Rocking star Yash : ಯಶ್, ಮಗಳ ಜೊತೆ ಹೆಣ್ಣು ಮಕ್ಕಳ ದಿನ ಆಚರಿಸಿದ್ದಾರೆ. ಐರಾ ಜೊತೆ ಇಂಗ್ಲೀಷ್ ಹಾಡೊಂದನ್ನು ಹಾಡಿದ್ದಾರೆ. ಅಪ್ಪ - ಮಗಳ ಬಾಂಧವ್ಯ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಪ್ಯಾನ್ ಇಂಡಿಯಾ ಸ್ಟಾರ್. ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ. ಸಿನಿಮಾ ಶೂಟಿಂಗ್ ಜೊತೆ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುವ ಯಶ್, ಫ್ಯಾಮಿಲಿ ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಇಬ್ಬರು ಮುದ್ದಾದ ಮಕ್ಕಳ ಜೊತೆ ಆಗಾಗ ಕಾಣಿಸಿಕೊಳ್ಳುವ ಯಶ್ ಕುಟುಂಬವನ್ನು ಫ್ಯಾನ್ಸ್ ಇಷ್ಟಪಡ್ತಾರೆ. ಈಗ ಯಶ್ ಹಾಗೂ ಮಗಳು ಐರಾ (Aira )ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಹಾಗೂ ಐರಾ ಹಾಡ್ತಾ, ಸ್ಟೆಪ್ಸ್ ಹಾಕೋದನ್ನು ಕಾಣ್ಬಹುದು. ನಿನ್ನೆ ಅಂದ್ರೆ ಸೆಪ್ಟೆಂಬರ್ 28 ಡಾಟರ್ ಡೇ. ಈ ವಿಶೇಷ ಸಂದರ್ಭದಲ್ಲಿ ಅಪ್ಪ – ಮಗಳ ಹಾಡನ್ನು ಇಬ್ಬರೂ ಹಾಡಿದ್ದಾರೆ.
ಮಗಳ ಜೊತೆ ಇಂಗ್ಲೀಷ್ ಹಾಡು ಹಾಡಿದ ಯಶ್ :
ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಐರಾ ಮೊದಲು ಹಾಡನ್ನು ಹಾಡ್ತಾಳೆ. ಅದನ್ನು ಯಶ್ ಸರಿ ಮಾಡ್ತಾರೆ. ನಂತ್ರ ಐರಾ, ಅಪ್ಪ ಹೇಳಿಕೊಟ್ಟ ಹಾಡನ್ನು ಹಾಡ್ತಾರೆ. ಮಗಳ ಹಾಡು ಕೇಳಿ ಖುಷಿಯಾಗುವ ಯಶ್, ಅವಳನ್ನು ಎತ್ತಿಕೊಂಡು ಮುದ್ದಾಡುತ್ತಾರೆ.
ಗಂಡ ಜೈದೇವ್ ಕಿವಿ ಊದಿದ ದಿಯಾ ಬೇಬಿ: ಸಂಸಾರ ಒಡೆಯೋದು ಅಂದ್ರೆ ಇದೇ ನೋಡಿ
ಕನ್ನಡ ಮರೀಬೇಡಿ ಎಂದು ಫ್ಯಾನ್ಸ್ :
ಯಶ್, ಈ ವಿಡಿಯೋದಲ್ಲಿ ಸಂಪೂರ್ಣ ಇಂಗ್ಲೀಷ್ ನಲ್ಲಿ ಮಾತನಾಡಿದ್ದಾರೆ. ಎಲ್ಲೋ ಒಂದು ಪದ ಕನ್ನಡದ್ದು ಕೇಳಿಸ್ತಿದೆ. ಅಪ್ಪ – ಮಗಳ ಬಾಂಧವ್ಯ, ಪ್ರೀತಿ ನೋಡಿ ಫ್ಯಾನ್ಸ್ ಖುಷಿಯಾದ್ರೂ, ಕನ್ನಡ ಹಾಡು ಕೇಳದೆ ಬೇಸರಗೊಂಡಿದ್ದಾರೆ. ಆದರೂ, ಯಶ್ ಅವರಿಗೆ ಕನ್ನಡದ ಮೇಲೆ ಯಾವತ್ತೂ ಪ್ರೀತಿ ಕಡಿಮೆಯಾಗೋಲ್ಲ ಎನ್ನುವುದನ್ನು ಅರಿತಿ ಅವರ ಅಭಿಮಾನಿಗಳು ಹೆಚ್ಚಿನ ಕೋಪವನ್ನೇನೂ ವ್ಯಕ್ತಪಡಿಸಿಲ್ಲ. ಈ ವಿಡಿಯೋಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೂರಾರು ಕಮೆಂಟ್ಸ್ ಬಂದಿವೆ. ಯಶ್ ಈ ವಿಡಿಯೋಕ್ಕೆ ಹೆಣ್ಣುಮಕ್ಕಳ ದಿನದ ಶುಭಾಶಯಗಳು, ನನ್ನ ಪುಟ್ಟ ಸೋಡಾ ಪಾಪ್..( Happy Daughter’s Day, my little soda pop.) ಅಂತ ಶೀರ್ಷಿಕೆ ಹಾಕಿದ್ದಾರೆ. ಕನ್ನಡ ಸಿನಿಮಾ ಮಾಡಿ, ದೊಡ್ಡ ಮಟ್ಟಕ್ಕೆ ಬೆಳೆದ ಬೆಳೆದ ಅಪ್ಪಟ ಕನ್ನಡ ನಟ ಯಶ್ ಬಗ್ಗೆ ಎಲ್ಲರಿಗೂ ಸಿಕ್ಕಾಪಟ್ಟೆ ಅಭಿಮಾನವಿದೆ. ಕನ್ನಡವನ್ನು ಉಳಿಸಿಕೊಂಡು ಹೋಗುವಂತೆ ಮಕ್ಕಳಿಗೂ ಕನ್ನಡ ಕಲಿಸುವ ಭರವಸೆ ಇದೆ.
BBK12: ಮೊದಲ ದಿನವೇ ಸ್ಪರ್ಧಿಗಳಿಗೆ ಭರ್ಜರಿ ಟ್ವಿಸ್ಟ್; ಓಪನ್ ಆಯ್ತು ಮುಖ್ಯದ್ವಾರ
ಮಕ್ಕಳ ಮೇಲೆ ಯಶ್ ಪ್ರೀತಿ :
ಕೆಜಿಎಫ್ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಯಶ್ ಮುಂದಿನ ಸಿನಿಮಾ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಗಿದೆ. ಸದ್ಯ ಯಶ್, ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ಎರಡೂ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಯಶ್ ಇಬ್ಬರು ಮಕ್ಕಳ ತಂದೆ. ಇಬ್ಬರು ಮಕ್ಕಳನ್ನು ಅತೀ ಪ್ರೀತಿಯಿಂದ ನೋಡಿಕೊಳ್ಳುವ ಅವರು, ಮಕ್ಕಳ ಜೊತೆ ಮಕ್ಕಳಂತಿರ್ತಾರೆ. ಐರಾಗೆ ಈಗ ಏಳು ವರ್ಷ ವಯಸ್ಸು. ಐರಾ ಡಿಸೆಂಬರ್ 2, 2018ರಂದು ಜನಿಸಿದ್ದಾಳೆ. ಇನ್ನು ಯಶ್ ಮಗ ಯಥರ್ವ್ ಗೆ ಆರು ವರ್ಷ ವಯಸ್ಸು.
