ಸ್ಯಾಂಡಲ್ ವುಡ್ ನಟಿ ಸುಧಾರಾಣಿ ಕನಸೊಂದು ಈಡೇರಿದೆ. ಅವರು ಎಸ್. ಜಾನಕಿಯವರನ್ನು ಭೇಟಿಯಾಗಿದ್ದಾರೆ. ಅಮ್ಮನ ಆಶೀರ್ವಾದ ಪಡೆದ ಸುಧಾರಾಣಿ ಅದ್ರ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಸದಾ ಲವಲವಿಕೆಯಿಂದಿರುವ ಸ್ಯಾಂಡಲ್ ವುಡ್ ಹಿರಿಯ ನಟಿ ಸುಧಾರಾಣಿ (Sudharani) ಖುಷಿ ಈಗ ಡಬಲ್ ಆಗಿದೆ. ಇದಕ್ಕೆ ಕಾರಣ ಗಾನ ಕೋಗಿಲೆ ಎಸ್. ಜಾನಕಿ (S. Janaki). ಸುಧಾರಾಣಿ, ಎಸ್. ಜಾನಕಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಸುಧಾರಾಣಿ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಎಸ್. ಜಾನಕಿ ಮನೆಗೆ ಭೇಟಿ ನೀಡಿದ್ದ ಸುಧಾರಾಣಿ, ಅಮ್ಮನಿಂದ ಆಶೀರ್ವಾದ ಪಡೆದು ಸಂಭ್ರಮಿಸಿದ್ದಾರೆ. ಅವರ ಬಹುದಿನದ ಕನಸು ಈಡೇರಿದೆ.

ಎಸ್. ಜಾನಕಿ ಭೇಟಿ ಮಾಡಿದ ಸುಧಾರಾಣಿ : 

ಸ್ಯಾಂಡಲ್ ವುಡ್ ನಟಿ ಸುಧಾರಾಣಿ, ಬಿಗ್ ಬಾಸ್ 12ರ ಮನೆಗೆ ಹೋಗ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅದಕ್ಕೆ ಸುಧಾರಾಣಿ ಉತ್ತರ ಕೂಡ ನೀಡಿದ್ದರು. ಜೀ ಕನ್ನಡದ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ತುಳಸಿಯಾಗಿ ಮಿಂಚಿದ್ದ ಸುಧಾರಾಣಿ, ಮನೆ ಮನಕ್ಕೆ ಮತ್ತಷ್ಟು ಹತ್ತಿರವಾಗಿದ್ದರಿಂದ, ಸೀರಿಯಲ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಮನೆಗೆ ಹೋಗ್ತಾರೆ ಎಂಬ ಸುದ್ದಿ ಹಬ್ಬಿತ್ತು. ಬಿಗ್ ಬಾಸ್ ಗಲಾಟೆ ಮಧ್ಯೆಯೇ ಸುಧಾರಾಣಿ, ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಅವರು ಜೀ ಪವರ್ನಲ್ಲಿ ಪ್ರಸಾರ ಆಗ್ತಿರೋ ‘ಹಳ್ಳಿ ಪವರ್’ ಶೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಬೆಳಗಾವಿಯ ಸಂಗೊಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆ ರಂಗು ಹೆಚ್ಚಿಸಿದ್ದ ಸುಧಾರಾಣಿ, ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಅದ್ರ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಸುಧಾರಾಣಿ ಆಕ್ಟಿವ್ ಆಗಿದ್ದಾರೆ. ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿರುವ ಸುಧಾರಾಣಿ, ಈಗ ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಂಡಿದ್ದಾರೆ. ಸುಧಾರಾಣಿ, ಗಾನ ಕೋಗಿಲೆ ಎಸ್. ಜಾನಕಿಯವರನ್ನು ಭೇಟಿಯಾಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್; ವಿಶ್ವದಾದ್ಯಂತ ಧೂಳ್ ಎಬ್ಬಿಸಲು ರೆಡಿ!

