ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ  ವಿಚಾರಣೆಗೊಳಪಡಿಸಿದಾಗ ಇವರು ಬಾಂಗ್ಲಾದೇಶಿಯರು ಎಂದು ತಿಳಿದು ಬಂತು. ಇನ್ನೂ ಎಂಟು ಮಂದಿ ಅವರ ಜೊತೆ ಇರುವುದು ಪತ್ತೆಯಾಯಿತು. ಬಳಿಕ, ಶ್ರೀನಿವಾಸಪುರ  ಪೊಲೀಸರು ಎಲ್ಲಾ 10 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆ 

ಕೋಲಾರ : ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣ ಪೊಲೀಸರು 10 ಮಂದಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂದಗುಡಿ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇವರನ್ನು ವಿಚಾರಣೆಗೊಳಪಡಿಸಿದಾಗ ಇವರು ಬಾಂಗ್ಲಾದೇಶಿಯರು ಎಂದು ತಿಳಿದು ಬಂತು. ಇನ್ನೂ ಎಂಟು ಮಂದಿ ಅವರ ಜೊತೆ ಇರುವುದು ಪತ್ತೆಯಾಯಿತು. ಬಳಿಕ, ಶ್ರೀನಿವಾಸಪುರ ಪಟ್ಟಣ ಪೊಲೀಸರು ಎಲ್ಲಾ 10 ಮಂದಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಕೋಲಾರ ಎಸ್ಪಿ ನಿಖಿಲ್.ಬಿ ನೇತೃತ್ವದಲ್ಲಿ ಹೆಚ್ಚಿನ ವಿಚಾರಣೆ ಹಾಗೂ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.

ಇವರೆಲ್ಲಾ ಬಾಂಗ್ಲಾದೇಶದ ಕುಲ್ನಾ ರಾಜ್ಯದ ಬಾಗೇರ್ ಹಠ್ ಜಿಲ್ಲೆಯ ತಪಲ್ಬರಿ ಗ್ರಾಮದವರಾಗಿದ್ದಾರೆ. ವಶಕ್ಕೆ ತೆಗೆದುಕೊಂಡವರ ಪೈಕಿ ನಾಲ್ವರು ಪುರುಷರು, ಮೂವರು ಮಹಿಳೆಯರು, ಮೂವರು ಮಕ್ಕಳಾಗಿದ್ದಾರೆ.

ನಂದಗುಡಿ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಟ

- ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು. ಪೊಲೀಸರಿಂದ ವಿಚಾರಣೆ

- ಆ ವೇಳೆ ಅವರು ಬಾಂಗ್ಲಾದೇಶೀಯರು ಎಂಬ ಮಾಹಿತಿ ಪತ್ತೆ. ಅವರ ಜತೆ ಇನ್ನೂ 8 ಜನ

- ಶ್ರೀನಿವಾಸಪುರ ಪೊಲೀಸರಿಂದ ಎಲ್ಲ 10 ಮಂದಿ ಬಾಂಗ್ಲಾದೇಶಿಯರು ವಶಕ್ಕೆ