ಮದ್ದೂರಿನ ಭಾಷಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಗೋಹತ್ಯೆ ಮತ್ತು ಗಣೇಶೋತ್ಸವದ ಮೆರವಣಿಗೆ ಮೇಲಿನ ದಾಳಿಯಂತಹ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಜಯಪುರ (ಸೆ.14): ಮದ್ದೂರಿನಲ್ಲಿ ಮಾಡಿದ ಭಾಷಣಕ್ಕಾಗಿ ನನ್ನ ಮೇಲೆ ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಸರ್ಕಾರ ಅದೆಷ್ಟೇ ಎಫ್‌ಐಆರ್‌ಗಳನ್ನು ಹಾಕಿದರೂ ಸಹ ನಾನು ವಿಚಲಿತನಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಆರೋಪದ ಮೇಲೆ ಸರ್ಕಾರ ಯತ್ನಾಳ ವಿರುದ್ಧ ದಾಖಲಿಸಿದ ದೂರಿನ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ ಯತ್ನಾಳ, ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ. ಗೋ ಮಾತೆಯ ಕೆಚ್ಚಲನ್ನು ಕತ್ತರಿಸಿದಾಗ, ಮಸೀದಿಯಲ್ಲಿ ಕಲ್ಲು ಶೇಖರಣೆ ಮಾಡಿ ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಲಿ ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಜೆಸಿಬಿ ಚಿಹ್ನೆ ಅಡಿ ಕರ್ನಾಟಕ ಹಿಂದೂ ಪಕ್ಷ ಕಟ್ಟಿ ಸಿಎಂ ಆಗುವೆ: ವಕ್ಫ್ ಹಣ ಗೋರಕ್ಷಣೆಗೆ: ಯತ್ನಾಳ್
ಕಾಂಗ್ರೆಸ್ ಪಕ್ಷದ ಅಂತ್ಯ ಮದ್ದೂರಿನಿಂದಲೇ ಪ್ರಾರಂಭವಾಗಲಿದೆ. ಇದಕ್ಕೆ ಮೊನ್ನೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳೇ ಸಾಕ್ಷಿ. ಬೆದರಿಸುವ ಪ್ರಯತ್ನಕ್ಕೆ ಜಗ್ಗುವ ಮಾತೆ ಇಲ್ಲ, ಜೈ ಶ್ರೀ ರಾಮ ಎಂದು ಯತ್ನಾಳ ಟ್ವಿಟ್ ಮಾಡಿದ್ದಾರೆ.
