ಸಹೋದರ ರಾಣಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಫೋಟೊಗಳ ಮೂಲಕ ಶುಭ ಕೋರಿದ Rakshitha Prem
ತಮ್ಮ ನಟ ರಾಣಾ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಹಳೆಯ ಫೋಟೊಗಳನ್ನು ಶೇರ್ ಮಾಡಿ ಮುದ್ದಿನ ತಮ್ಮನಿಗೆ ಶುಭಾಶಯ ಕೋರಿದ್ದಾರೆ. ಹೇಗಿದೆ ನೋಡಿ ಅಕ್ಕ ತಮ್ಮನ ಮುದ್ದಾದ ಜೋಡಿ.

ರಕ್ಷಿತಾ ಪ್ರೇಮ್
ಚಂದನವನದ ಕ್ರೇಜಿ ಕ್ವೀನ್ ಎಂದೇ ಹೆಸರು ಪಡೆದಿರುವ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ನಟ ರಾಣಾ ಅಕ್ಟೋಬರ್ 5 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.
ರಾಣಾ ಹುಟ್ಟುಹಬ್ಬ
ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ರಾಣಾ ಹುಟ್ಟುಹಬ್ಬಕ್ಕೆ ಅಕ್ಕ ರಕ್ಷಿತಾ ಹಳೆಯ ಒಂದಷ್ಟು ಸುಂದರ ಫೋಟೊಗಳನ್ನು ಶೇರ್ ಮಾಡುವ ಮೂಲಕ ಮುದ್ದಿನ ತಮ್ಮನಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ ನಟಿ.
ರಕ್ಷಿತಾ ಹೇಳಿದ್ದೇನು?
ನಿನಗೆ ಗೊತ್ತು, ನಾನು ನಿನ್ನ ಜೊತೆ ಮಾತನಾಡಲು ಬಯಸುತ್ತಿದ್ದೇನೆ ಎಂದು, ಆದರೆ ನೀನು ಇವತ್ತು ತುಂಬಾ ಬ್ಯುಸಿ ಇದ್ದೀಯ, ಆದರೆ ಕೆಲವೊಮ್ಮೆ ನಾವು ಬೆಸ್ಟ್ ಆಗಿರುವ ಮಾತುಕತೆ ನಡೆಸುತ್ತೇವೆ ಅನ್ನೋದೆ ನನಗೆ ಸಂತೋಷದ ವಿಷಯ. ನನ್ನ ಮಾತು ಕೇಳಲು ಯಾರಾದರೂ ಬೇಕು ಎಂದಾಗ ನೀನು ಯಾವಾಗಲೂ ನನ್ನ ಜೊತೆ ಇರುತ್ತಿ, ಹೀಗೆಯೇ ಇರು ರಾಣಾ ಎಂದಿದ್ದಾರೆ ರಕ್ಷಿತಾ.
ಹ್ಯಾಪಿ ಬರ್ತ್ ಡೇ ಅಭಿ
ಇದರ ಜೊತೆಗೆ ಮುಂಬರುವ ವರ್ಷವು ಸುಂದರವಾಗಿರಲಿ ಎಂದು ಹಾರೈಸುತ್ತೇನೆ ಮತ್ತು ಮುಂದಿನ ಬಾರಿ ಈ ದಿನ ನೀನು ನಮ್ಮೊಂದಿಗೆ ಇರಬೇಕು ಅನ್ನೋದು ನೆನಪಿರಲಿ… ಹುಟ್ಟುಹಬ್ಬದ ಶುಭಾಶಯಗಳು ಅಭಿ, ನಾವೆಲ್ಲರೂ ನಿನ್ನನ್ನು ಪ್ರೀತಿಸುತ್ತೇವೆ ಎನ್ನುತ್ತಾ ಸುಂದರವಾದ ಹಳೆಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ .
ರಾಣಾ ಸಿನಿಮಾಗಳು
ರಾಣಾ 'ಏಕ್ ಲವ್ ಯಾ' (Ek Love Ya) ಚಿತ್ರದ ಮೂಲಕ 2022 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ನಟ ಪ್ರೇಮ್ ಅವರು ನಿರ್ದೇಶನದ ಚಿತ್ರವಾಗಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಏಳುಮಲೆ
ಏಳುಮಲೆ ಎದೆ ನಡುಗಿಸುವ ಪ್ರೇಮ ಕಥೆಯಲ್ಲಿ ಕೂಡ ರಾಣಾ ನಟಿಸಿದ್ದರು. ಈ ಸಿನಿಮಾದಲ್ಲಿ ಮಹಾನಟಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿದ್ದರು. ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು, ಜನರ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.