ಪ್ರೀತಿಗೆ ವಯಸ್ಸಿನ ಅಂತ್ರ ಗೊತ್ತಿಲ್ಲ, ಪ್ರೀತಿ ಕುರುಡು ಅನ್ನೋದು ಬರೀ ಬಾಯಿ ಮಾತಿಗಲ್ಲ. ಈಗಿನ ದಿನಗಳಲ್ಲಿ ಹಿರಿಯರ ಮೇಲೆ ಯುವಕರ ಮನಸ್ಸು ಜಾರ್ತಿದೆ. ಇದಕ್ಕೆ ಮನಿ ಕಾರಣವಾ, ಮನಸ್ಸಾ ನೀವೇ ನಿರ್ಧರಿಸಿ. 

ಅವಳಿಗೆ ಮೊದಲ ಭೇಟಿಯಲ್ಲೇ ಅವನ ಮೇಲೆ ಪ್ರೀತಿ ಚಿಗುರಿತ್ತು. ಆತ ಕೂಡ ಆಕೆಗೆ ಆಕರ್ಷಿತನಾಗಿದ್ದ. ಆದ್ರೆ ಇಬ್ಬರ ಮಧ್ಯೆ ಬಂದಿದ್ದು ವಯಸ್ಸು. ಆರಂಭದಲ್ಲಿ ಸಮಾಜ ಏನು ಹೇಳುತ್ತೋ ಅಂತ ಹೆದರಿದ್ದ ಇಬ್ಬರು ಈಗ ಒಟ್ಟಿಗೆ ಜೀವನ ನಡೆಸ್ತಿದ್ದಾರೆ. ಇಬ್ಬರ ಮಧ್ಯೆ ಬರೋಬ್ಬರಿ 60 ವರ್ಷಗಳ ಅಂತರವಿದೆ. ಎರಡು ಮದುವೆ (marriage)ಯಾಗಿ ವಿಚ್ಛೇದನ ಪಡೆದು ಒಂಟಿಯಾಗಿ ವಾಸ ಮಾಡ್ತಿದ್ದ 83 ವರ್ಷದ ಮಹಿಳೆಗೆ 23 ವರ್ಷದ ಯುವಕನ ಮೇಲೆ ಪ್ರೀತಿಯಾಗಿದೆ. ಇಂಟರ್ವ್ಯೂ ಒಂದರಲ್ಲಿ ಇಬ್ಬರು ತಮ್ಮ ಪ್ರೀತಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡ್ತಿದೆ.

ಇಳಿ ವಯಸ್ಸಿನಲ್ಲಿ ಅರಳಿದ ಪ್ರೀತಿ (love) : ಇದು ಜಪಾನ್ ಜೋಡಿಯ ಪ್ರೇಮ ಕಥೆ. 23 ವರ್ಷದ ಕೋಫು ಪ್ರೀತಿಗೆ ಬಿದ್ದಿದ್ದು 83 ರ ಅಜ್ಜಿ ಐಕೊ. ಇಬ್ಬರು ಆರು ತಿಂಗಳಿಂದ ಒಟ್ಟಿಗೆ ವಾಸ ಮಾಡ್ತಿದ್ದಾರೆ. ಇಲ್ಲಿ ಆಗಿದ್ದು ಲವ್ ಅಟ್ ಫಸ್ಟ್ ಸೈಟ್. ಈಗ ಅಜ್ಜಿಗೆ ಹಲ್ಲುಜ್ಜೋದ್ರಿಂದ ಎಲ್ಲ ಕೆಲ್ಸಕ್ಕೆ ಕೋಫು ನೆರವಾಗ್ತಾನೆ. ಕೋಪು ಸೌಮ್ಯ ಸ್ವಭಾವವೇ ಐಕೊ ಮನಸ್ಸು ಗೆದ್ದಿದೆ. ಈಗಿನ ಜನರೇಷನ್ ಸಂಪೂರ್ಣ ಭಿನ್ನವಾಗಿ ಆಲೋಚನೆ ಮಾಡುತ್ತೆ. ಜೆನ್ ಜೀ ಏನು ಬಯಸ್ತಾರೆ ಹೇಳೋದು ಕಷ್ಟ. ಮಗ ಕೋಫು ಪ್ರೀತಿಯನ್ನು ಇಡೀ ಕುಟುಂಬ ಒಪ್ಪಿಕೊಂಡಿದೆ. ಐಕೊ ಕುಟುಂಬ ಕೂಡ ಇಬ್ಬರ ಪ್ರೀತಿಗೆ ಒಪ್ಪಿಗೆ ಮುದ್ರೆ ನೀಡಿದೆ.

