ಕಮಲ್ ಶ್ರೀದೇವಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಪತ್ನಿ ಜೊತೆ ಬಂದಿದ್ದ ತಾಂಡವ್, ಸೀರೆ ಸೆರಗು ಹಿಡಿದು ಬಾಡಿಗಾರ್ಡ್ ಆಗಿದ್ದಾರೆ.
ಭಾಗ್ಯ ಮದುವೆ ಆಗಿ, ಶ್ರೇಷ್ಠಾ ಹಿಂದೆ ಬಿದ್ದು, ಅವಳನ್ನೂ ಮದುವೆ ಆಗಿ ಕೈ ಖಾಲಿ ಮಾಡ್ಕೊಂಡಿರುವ ತಾಂಡವ್ ಈಗ ಸಂಗೀತಾ ಭಟ್ (Sangeeta Bhat) ಸೆರಗು ಹಿಡಿದಿದ್ದಾರೆ. ಸ್ಯಾಂಡಲ್ ವುಡ್ (Sandalwood) ನಟಿ ಸಂಗೀತಾ ಭಟ್, ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಎಂಟ್ರಿ ಆದ್ರಾ? ಇಲ್ಲ. ಭಾಗ್ಯಲಕ್ಷ್ಮಿ ಸೀರಿಯಲ್ ಹೀರೋ ತಾಂಡವ್ ಅಲಿಯಾಸ್ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಈ ಬಾರಿ ಭಾಗ್ಯಾ, ಶ್ರೇಷ್ಠಾ ಬದಲು ತಮ್ಮ ರಿಯಲ್ ಪತ್ನಿ ಸಂಗೀತಾ ಭಟ್ ಸೀರೆ ಸೆರಗು ಹಿಡಿದಿದ್ದಾರೆ. ಪತ್ನಿ ಸಂಗೀತಾ ಭಟ್ ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಸುದರ್ಶನ್ ರಂಗಪ್ರಸಾದ್ ಪತ್ನಿ ಜೊತೆ ರ್ಯಾಂಪ್ ವಾಕ್ ಮಾಡಿದ್ದಲ್ಲದೆ ಅವರ ಬಾಡಿಗಾರ್ಡ್ ಕೂಡ ಆಗಿದ್ರು.
ಕಮಲ್ ಶ್ರೀದೇವಿ (Kamal Sridevi) ಟ್ರೈಲರ್ ಲಾಂಚ್ ನಲ್ಲಿ ಹಿಂದೆ ಕುಳಿತ ಸುದರ್ಶನ್ ರಂಗಪ್ರಸಾದ್ : ಕನ್ನಡದ ಕಮಲ್ ಶ್ರೀದೇವಿ ಸಿನಿಮಾದಲ್ಲಿ ಸಂಗೀತಾ ಭಟ್ ನಟಿಸ್ತಿದ್ದಾರೆ. ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಸಂಗೀತಾ ಪತಿ ಸುದರ್ಶನ್ ರಂಗಪ್ರಸಾದ್ ಕೂಡ ಸಿನಿಮಾ ಟ್ರೈಲರ್ ಬಿಡುಗಡೆಗೆ ಬಂದಿದ್ದರು. ಹಿಂದೆ ಕುಳಿತು ಪ್ರೋಗ್ರಾಂ ವೀಕ್ಷಣೆ ಮಾಡಿದ ಪತಿ ಸುದರ್ಶನ್ ರಂಗಪ್ರಸಾದ್ ಅವರನ್ನು ವೇದಿಕೆ ಮೇಲೆ ಬರುವಂತೆ ಸಂಗೀತಾ ಭಟ್ ಕೇಳಿದ್ದಾರೆ. ಇಲ್ಲ ಇದೇ ಸೀಟ್ ಚೆನ್ನಾಗಿದೆ, ಎಲ್ಲ ಹುಡುಗ್ರು ಹಿಂದಿನ ಬೇಂಚ್ ಸೆಲೆಕ್ಟ್ ಮಾಡ್ತಾರೆ ಎಂದ ಸುದರ್ಶನ್, ನಗ್ತಾ ಪತ್ನಿ ಆಕ್ಟಿಂಗ್ ಮೆಚ್ಚಿಕೊಂಡಿದ್ದಾರೆ.
Bigg Boss ಕುರಿತು ಬಿಗ್ ಅಪ್ಡೇಟ್ ಕೊಟ್ಟ ಆ್ಯಂಕರ್ ಅನುಪಮಾ: ವೀಕ್ಷಕರು ಕುಣಿದು ಕುಪ್ಪಳಿಸೋ ಸುದ್ದಿ ಇದು!
