auto drivers association ambassador Rachita Ram : ರಚಿತಾ ರಾಮ್ ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದಿದೆ. ರಚಿತಾ ರಾಮ್ ಗೆ ಈಗ ಹೊಸ ಜವಾಬ್ದಾರಿ ಸಿಕ್ಕಿದೆ. ರಚಿತಾ ರಾಮ್, ಆಟೋ ಚಾಲಕರ ಸಂಘದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ಆಟೋ ಚಾಲಕರ ಆರಾಧ್ಯ ದೈವ ಶಂಕರ್ ನಾಗ್ (Shankar Nag). ದಿವಂಗತ ನಟ ಶಂಕರ್ ನಾಗ್ ಅವರನ್ನು ದೇವರಂತೆ ಪೂಜೆ ಮಾಡುವ ಆಟೋ ಚಾಲಕರಿಗೆ ಈಗ ಹೊಸ ಸಾರಥಿ ಸಿಕ್ಕಿದ್ದಾರೆ. ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ (Rachita Ram) ಈಗ ಆಟೋ ಚಾಲಕರ ಸಂಘದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ರಚಿತಾ ರಾಮ್, ಹೊಸ ಜವಾಬ್ದಾರಿಯನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಖಾಕಿ ಬಟ್ಟೆ ಧರಿಸಿ ಆಟೋ ಮುಂದೆ ಫೋಸ್ ನೀಡಿದ ರಚಿತಾ ರಾಮ್, ಇದೇ ಮೊದಲ ಬಾರಿ ಆಟೋ ಓಡಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಆಟೋ ಸಾರಥಿಯಾಗಿ ರಚಿತಾ ರಾಮ್ :
ಬೆಂಗಳೂರಿನ ಆರ್. ಆರ್. ನಗರದಲ್ಲಿರುವ ರಚಿತಾ ರಾಮ್ ಮನೆ ಮುಂದೆ ಇಂದು ಆಟೋಗಳದ್ದೇ ದರ್ಬಾರು. ನೂರಾರು ಆಟೋ ಚಾಲಕರು ವಿಶೇಷವಾಗಿ ಮಹಿಳಾ ಆಟೋ ಚಾಲಕಿಯರು ರಚಿತಾ ರಾಮ್ ಮನೆಗೆ ಹೋಗಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಹೊಸ ಜವಾಬ್ದಾರಿಯನ್ನು ನೀಡಿದ್ರು. ಆಟೋ ಚಾಲಕರ ಪ್ರೀತಿಗೆ ಕರಗಿಹೋದ ರಚಿತಾ ರಾಮ್, ಚಪ್ಪಲಿ ತೆಗೆದು, ಖಾಕಿ ಬಟ್ಟೆಗೆ ನಮಸ್ಕಾರ ಮಾಡಿ ಅದನ್ನು ಧರಿಸಿದ್ದಲ್ಲದೆ ಆಟೋ ಹತ್ತಿ, ಆಟೋಗೆ ಕೈ ಮುಗಿದು, ಆಟೋ ಓಡಿಸುವ ಪ್ರಯತ್ನ ಮಾಡಿದ್ರು.
ರಾವಣನಿಗೆ ಚೂಪಾದ ಮೂಗು ಇರಬಾರದು, ಮೊಂಡಾಗಿರಬೇಕು; ಯಶ್ 'ರಾವಣ' ಪಾತ್ರದ ಬಗ್ಗೆ ಸದ್ಗುರು ಶಾಕ್!
ಆಟೋ ಚಾಲಕರ ಸಂಘಕ್ಕೆ ರಾಯಭಾರಿಯಾದ ಖುಷಿ :
ಸೋಶಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ಆಟೋ ಹತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ರಚಿತಾ ರಾಮ್, ಅತಿರಥ ಮಹಾರಥ ಸಾರಥಿಗಳಿಗೆ ನನ್ನ ನಮಸ್ಕಾರ. ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಇದು ನನಗೆ ಬಹಳ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ರಚಿತಾ ರಾಮ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ಸ್, ಮೆಚ್ಚುಗೆ ವ್ಯಕ್ತವಾಗಿದೆ.
