Brahmakalasha Song: ಕಾಂತಾರ ಚಾಪ್ಟರ್ 1' ಚಿತ್ರದ ಮೊದಲ ಲಿರಿಕಲ್ ಹಾಡು 'ಬ್ರಹ್ಮಕಳಶ' ಬಿಡುಗಡೆಯಾಗಿದೆ. ಕನ್ನಡ ಮತ್ತು ತುಳು ಭಾಷೆಯ ಸಂಗಮವಾಗಿರುವ ಈ ಭಕ್ತಿಭಾವದ ಹಾಡು, ಕೇಳುಗರಲ್ಲಿ ರೋಮಾಂಚನ ಉಂಟುಮಾಡುತ್ತಿದೆ.
ಬೆಂಗಳೂರು: ಕಾಂತಾರ ಚಾಪ್ಟರ್ 1ರ ಮೊದಲ ಲಿರಿಕಲ್ ಹಾಡಿನ ವಿಡಿಯೋ ಬಿಡುಗಡೆ ಮಾಡಿದೆ. ಗೊತ್ತಿಲ್ಲ ಶಿವನೇ ಅನ್ನುತ್ತಲೇ ಕರುನಾಡಿನ ತುಂಬಾ ಭಕ್ತಿಭಾವದ ಸುಧೆಯನ್ನು ಹಾಡು ಹರಿಸುತ್ತಿದೆ. ನಾದಸ್ವರದ ಜೊತೆಯಲ್ಲಿ ವೈಬ್ರಂಟ್ ಮ್ಯೂಸಿಕ್ ಜೊತೆ ಭಾವ ತುಂಬಿದ ಧ್ವನಿ ನಿಮ್ಮ ರೋಮ ರೋಮಗಳಲ್ಲಿ ರೋಮಾಂಚನವನ್ನು ಉಂಟುಮಾಡುತ್ತದೆ. ಬ್ರಹ್ಮಕಳಶ ಹಾಡು ಕನ್ನಡ ಮತ್ತು ತುಳು ಭಾಷೆಯ ಸಂಗಮವಾಗಿದ್ದು, ಕೇಳುಗರಿಗೆ ಹೊಸ ಅನುಭವವನ್ನು ನೀಡುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ ಸೇರಿದಂತೆ ದೊಡ್ಡ ತಾರಾಬಳಗವನ್ನು ಕಾಂತಾರ ಹೊಂದಿದೆ. ಕಾಂತಾರ ಚಾಪ್ಟರ್ 1 ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದೆ.
ಬ್ರಹಕಳಶದ ಸಂಗೀತ ತಂಡ ಹೀಗಿದೆ
ಸಂಗೀತ: ಅಜನೀಶ್ ಲೋಕನಾಥ್
ಗಾಯಕ: ಅಬ್ಬಿ ವಿ
ಸಾಹಿತ್ಯ: ಶಶಿರಾಜ್ ಕಾವೂರು
ನಾದಸ್ವರಂ: ಬಾಲ
ಲಯ: ಕಲ್ಯಾಣ ಚಕ್ರವರ್ತಿ
ಲೈವ್ ರಿದಮ್ಸ್: ಶ್ರುತಿ
ಹೆಚ್ಚುವರಿ ಸ್ಟ್ರಿಂಗ್ ವ್ಯವಸ್ಥೆಗಳು: ಸಂಜಯ್, ಬಾಲಸುಬ್ರಮಣಿಯಂ
ಗೊತ್ತುವಧ್ಯಂ : ದುರ್ಗಾ ಪ್ರಸಾದ
ಪಿಟೀಲು: ಎಂಬಾರ್ ಕಣ್ಣನ್ ಮತ್ತು ನಾರಾಯಣ ಶರ್ಮಾ
ಬಾಬಿ ಸಿ ಆರ್ ಸಂಗೀತ ನಿರ್ಮಾಣ, ಅಜನೀಶ್ ಲೋಕನಾಥ್ ಬಿ - ಎಬಿಬಿಎಸ್ ಸ್ಟುಡಿಯೋಸ್

