Wife And Boyfriend caught : ಅಂದಹಾಗೆ ಅಪಾರ್ಟ್‌ಮೆಂಟ್‌ನಲ್ಲಿರೋ ಗರ್ಲ್‌ಫ್ರೆಂಡ್ ಮೀಟ್ ಮಾಡಲು ಬಾಯ್‌ಫ್ರೆಂಡ್ ಬಂದಿದ್ದಾನೆ. ಅಲ್ಲಿಗೆ ಅವಳ ಗಂಡ ಕೂಡ ಎಂಟ್ರಿ ಕೊಟ್ಟ. ಆಮೇಲೆ ಏನಾಯ್ತು?
ಅಂದು ರಾತ್ರಿ, ಎಲ್ಲರೂ ಅವರವರ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಹೀಗಿರುವಾಗ ಓರ್ವ ಮಹಿಳೆ, ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಪ್ರಿಯಕರನ ಜೊತೆ ಏಕಾಂತದಲ್ಲಿ ಸಮಯ ಕಳೆಯುತ್ತಿದ್ದಳು. ಬಾಗಿಲು ಮುಚ್ಚಿದಿದ್ದರೂ, ಮನೆಯಲ್ಲಿ ಪ್ರೇಮದ ಮಾತುಗಳು ಪಿಸುದನಿಯಲ್ಲಿ ಕೇಳುತ್ತಿತ್ತು. ಇಬ್ಬರೂ ಕೆಲ ಸಮಯ ಒಂದಾಗಿ ಮಾತನಾಡುತ್ತ, ಪ್ರೀತಿ, ಹಾಸ್ಯ ತುಂಬಿದ ಕ್ಷಣಗಳನ್ನು ಕಳೆಯುತ್ತಿದ್ದರು. ಅದೇ ಸಮಯಕ್ಕೆ ಅವರ ಪ್ರಣಯದ ಸಮಯ ಹಾಳು ಮಾಡಲು ಓರ್ವ ಪುರುಷ ಅಕಾಸ್ಮಾತ್ ಆಗಿ ಬಾಗಿಲಿಗೆ ಬಂದುಬಿಟ್ಟ! ಅವನು ಬೇರೆ ಯಾರೂ ಅಲ್ಲ , ಆ ಮಹಿಳೆ ಗಂಡ!
ಡೋರ್ ಬೆಲ್ ರಿಂಗಣಿಸಿತು, ಪ್ರೇಮ-ಪ್ರಣಯ ಎಂದು ಮೈಮರೆತಿದ್ದವರು ಗಾಬರಿಬಿದ್ದರು. ಇಬ್ಬರಿಗೂ ಆತಂಕ, ಏನು ಮಾಡಬೇಕು ಎಂದು ಗೊತ್ತಾಗದ ಸ್ಥಿತಿ. ಮುಖ್ಯದ್ವಾರದಲ್ಲಿ ಪತಿ, ಮನೆಯೊಳಗಡೆ ಬಾಯ್‌ಫ್ರೆಂಡ್, ಆ ಮಹಿಳೆಗೆ ಏನು ಮಾಡೋದು ಎಂದು ಗೊತ್ತಾಗ್ತಿಲ್ಲ. ಇಷ್ಟುಕಾಲ ಖುಷಿಯಿಂದಿದ್ದ ಈ ಜೋಡಿಗೆ ಈಗ ನಡುಕ ಶುರುವಾಗಿದೆ. ಬಾಗಿಲು ತೆಗೆಯದೆ ಏನು ಮಾಡುತ್ತಿದ್ದಾಳೆ ಎಂದು ಹೊರಗಡೆ ಇರೋ ಪತಿಗೆ ಚಿಂತೆ ಶುರುವಾಗಿದೆ. ಕೊನೆಗೂ ಬಾಯ್‌ಫ್ರೆಂಡ್ ಬಂದಿರೋದು ಪತಿಗೆ ಗೊತ್ತಾಗಿದೆ. ಆಗ ಆ ಬಾಯ್‌ಫ್ರೆಂಡ್ ಅರೆನಗ್ನ ಸ್ಥಿತಿಯಲ್ಲಿ ಬಾಲ್ಕನಿಗೆ ಹಾರಿದ್ದಾನೆ. ಅಲ್ಲಿ ಅವನು ಹೊರಗಡೆ ಹೋಗಲು ನೋಡಿದ್ದರೂ ಕೂಡ, ಅಪಾರ್ಟ್‌ಮೆಂಟ್‌ನಲ್ಲಿರುವ ಜನರೆಲ್ಲರೂ ಹೊರಗಡೆ ಬಂದು ಆ ವ್ಯಕ್ತಿಯನ್ನು ಹೊಡೆಯಲು ನೋಡಿದ್ದಾರೆ. ಎಲ್ಲರಿಂದ ಅವನು ತಪ್ಪಿಸಿಕೊಳ್ಳಲು ನೋಡಿದ್ದಾನೆ. ಕೆಲವರು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕೆಲವರಿಗೆ ಈ ವಿಡಿಯೋ ನಗು ತಂದರೆ, ಇನ್ನೂ ಕೆಲವರಿಗೆ ಮದುವೆಯಾಗಿರೋ ಪತ್ನಿ ಮಾಡಿದ ಮೋಸ ಆಕ್ರೋಶ ತಂದಿದೆ. ಇನ್ನೂ ಕೆಲವರಿಗೆ ಆ ಪಾಪದ ಗಂಡನ ಬಗ್ಗೆ ಚಿಂತೆಯಾಗಿದೆ. ಸಮಾಜದಲ್ಲಿ ಈ ರೀತಿಯ ಘಟನೆಗಳು ನಿಜಕ್ಕೂ ಸಂಸ್ಕಾರ, ನೈತಿಕತೆ, ವೈವಾಹಿಕ ಜೀವನದ ನಂಬಿಕೆಗಳ ಭಂಗ ಎನ್ನುವುದಕ್ಕೆ ಉದಾಹರಣೆಯಾಗಿದೆ. ಈ ರೀತಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾ ಎನ್ನೋದು ವೈಯಕ್ತಿಕ ಜೀವನದ ಗೌಪ್ಯತೆಗೆ ಧಕ್ಕೆ ತರಲು ಬಳಕೆಯಾಗಿದೆ ಎನ್ನೋದು ಬೇಸರದ ವಿಷಯ.
ಅಂದಹಾಗೆ ಈ ಘಟನೆ ಎಲ್ಲಿ ಆಗಿದೆ? ಆ ಪುರುಷ ಯಾರು? ಏನು ಎನ್ನುವ ಕುರಿತು ಮಾಹಿತಿ ಲಭ್ಯವಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ.
