ್ರಾವತಿ ಶಾಸಕ ಸಂಗಮೇಶ ಹೇಳಿಕೆಗೆ ರೇಣುಕಾಚಾರ್ಯ ಗರಂ:

ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕು ಎಂಬ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಂಪಿ ರೇಣುಕಾಚಾರ್ಯ ಅವರು, ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಅಂತಾರೆ ಆದ್ರೆ ಮುಸ್ಲಿಮರಲ್ಲಿ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ. ನಿಮ್ಮ ಜೊತೆ ನಿಮ್ಮ ಭೀಗರನ್ನು ಕರೆದುಕೊಂಡು ಹೋಗಿ ಇದೇ ಜನ್ಮದಲ್ಲಿ ಮುಸ್ಲಿಂಗೆ ಕನ್ವರ್ಟ್ ಮಾಡಿಕೊಳ್ಳಿ ಎಂದು ಸವಾಲು ಹಾಕಿದರು.