ಜಾನಕಿ ಅಮ್ಮನನ್ನು ಭೇಟಿಯಾದ ಸುಧಾರಾಣಿ, ಅವರನ್ನು ತಬ್ಬಿಕೊಂಡ, ಅವರಿಂದ ಆಶೀರ್ವಾದ ಪಡೆದ, ಅವರಿಂದ ಕುಂಕುಮ ಪಡೆದ ಒಂದಿಷ್ಟು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದ್ರ ಜೊತೆ ಎಸ್. ಜಾನಕಿಯವರ ಪ್ರಸಿದ್ಧ ಹಾಡು, ನಾನಾಗುವ ಆಸೆ ಎಂಬ ಹಾಡನ್ನು ಪ್ಲೇ ಮಾಡಿದ್ದಾರೆ. ʻʻಕನಸು ನನಸಾಯಿತು. ಸರಸ್ವತಿ ದೇವಿಯನ್ನೇ ಭೇಟಿಯಾದೆ. ಈ ಕ್ಷಣ ನನ್ನ ಹೃದಯದಲ್ಲಿ ಯಾವಾಗ್ಲೂ ಅಚ್ಚೊತ್ತಿರುತ್ತದೆ. ಕೃಪೆ, ಘನತೆ ಮತ್ತು ನಮ್ರತೆಯ ಪ್ರತಿರೂಪ ಎಸ್. ಜಾನಕಿ. ಆನಂದ್ ಸಿನಿಮಾದಲ್ಲಿ ಅವರು ನನಗಾಗಿ ಹಾಡಿದ ಹಾಡುಗಳ ಹೆಸರುಗಳನ್ನು ಹೇಳಿದಾದ ನಾನು ಮೂಕವಿಸ್ಮಿತಳಾದೆ. ಅವರು ನನ್ನನ್ನು ಆಶೀರ್ವದಿಸಿದಾಗ ನಾನು ಭಾವುಕಳಾಗಿದ್ದೆʼʼ ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ. ಸುಧಾರಾಣಿ ಇನ್ಸ್ಟಾ ಪೋಸ್ಟ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಜಾನಕಿ ಹಾಗೂ ಸುಧಾರಾಣಿ ಅವರನ್ನು ಒಟ್ಟಿಗೆ ನೋಡಿ ಸಂತೋಷವಾಯ್ತು ಎಂದಿದ್ದಾರೆ. ಅಷ್ಟೇ ಅಲ್ಲ ಜಾನಕಿ ಅವರ ಹಾಡುಗಳನ್ನು ಬಳಕೆದಾರರು ನೆನಪಿಸಿಕೊಂಡಿದ್ದಾರೆ. ಎಂದೂ ಮರೆಯದ ಧ್ವನಿ ಅದು. ಅವರು ಲೆಜೆಂಡರಿ ಗಾಯಕಿ, ಅವರ ಸರಳ ಜೀವನ ಎಲ್ಲರಿಗೂ ಇಷ್ಟ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

10 ವರ್ಷಗಳ ನಂತರ ಟಾಲಿವುಡ್‌ಗೆ ಮರಳುತ್ತಿದ್ದಾರೆ ಕೆಜಿಎಫ್‌ನ ರಮಿಕಾ ಸೇನ್: ಸೂರ್ಯ ಸಿನಿಮಾದಲ್ಲಿ ಸ್ಪೆಷಲ್ ರೋಲ್

ಎಸ್. ಜಾನಕಿಗೆ ಈಗ 87ರ ಹರೆಯ. 1938ರಲ್ಲಿ ಜನಿಸಿದ ಜಾನಕಿ, ತಮ್ಮ ಸುಮಧುರ ಕಂಠದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳಲ್ಲಿಹಾಡು ಹಾಡಿರುವ ಜಾನಕಿ, ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಹಾಡೋದನ್ನು ಬಿಟ್ಟು ತುಂಬಾ ವರ್ಷಗಳು ಕಳೆದಿವೆ. ಜಾನಕಿ 2016ರಲ್ಲಿಯೇ ಸಿನಿಮಾಗಳಿಗೆ ಹಾಡು ಹೇಳೋದನ್ನು ನಿಲ್ಲಿಸಿದ್ದಾರೆ. ತಮಗೆ ವಯಸ್ಸಾಯ್ತು ಎನ್ನುವ ಕಾರಣ ನೀಡಿದ್ದ ಜಾನಕಿ, ಸದ್ಯ ದೇವಸ್ಥಾನಗಳ ಭೇಟಿ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಅವರು ಭೇಟಿ ನೀಡಿದ್ದರು. ಸುಧಾರಾಣಿ, ತಮ್ಮ ಯುಟ್ಯೂಬ್ ನಲ್ಲಿ ಎಸ್. ಜಾನಕಿ ಸಂದರ್ಶನವನ್ನು ಪ್ರಸಾರ ಮಾಡುವ ಸಾಧ್ಯತೆ ಇದ್ದು, ವೀಕ್ಷಕರು ಕಾದು ನೋಡ್ಬೇಕಿದೆ.

View post on Instagram