ಪತ್ನಿ ಸಂಗೀತಾ ಭಟ್ ಜೊತೆ ರ್ಯಾಂಪ್ ವಾಕ್ : ಕಾರ್ಯಕ್ರಮದ ನಡುವೆ ಸುದರ್ಶನ್ ರಂಗಪ್ರಸಾದ್ ಹಾಗೂ ಸಂಗೀತಾ ಭಟ್ ರ್ಯಾಂಪ್ ವಾಕ್ ಕೂಡ ಮಾಡಿದ್ದಾರೆ. ಸೀರೆ ಸೆರಗು ಹಿಡ್ಕೊಂಡು ಬರ್ಲಾ ಅಂತ ತಮಾಷೆ ಮಾಡಿದ ಸುದರ್ಶನ್ ರಂಗಪ್ರಸಾದ್, ಪತ್ನಿ ಜೊತೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ ಮುಂದಿದ್ದವರನೆಲ್ಲ ಸೈಡ್ ಗೆ ಹೋಗಿ ಸೈಡ್ ಗೆ ಹೋಗಿ, ನಾನು ಬಾಡಿಗಾರ್ಡ್ ಎನ್ನುತ್ತ ಪತ್ನಿ ಜೊತೆ ಜಾಲಿಯಾಗಿದ್ರು ಸುದರ್ಶನ್ ರಂಗಪ್ರಸಾದ್.
ಸಂಗೀತಾ ಭಟ್ – ಸುದರ್ಶನ್ ರಂಗ ಪ್ರಸಾದ್ ದಾಂಪತ್ಯ : ಸಂಗೀತಾ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಮದುವೆಯಾಗಿ 14 ವರ್ಷ ಕಳೆದಿದೆ. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಸಂಗೀತಾ ಭಟ್ ಸಿನಿಮಾದಲ್ಲಿ ಬ್ಯುಸಿಯಿದ್ರೆ ಸುದರ್ಶನ್ ಸೀರಿಯಲ್, ನಿರ್ದೇಶನ, ಸಿನಿಮಾ, ಕೆಲ್ಸ ಅಂತ ಫುಲ್ ಬ್ಯುಸಿ. ಇಬ್ಬರೂ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಕಮೆಂಟ್ ಮಾಡ್ತಾ ಸುದ್ದಿಯರ್ಲಿರ್ತಾರೆ. ಸ್ಯಾಂಡಲ್ ವುಡ್ ಪ್ರಸಿದ್ಧ ನಟಿ ಸಂಗೀತಾ ಭಟ್ ದಂಪತಿ ಕೆಲ ದಿನಗಳ ಹಿಂದಷ್ಟೆ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದು, ಇಬ್ಬರ ಪ್ರೀತಿ ಈಗ್ಲೂ ಹಸಿರಾಗಿದೆ.
Actor Salman Khan ವಿರುದ್ಧ ಸಾಲು ಸಾಲು ಆರೋಪ; ಸಿನಿಮಾಗಳು ಗೆಲ್ತಿಲ್ಲ.. ವಿವಾದಗಳು ಬಿಡ್ತಿಲ್ಲ..!
ಕಮಲ್ ಶ್ರೀದೇವಿ ಸಿನಿಮಾ ರಿಲೀಸ್ ಯಾವಾಗ? : ಸದ್ಯ ಸಂಗೀತಾ ಭಟ್ ಕಮಲ್ ಶ್ರೀದೇವಿ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಸೆಪ್ಟೆಂಬರ್ 19 ರಂದು ಸಿನಿಮಾ ತೆರೆಗೆ ಬರಲಿದೆ. ಸಂಗೀತಾ ಭಟ್ ಜೊತೆ ಸಚಿನ್ ಚೆಲುವರಾಯಸ್ವಾಮಿ, ಕಿಶನ್ ನಟಿಸಿದ್ದಾರೆ. ವಿಎ ಸುನಿಲ್ ಚಿತ್ರ ನಿರ್ದೇಶನ ಮಾಡಿದ್ದು, ಚಿತ್ರದ ಟೀಸರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಸಂಗೀತಾ ಅಭಿನಯವನ್ನು ಸಹ ನಿರ್ಮಾಪಕ ರಾಜವರ್ಧನ್ ಮೆಚ್ಚಿಕೊಂಡಿದ್ದು, ರಾಜ್ಯ ಪ್ರಶಸ್ತಿ ಗ್ಯಾರಂಟಿ ಎಂದಿದ್ದಾರೆ.
