ಮಹಿಳೆಯರ ಟೆನ್ಷನ್ ಹೆಚ್ಚು ಮಾಡೋದು ಮತ್ತ್ಯಾರೂ ಅಲ್ಲ, ಗಂಡ. ಆತನ ಒಂದು ಕೆಲ್ಸವೇ ಹೆಂಡ್ತಿ ಒತ್ತಡವನ್ನು ಹೆಚ್ಚು ಮಾಡುತ್ತೆ. ಮಹಿಳೆ ಅತಿ ಹೆಚ್ಚು ಟೆನ್ಷನ್ ಆಗೋದು ಯಾವಾಗ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಬಿಡುವಿಲ್ಲದೆ ನಿರಂತರ ಕೆಲ್ಸ ಮಾಡುವಾಕೆ ಮಹಿಳೆ. ಗೃಹಿಣಿ (Housewife)ಯಾಗಿರಲಿ ಇಲ್ಲ ಕಚೇರಿಗೆ ಹೋಗ್ತಿರುವ ಮಹಿಳೆಯಾಗಿರಲಿ, ಪ್ರತಿಯೊಬ್ಬರೂ ವಿಶ್ರಾಂತಿ ಇಲ್ಲದೆ ಕೆಲ್ಸ ಮಾಡ್ತಾರೆ. ಆಫೀಸ್ ಗೆ ಹೋಗುವ ಮಹಿಳೆ ಕೆಲ್ಸವನ್ನು ನೀವು ಎರಡು ಶಿಫ್ಟ್ ರೀತಿಯಲ್ಲಿ ಡಿವೈಡ್ ಮಾಡ್ಬಹುದು. ಒಂದು ಆಫೀಸ್ ಕೆಲ್ಸ, ಮೀಟಿಂಗ್, ಟಾರ್ಗೆಟ್ ಗಳಾದ್ರೆ ಇನ್ನೊಂದು ಮಕ್ಕಳು, ಗಂಡ, ಅಡುಗೆ, ಕ್ಲೀನಿಂಗ್. ಕಚೇರಿಯ ಟೆನ್ಷನ್ ತಲೆ ಮೇಲೆ ಹೊತ್ತುಕೊಂಡೇ ಮನೆಗೆ ಬರುವ ಮಹಿಳೆಯನ್ನು ಗಂಡ ಕಾಯ್ದೆ ಹೋದ್ರೂ ಪೊರಕೆ, ಅಡುಗೆ ಮನೆ ಕಾಯ್ತಿರುತ್ತೆ. ಆದ್ರೆ ಈ ಎಲ್ಲ ಕೆಲ್ಸವನ್ನು ಮಹಿಳೆ ಒಬ್ಬಳೇ, ಆರಾಮವಾಗಿ ಮಾಡಬಲ್ಲಳು. ಆಕೆ ಟೆನ್ಷನ್ ಹೆಚ್ಚಾಗೋದು ಕೆಲ್ಸದಿಂದ ಅಲ್ವೇ ಅಲ್ಲ, ಬದಲಿಗೆ ಗಂಡನ ಈ ವರ್ತನೆಯಿಂದ ಎಂದಿದ್ದಾರೆ ಸಂಶೋಧಕರು.

ಮಹಿಳೆ ಟೆನ್ಷನ್ (tension) ಹೆಚ್ಚಾಗಲು ಕಾರಣ ಗಂಡನ ಈ ಕೆಲ್ಸ :

ಗಂಡ ಮನೆಯಲ್ಲಿದ್ರೆ ಯಾವ್ದೆ ಕೆಲ್ಸ ಆಗೋದಿಲ್ಲ ಅಂತ ಕೆಲ ಮಹಿಳೆಯರು ಹೇಳೋದನ್ನು ನೀವು ಕೇಳಿರ್ಬೇಕು. ಸಂಶೋಧನೆ ಕೂಡ ಇದನ್ನೇ ಹೇಳ್ತಿದೆ. ಸೋಫಾ ಇಲ್ಲ ಖುರ್ಚಿ ಮೇಲೆ ಕುಳಿತು, ಮೊಬೈಲ್ – ಟಿವಿಯಲ್ಲಿ ಮಗ್ನನಾಗಿರುವ ಪತಿಯೇ ಆಕೆಯ ಟೆನ್ಷನ್ ಡಬಲ್ ಆಗಲು ಕಾರಣ. ಹೆಂಡ್ತಿ ಒಂದು ಕಡೆಯಿಂದ ಮನೆ, ಮಕ್ಕಳ ಕೆಲ್ಸ ಮಾಡ್ತಿದ್ರೆ, ಗಂಡನಾದವನು ಆರಾಮವಾಗಿ ಕುಳಿತಿರ್ತಾನೆ. ಆಫೀಸ್ ನಲ್ಲಿ ಕೆಲ್ಸ ಮಾಡಿ ಬಂದಿರಲಿ ಇಲ್ಲ ಮನೆಯಲ್ಲಿ ನಿರಂತರ ಕೆಲ್ಸ ಮಾಡ್ತಿರಲಿ, ಆಕೆಗೆ ವಿಶ್ರಾಂತಿ ಸಿಗೋದಿಲ್ಲ. ಅದೇ ಕಚೇರಿಯಿಂದ ಬಂದ ಗಂಡನಿಗೆ ವಿಶ್ರಾಂತಿ ಅಗತ್ಯ. ಮನೆ ಕೊಳಕಾಗಿರಲಿ, ಮಕ್ಕಳ ಕಿರುಚಾಟ ಜೋರಾಗಿರಲಿ ಯಾವುದರ ಪರಿವೆಯೂ ಇಲ್ಲದೆ ಆತ ರೆಸ್ಟ್ ಮಾಡ್ತಿರುತ್ತಾರೆ. ಮನೆ ಕೆಲ್ಸದಲ್ಲಿ ಹೆಂಡ್ತಿಗೆ ಸಹಾಯ ಮಾಡೋದಿರಲಿ, ಮನೆಯಲ್ಲಿ ಏನು ನಡೀತಾ ಇದೆ, ನನ್ನಿಂದ ಏನು ಸಹಾಯ ಆಗ್ಬಹುದು ಎಂಬುದನ್ನು ಆಲೋಚನೆ ಕೂಡ ಮಾಡೋದಿಲ್ಲ. ಕೆಲ್ಸದ ಈ ಅಸಮತೋಲನ ಮಹಿಳೆ ಮಾನಸಿಕ ಸ್ಥಿತಿ ಮೇಲೆ ಪರಿಣಾಮಬೀರುತ್ತೆ.