Pitru Paksha 2025: ಮದುವೆಯಾದವ್ರು ಪಿತೃ ಪಕ್ಷದಲ್ಲಿ ಈ ತಪ್ಪು ಮಾಡ್ಲೇಬೇಡಿ! ಆಮೇಲೆ

ಐಕೊ ಯಾರು? : 83ರ ಅಜ್ಜಿ ಐಕೊ ತೋಟಗಾರಿಕೆಯಲ್ಲಿ ಅನುಭವ ಹೊಂದಿದ್ದಾಳೆ. ಬಟಾನಿಕಲ್ ಗಾರ್ಡನ್ ಕೂಡ ಇತ್ತು. ಐಕೊ ಎರಡು ಬಾರಿ ಮದುವೆಯಾಗಿದ್ದು, ಒಬ್ಬ ಮಗ ಹಾಗೂ ಮಗಳನ್ನು ಹೊಂದಿದ್ದು, ಐದು ಮೊಮ್ಮಕ್ಕಳಿದ್ದಾರೆ. ಐಕೊ ವಿಚ್ಛೇದನದ ನಂತ್ರ ಮಗನ ಮನೆಯಲ್ಲಿ ವಾಸ ಮಾಡ್ತಿದ್ದಾಳೆ. ಐಕೊ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸ್ತಾಳೆ. ಉತ್ತಮ ಲೈಫ್ ಸ್ಟೈಲ್ ಫಾಲೋ ಮಾಡ್ತಿರುವ ಐಕೊ, ವಯಸ್ಸಿಗಿಂತ ಹೆಚ್ಚು ಯಂಗ್ ಕಾಣುವ ಬಟ್ಟೆ ಧರಿಸ್ತಾಳೆ. ಕೂದಲಿಗೆ ಬಣ್ಣ, ನೇಲ್ ಪಾಲಿಶ್ ಸೇರಿದಂತೆ ಸೌಂದರ್ಯ ಹೆಚ್ಚಿಸುವ ಬ್ಯೂಟಿ ಪ್ರಾಡಕ್ಟ್ ಬಳಸ್ತಾಳೆ.

ಏನು ಮಾಡ್ತಿದ್ದಾನೆ ಕೋಫು? : ಐಕೊ ಪ್ರೀತಿಯಲ್ಲಿರುವ ಕೋಫು, ಪದವಿ ಮುಗಿಸಿದ್ದು, ಕ್ರಿಯೆಟಿವ್ ಡಿಸೈನ್ ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದಾನೆ. ಐಕೊ, ಮೊಮ್ಮಗಳ ಕ್ಲಾಸ್ಮೆಟ್ ಕೋಫು. ಸ್ನೇಹಿತೆ ಭೇಟಿಗೆ ಆಕೆ ಮನೆಗೆ ಬಂದಾಗ ಮೊದಲ ಭೇಟಿಯಾಗಿತ್ತು.

26ರ ಯುವತಿಯ ಫೇಸ್‌ಬುಕ್ ಪ್ರೀತಿ ಅರಸಿ ಅಸ್ಸಾಂಗೆ ಹೋದ ವೃದ್ಧನಿಗೆ ಆಘಾತ

ಇಬ್ಬರ ಪ್ರೀತಿ ಶುರುವಾಗಿದ್ದು ಎಲ್ಲಿಂದ? : ಐಕೋಳನ್ನು ಮೊದಲ ಬಾರಿ ನೋಡ್ತಿದ್ದಂಗೆ ಕೋಫು ಆಕರ್ಷಿತನಾಗಿದ್ನಂತೆ. ಐಕೋ ಕೂಡ ಕೋಫುನನ್ನು ಪ್ರೀತಿಸಲು ಶುರು ಮಾಡಿದ್ದಳಂತೆ. ಕೋಫು ತುಂಬಾ ಸೌಮ್ಯ ಸ್ವಭಾವದವನು. ಇಂಥ ಉತ್ಸಾಹಿ ಯುವಕನನ್ನು ನಾನು ಎಂದೂ ನೋಡಿರಲಿಲ್ಲ ಅಂತಾಳೆ ಐಕೋ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಇರೋದ್ರಿಂದ ಇಬ್ಬರೂ ಭಾವನೆ ಹಂಚಿಕೊಂಡಿರಲಿಲ್ಲ. ಡಿಸ್ನಿಲ್ಯಾಂಡ್ ಟ್ರಿಪ್ ಟೈಂನಲ್ಲಿ,ಐಕೊಳ ಮೊಮ್ಮಗಳ ಗೈರು ಹಾಜರಿಯಿಂದ ಐಕೊ ಮತ್ತು ಕೋಫು ಒಟ್ಟಿಗೆ ಇರುವಂತಾಯ್ತು. ಸಂಜೆ ಸಿಂಡರೆಲ್ಲಾ ಕ್ಯಾಸಲ್ನಲ್ಲಿ ಒಟ್ಟಿಗಿದ್ದರು. ಅಲ್ಲಿ ಕೋಫು ಸೂರ್ಯಾಸ್ತದ ಸಮಯದಲ್ಲಿ ತನ್ನ ಪ್ರೀತಿ ಹೇಳಿದ್ದ. ಐಕೋ ಪ್ರೀತಿ ಒಪ್ಪಿಕೊಂಡ್ಳು. ಅಲ್ಲಿಂದ ಇಬ್ಬರೂ ಒಟ್ಟಿಗಿದ್ದೇವೆ ಎಂದು ಐಕೊ ಹೇಳಿದ್ದಾಳೆ.