- Home
- Entertainment
- Sandalwood
- ಕಾಂತಾರ ಚಾಪ್ಟರ್ 1 ಬಿಡುಗಡೆಗೂ ಮುನ್ನ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ರಿಷಬ್ ಶೆಟ್ಟಿ ದಂಪತಿ
ಕಾಂತಾರ ಚಾಪ್ಟರ್ 1 ಬಿಡುಗಡೆಗೂ ಮುನ್ನ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ರಿಷಬ್ ಶೆಟ್ಟಿ ದಂಪತಿ
ಕಾಂತಾರ ಚಾಪ್ಟರ್ 1 ಅಬ್ಬರ ದೇಶದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿದೆ. ಸಿನಿಮಾ ಬಿಡುಗಡೆಗೂ ಕೆಲವೇ ದಿನಗಳು ಬಾಕಿ ಇವೆ. ಟ್ರೈಲರ್ ಬಿಡುಗಡೆಯಾದ ಸಂಭ್ರಮದ ನಡುವೆಯೇ ರಿಷಬ್ ಶೆಟ್ಟಿ -ಪ್ರಗತಿ ಶೆಟ್ಟಿ ಮಕ್ಕಳೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದರ್ಶನ ಪಡೆದಿದ್ದಾರೆ.

ಕಾಂತಾರ: ಚಾಪ್ಟರ್ 1
ʼಕಾಂತಾರ: ಚಾಪ್ಟರ್ 1' ಚಿತ್ರದ ಟ್ರೈಲರ್ ರಿಲೀಸ್ ಆಗಿ ದೇಶದೆಲ್ಲೆಡೆ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಿನಿಮಾ ಅಕ್ಟೋಬರ್ 2 ರಂದು ರಿಲೀಸ್ ಆಗಲಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿ, ಮೊದಲ ದಿನವೇ ದಾಖಲೆ ಟಿಕೆಟ್ ಮಾರಾಟವಾಗಿದೆ. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದು ಬಂದಿದ್ದಾರೆ.
ಕೊಲ್ಲೂರಿನಲ್ಲಿ ರಿಷಬ್ ದಂಪತಿಗಳು
ಈಗಾಗಲೇ ಕಾಂತಾರ ತಂಡ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದು, ಇದರ ಮಧ್ಯೆ ಚಿತ್ರದ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ದಂಪತಿ ಮಕ್ಕಳೊಂದಿಗೆ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ತಾಯಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ.
ದೈವ ಭಕ್ತ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ದೈವಭಕ್ತರಾಗಿದ್ದು, ಅವರು ಹೆಚ್ಚಾಗಿ ಕೊಲ್ಲೂರಿಗೆ ಭೇಟಿ ಕೊಡುತ್ತಿರುತ್ತಾರೆ. ಸಿನಿಮಾ ಶೂಟಿಂಗ್ ಸಮಯದಲ್ಲೂ ಕೂಡ ಭೇಟಿ ನೀಡಿದ್ದರು. ಇದೀಗ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ಒಮ್ಮೆ ಮೂಕಾಂಬಿಕಾ ದೇವಿಯ ಆಶೀರ್ವಾದವನ್ನು ಪಡೆದುಕೊಂಡು ಬಂದಿದ್ದರು. ಇದೀಗ ಮತ್ತೊಮ್ಮೆ ಭೇಟಿ ನೀಡಿದ್ದಾರೆ.
ಮೂಕಾಂಬಿಕಾ ಸನ್ನಿಧಿಯಲ್ಲಿ ಪೂಜೆ
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಮತ್ತು ಮಕ್ಕಳೊಂದಿಗೆ ಮುಕಾಂಬಿಕಾ ಸನ್ನಿಧಿಗೆ ತೆರಳಿ ಅಲ್ಲಿ ದೀಪ ಬೆಳಗಿ ಪೂಜೆ ಮಾಡಿ ಬಂದಿದ್ದಾರೆ. ಪ್ರಗತಿ ಶೆಟ್ಟಿ ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂತಾರ ಸಿನಿಮಾ ಕಾಸ್ಟ್ಯೂಮ್ ಡಿಸೈನರ್ ಆದ ಪ್ರಗತಿ
ಪ್ರಗತಿ ಶೆಟ್ಟಿ ʼಕಾಂತಾರ: ಚಾಪ್ಟರ್ 1ʼ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 4-5ನೇ ಶತಮಾನದಲ್ಲಿ ನಡೆಯುವ, ಕದಂಬ ರಾಜಾಡಳಿತ ಕಾಲದಲ್ಲಿ ಕರಾವಳಿಯಲ್ಲಿ ನಡೆಯುವ ಕಥೆ ಇದಾಗಿದೆ.
10 ಕೋಟಿ ರೂ. ವೆಚ್ಚದ ಅರಮನೆ ಸೆಟ್
2022ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು,. ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ಚಿತ್ರದ ಸೆಟ್ ನಿರ್ಮಿಸಿ ಸುಮಾರು 250 ದಿನಗಳ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಅರಮನೆ ಸೆಟ್ ಗಾಗಿಯೇ ಸುಮಾರು 10 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜೊತೆಗೆ ಕೆಲಸ ಮಾಡುವವರಿಗೆ 10 ಲಕ್ಷ ರೂ. ವಿಮೆಯನ್ನೂ ಮಾಡಿಸಲಾಗಿತ್ತು.
ಚಿತ್ರೀಕರಣ ನಡೆದಿದ್ದೆಲ್ಲಿ?
ಕಾಂತಾರ ಸಿನಿಮಾದ ಶೂಟಿಂಗ್ ಕೊಲ್ಲೂರು, ಕುಂದಾಪುರ, ಕೆರಾಡಿ, ತೀರ್ಥಹಳ್ಳಿ ಸುತ್ತಮುತ್ತಲಿನ ಕಾಡುಗಳಲ್ಲಿ, ಹಾಗೂ ಗ್ರಾಮಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ನಿಜವಾದ ಕಾಡಿನಲ್ಲಿ ಹಗಲು ರಾತ್ರಿ ಶೂಟಿಂಗ್ ಮಾಡಲಾಗಿದೆ.