Ramya - Vinay Rajkumar : ರಮ್ಯಾ ದೊಡ್ಮನೆ ಸೊಸೆ ಆಗ್ತಾರಾ? ವಿನಯ್ ರಾಜ್ ಕುಮಾರ್ ಮದುವೆ ಆಗ್ತಾರಾ? ಈ ಎಲ್ಲ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರಮ್ಯಾ, ನೆಟ್ಟಿಗರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya), ವಿನಯ್ ರಾಜ್ ಕುಮಾರ್ (Vinay Rajkumar) ಜೊತೆ ಡೇಟ್ ಮಾಡ್ತಿದ್ದಾರೆ, ರಮ್ಯಾ ಶೀಘ್ರವೇ ದೊಡ್ಮನೆ ಸೊಸೆ ಯಾಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಚರ್ಚೆಗೆ ಗ್ರಾಸವಾಗಿದೆ. ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಅವರನ್ನು ಒಟ್ಟಿಗೆ ನೋಡಿದ ಅನೇಕರು, ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ ಎಂಬ ಮಾತನಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ರಮ್ಯಾ ಉತ್ತರ ನೀಡಿದ್ದಾರೆ. ರಮ್ಯಾ ತಮ್ಮ ಇನ್ಸ್ಟಾ ಸ್ಟೋರಿ ಮೂಲಕ ಟ್ರೋಲರ್ ಬಾಯಿ ಮುಚ್ಚಿಸಿದ್ದಾರೆ.

ವಿನಯ್ ರಾಜ್ ಕುಮಾರ್ ಜೊತೆ ಡೇಟಿಂಗ್, ಉತ್ತರ ನೀಡಿದ ರಮ್ಯಾ : ರಮ್ಯಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ವಿನಯ್ ರಾಜ್ ಕುಮಾರ್ ಹಾಗೂ ತನ್ನ ಮಧ್ಯೆ ಇರುವ ಸಂಬಂಧ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನೀವೆಷ್ಟು ಫನ್ನಿ. ಬೇಗ ಒಂದು ನಿರ್ಧಾರಕ್ಕೆ ಬರ್ತೀರಾ. ವಿನಯ್ ರಾಜ್ ಕುಮಾರ್ ನನ್ನ ತಮ್ಮನ ಸಮಾನ. ನಿಮ್ಮ ಕಲ್ಪನೆಗೆ ಮಿತಿ ಇರಲಿ ಎಂದು ರಮ್ಯಾ ಇನ್ಸ್ಟಾ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಇನ್ಸ್ಟಾದಲ್ಲಿ ತಾವು ಹಾಕಿದ್ದ ಫೋಟೋಕ್ಕೆ ಅಭಿಮಾನಿಗಳು ಕೇಳಿದ್ದ ಪ್ರಶ್ನೆಗೆ ರಮ್ಯಾ ನೇರವಾಗಿಯೇ ಉತ್ತರ ನೀಡಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ವಿನಯ್ ಜೊತೆ ನೀವು ಡೇಟ್ ಮಾಡ್ತಿದ್ದೀರಾ ಅಂತ ಇನ್ಸ್ಟಾಗ್ರಾಮ್ ನಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ರಮ್ಯಾ ನೋ ಎನ್ನುವ ಉತ್ತರ ನೀಡಿದ್ದಾರೆ.

ದೆವ್ವ ಹುಡುಕಿಕೊಂಡು ಹೋಗುವ ಯೂಟ್ಯೂಬರ್‌ ಕತೆ 'ಸೀಟ್‌ ಎಡ್ಜ್‌': ಟೀಸರ್‌ನಲ್ಲಿ ಅಂತದ್ದೇನಿದೆ?

ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಡೇಟಿಂಗ್ ಚರ್ಚೆಗೆ ಬರಲು ಕಾರಣ ಏನು? : ಸ್ಯಾಂಡಲ್ ವುಡ್ ಕ್ವೀನ್ ಎಂದೇ ಪ್ರಸಿದ್ದಿ ಪಡೆದಿರುವ ರಮ್ಯಾ ಸದ್ಯ ಸಿನಿಮಾದಿಂದ ದೂರವಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ. ಅವರು ಆಗಾಗ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಾ, ಅಭಿಮಾನಿಳಿಗೆ ಕನೆಕ್ಟ್ ಆಗಿದ್ದಾರೆ. ಈ ಮಧ್ಯೆ ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಫೋಟೋ ಶೂಟ್ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಅದಲ್ದೆ ವಿನಯ್ ರಾಜ್ ಕುಮಾರ್ ಜೊತೆ ಫಾರೆನ್ ಪ್ರವಾಸ ಕೈಗೊಂಡಿದ್ರು ರಮ್ಯಾ. ವಿನಯ್ ಜೊತೆ ಪುನಿತ್ ರಾಜ್ ಕುಮಾರ್ ಮಗಳು ವಂದಿತಾ ಕೂಡ ರಮ್ಯಾ ಜೊತೆ ಟ್ರಿಪ್ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ರಮ್ಯಾ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಲ್ಲ ಕಡೆ ರಮ್ಯಾ ಜೊತೆ ವಿನಯ್ ರಾಜ್ ಕುಮಾರ್ ನೋಡಿದ ಫ್ಯಾನ್ಸ್ ಗೆ ಅನುಮಾನ ಬಂದಿದೆ. ರಮ್ಯಾ ಹಾಗೂ ವಿನಯ್ ಮಧ್ಯೆ ಏನೋ ಇದೆ, ಇಬ್ಬರು ಡೇಟ್ ಮಾಡ್ತಿದ್ದಾರೆ ಅಂತ ಸುದ್ದಿ ಮಾಡಿದ್ದಾರೆ.

ನಟ ಪ್ರಥಮ್‌ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಗಳಾದ ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಬಂಧನ!

ರಮ್ಯಾ ಹಾಗೂ ರಾಜ್ ಕುಮಾರ್ ಕುಟುಂಬ ಮೊದಲಿನಿಂದಲೂ ಆಪ್ತವಾಗಿದೆ. ರಮ್ಯಾ, ಅಭಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಪುನೀತ್ ರಾಜ್ ಕುಮಾರ್ ಜೊತೆ ಮೊದಲ ಸಿನಿಮಾ ಮಾಡಿದ್ದ ರಮ್ಯಾ, ಅಲ್ಲಿಂದ್ಲೂ ರಾಜ್ ಕುಮಾರ್ ಫ್ಯಾಮಿಲಿಗೆ ಹತ್ತಿರವಾಗಿದ್ದಾರೆ. ಕೆಲ ದಿನಗಳ ಹಿಂದೆ ವಿನಯ್ ರಾಜ್ ಕುಮಾರ್ ಅಭಿನಯದ ಅಂದೊಂದಿತ್ತು ಕಾಲ ಸಿನಿಮಾ ತೆರೆಗೆ ಬಂದಿದೆ. ಈ ಸಿನಿಮಾಕ್ಕೆ ರಮ್ಯಾ ಶುಭ ಹಾರೈಸಿದ್ದರು. ರಮ್ಯಾ ಇನ್ನೂ ಸಿಂಗಲ್. ರಮ್ಯಾ ಹೆಸರಿನ ಜೊತೆ ಅನೇಕ ನಟರ ಹೆಸ್ರು ಮಾತ್ರವಲ್ಲ ರಾಹುಲ್ ಗಾಂಧಿ ಹೆಸರು ಕೂಡ ಥಳುಕು ಹಾಕಿಕೊಂಡಿದ್ದು, ರಮ್ಯಾ ಫಾರೆನ್ ಹುಡುಗನ ಕೈ ಹಿಡಿತಾರೆ ಎನ್ನುವ ಸುದ್ದಿ ಕೂಡ ಇತ್ತು.