ಹೆರಿಗೆಯ ಬಳಿಕ ಲೈಂ*ಗಿಕ ಕ್ರಿಯೆಗೆ ಎಷ್ಟು ದಿನ ಗ್ಯಾಪ್​ ಕೊಡಬೇಕು? ವೈದ್ಯೆಯ ಮಾತು ಕೇಳಿ

ಕೆಲ್ಸದ ಅಸಮತೋಲನ ಹಂಚಿಕೆ ಒತ್ತಡ ಹೆಚ್ಚು ಮಾಡುವ ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ. ಇದು ಸೋಮಾರಿತನದ ಬಗ್ಗೆ ಹೇಳೋದಿಲ್ಲ. ಇದು ಕೆಲ್ಸದ ಅಸಮತೋಲನವನ್ನು ವಿವರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಂಗಾತಿಯ ಕೆಲ್ಸದ ಸ್ಥಿತಿ ಬಗ್ಗೆ ತುಲನೆ ಮಾಡಿದಾಗ, ಗಂಡನಿಗಿಂತ ಹೆಂಡ್ತಿ ಡಬಲ್ ಕೆಲ್ಸ ಮಾಡಿರ್ತಾಳೆ. ಆರಾಮವಾಗಿ ಕುಳಿತಿರುವ ಗಂಡನನ್ನು ನೋಡಿ, ನನಗೆ ವಿಶ್ರಾಂತಿಯೇ ಇಲ್ವಾ, ಇನ್ನೆಷ್ಟು ಕೆಲ್ಸ ಇದೆ ಎನ್ನುವ ಲೆಕ್ಕಾಚಾರ, ನೋವು ಆಕೆಯ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.

'ಕಾಮ' ಅಲ್ವಂತೆ, ಈ ವಯಸ್ಸಿನಲ್ಲಿ ಮಹಿಳೆಯರು ಸಂಗಾತಿಗೆ ಮೋಸ ಮಾಡಲು ಕಾರಣ ಇದಂತೆ!

ಇತ್ತೀಚಿನ ದಿನಗಳಲ್ಲಿ ಕೆಲ ಕುಟುಂಬಗಳಲ್ಲಿ ಹಂಚಿಕೆ ಕೆಲ್ಸಕ್ಕೆ ಆಧ್ಯತೆ ನೀಡಲಾಗ್ತಿದೆ. ಬರೀ ಆಫೀಸ್ ಗೆ ಹೋಗುವವರು ಮಾತ್ರವಲ್ಲ ಮನೆಯಲ್ಲಿರುವ ಮಹಿಳೆಯರಿಗೂ ಸಾಕಷ್ಟು ಕೆಲ್ಸವಿರುತ್ತೆ ಎನ್ನುವ ಸತ್ಯ ಪುರುಷರಿಗೆ ತಿಳಿದಿರಬೇಕು. ಮನೆ ಕೆಲ್ಸದಲ್ಲಿ ಸಹಾಯ ಮಾಡುವ ಪತಿ ಇದ್ರೆ ಮಹಿಳೆಯ ಒತ್ತಡ ಹೆಚ್ಚು ಮಾಡುವ ಹಾರ್ಮೋನ್ ಬಿಡುಗಡೆ ಕಡಿಮೆಯಾಗುತ್ತದೆ. ನಿರಂತರ ಒತ್ತಡವು ನಿದ್ರಾ ಭಂಗ, ತೂಕ ಹೆಚ್ಚಾಗುವಿಕೆ ಮತ್ತು ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆಗಳಿಗೆ ಕಾರಣವಾಗಬಹುದು. ಸಂಬಂಧದಲ್ಲಿ ಅತೃಪ್ತಿ ಹೆಚ್ಚಾಗಬಹುದು. ನಾನೇ ಯಾಕೆ ಎಲ್ಲವನ್ನೂ ಮಾಡ್ಬೇಕು ಎನ್ನುವ ಪ್ರಶ್ನೆ ಮೂಡಬಹುದು.

ಟೆನ್ಷನ್ ಕಡಿಮೆ ಮಾಡಲು ಏನು ಮಾಡ್ಬೇಕು? : ಸಂಗಾತಿ ಜೊತೆ ಮಾತುಕತೆ ಬಹಳ ಮುಖ್ಯ. ಪತಿ – ಪತ್ನಿ ಇಬ್ಬರೂ ಮನೆ ಕೆಲ್ಸವನ್ನು ಹಂಚಿಕೊಳ್ಬೇಕು. ಮಹಿಳೆ ತನಗಾಗಿ ಪ್ರತಿ ದಿನ ಸ್ವಲ್ಪ ಸಮಯವನ್ನು ಮೀಸಲಿಡಬೇಕು ಎನ್ನುತ್ತಾರೆ ಸಂಶೋಧಕರು.