ಸುಧಾರಾಣಿ ಬಹುದಿನದ ಕನಸು ನನಸು, ಸಿಕ್ತು ಗಾನಕೋಗಿಲೆ ಜಾನಕಿ ಆಶೀರ್ವಾದ
ಚಿತ್ರರಂಗದ ಬ್ಯುಸಿ ನಟಿ ರಚಿತಾ ರಾಮ್ :
ಸ್ಯಾಂಡಲ್ ವುಡ್ ಗುಳಿಕೆನ್ನೆ ಬೆಡಗಿ, ಬುಲ್ ಬುಲ್ ಎಂದೇ ಪ್ರಸಿದ್ಧಿ ಪಡೆದಿರುವ ರಚಿತಾ ರಾಮ್, ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ನಟಿ. ರಚಿತಾ ರಾಮ್ ಕೈನಲ್ಲಿ ಅನೇಕ ಚಿತ್ರಗಳಿವೆ. ಕೂಲಿ ಸಿನಿಮಾದಲ್ಲಿ ತಮ್ಮ ನಟನೆ ಮೂಲಕ ಲಕ್ಷಾಂತರ ಮಂದಿಯ ಗಮನ ಸೆಳೆದಿರುವ ರಚಿತಾ ರಾಮ್ ಇದೇ ಅಕ್ಟೋಬರ್ 3 ರಂದು ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಎರಡು ದಿನ ಮೊದಲೇ ತಾವು ಹುಟ್ಟುಹಬ್ಬಕ್ಕೆ ಮನೆಯಲ್ಲಿ ಲಭ್ಯ ಇರೋದಾಗಿ ರಚಿತಾ ರಾಮ್ ಹೇಳಿದ್ದರು. ಅದ್ರಂತೆ ಇಡೀ ದಿನ ಫ್ಯಾನ್ಸ್ ಜೊತೆ ಕಳೆದಿದ್ದರು. ಅಂದೇ ಅವರ ಅಭಿನಯದ ಲ್ಯಾಂಡ್ ಲಾರ್ಡ್ ಸಿನಿಮಾ ಕ್ಯಾರೆಕ್ಟರ್ ಟೀಸರ್ ಕೂಡ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರೌಡಿ ಪಾತ್ರದಲ್ಲಿ ರಚಿತಾ ರಾಮ್ ಮಿಂಚಲಿದ್ದಾರೆ. ಅಕ್ಟೋಬರ್ 15 ರಂದು ಹುಬ್ಬಳ್ಳಿಗೆ ತೆರಳಿ ಎಲ್ಲರನ್ನು ಹುಚ್ಚೆಬ್ಬಿಸಿದ್ದ ರಚಿತಾ ರಾಮ್, ಅಯೋಗ್ಯ 2 ಮೂಲಕ ಶೀಘ್ರವೇ ಥಿಯೇಟರ್ ಗೆ ಬರ್ತಿದ್ದಾರೆ. ಇದಲ್ದೆ ಕಲ್ಟ್ ಸಿನಿಮಾ ಮುಂದಿನ ವರ್ಷ ಜನವರಿ 23 ರಂದು ತೆರೆಗೆ ಬರಲಿದೆ.
ರಚಿತಾ ರಾಮ್ ಮದುವೆ ಯಾವಾಗ? :
ಮೂಗು ಚುಚ್ಚಿಸಿಕೊಂಡ ಫೋಟೋವನ್ನು ರಚಿತಾ ರಾಮ್ ಇನ್ಸ್ಟಾಗೆ ಪೋಸ್ಟ್ ಮಾಡ್ತಿದ್ದಂತೆ, ಮದುವೆ ಬಗ್ಗೆ ಚರ್ಚೆ ಎದ್ದಿತ್ತು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಚಿತಾ ರಾಮ್, ಶೀಘ್ರವೇ ಮದುವೆ ಆಗ್ತೇನೆ, ನಿಮ್ಮನ್ನು ಆಹ್ವಾನಿಸ್ತೇನೆ ಎಂದಿದ್ದಾರೆ.
