Funny Wedding Video: ಸ್ನೇಹಿತರ ಉಪಸ್ಥಿತಿ ಮದುವೆಯಂತಹ ಕ್ಷಣಗಳನ್ನು ಅವಿಸ್ಮರಣೀಯವಾಗಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಸ್ನೇಹಿತರು ವಧುವಿನಂತೆ ವೇಷ ಧರಿಸಿ ಮದುಮಗನಿಗೆ ತಮಾಷೆ ಮಾಡಿದ್ದಾರೆ. ಈ ವೀಡಿಯೋ ಭಾರಿ ವೈರಲ್ ಆಗಿದೆ.

ಮದುವೆ ದಿನ ವರನ ಸ್ನೇಹಿತರ ಕಿತಾಪತಿ

ಎಲ್ಲಿ ಒಳ್ಳೆಯ ಸ್ನೇಹಿತ/ಸ್ನೇಹಿತೆಯರಿರುತ್ತಾರೋ ಅಲ್ಲಿ ಸದಾ ಖುಷಿ ನೆಲೆಸಿರುತ್ತದೆ. ನಮ್ಮ ಬದುಕಿನ ಯಾವುದೇ ಕ್ಷಣಗಳಿರಬಹುದು, ಸ್ನೇಹಿತರ ಉಪಸ್ಥಿತಿಯಿಂದ ಅದಕ್ಕೊಂದು ಹೊಸ ಕಳೆ ಬರುತ್ತದೆ. ಅದರಲ್ಲೂ ನಮ್ಮ ಬದುಕಿನ ಅತ್ಯಂತ ಅವಿಸ್ಮರಣೀಯವೆನಿಸುವ ಕೆಲ ಕ್ಷಣಗಳಲ್ಲಿ ಅವರ ಉಪಸ್ಥಿತಿ ನಮ್ಮ ನೆನಪಿನ ಯಾನಕ್ಕೆ ಇನ್ನಷ್ಟು ಖುಷಿ ಬುಗ್ಗೆಯನ್ನು ಸೇರಿಸುತ್ತದೆ. ಸ್ನೇಹಿತರು/ಸ್ನೇಹಿತೆಯರು ನಮ್ಮ ಬದುಕಿನ ಕೆಲ ಕ್ಷಣಗಳನ್ನು ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಾರೆ. ಅದರಲ್ಲೂ ಮದುವೆಯ ದಿನ ಸ್ನೇಹಿತರು ಇದ್ದರೆ ಆ ಕ್ಷಣಗಳ ಖುಷಿಯೇ ಬೇರೆ. ನಮ್ಮೆಲ್ಲರ ರಿಯಲ್‌ ಮುಖಗಳು ನಮ್ಮ ಬದುಕಿನಲ್ಲಿ ನಡೆದ ಘಟನೆಗಳು ನಮ್ಮ ವರ್ತನೆಗಳು ನಮ್ಮ ಪೋಷಕರಿಗಿಂತ ಸ್ನೇಹಿತ ಸ್ನೇಹಿತೆಯರಿಗೆ ಚೆನ್ನಾಗಿ ತಿಳಿದಿರುವುದರಿಂದ ಅವರ ಮುಂದೆ ನಾಚಿಕೆ ಮುಜುಗರ ಯಾವುದು ಇರುವುದಿಲ್ಲ. ಅದರಲ್ಲೂ ಸ್ನೇಹಿತರ ಗುಂಪಿನಲ್ಲೊಬ್ಬ ಮದ್ವೆಯಾಗ್ತಿದ್ದಾನೆ ಎಂದರೆ ಅವರ ಕಾಲೆಳೆದೇ ಸ್ನೇಹಿತರು ಸಾಕುಬೇಕು ಮಾಡ್ತಿರ್ತಾರೆ. ಮದ್ವೆ ಮನೆಯಿಂದ ಹಿಡಿದು ಮೊದಲರಾತ್ರಿಯ ಕೋಣೆ ತಲುಪುವವರೆಗೂ ಸ್ನೇಹಿತರು ಕಾಡಿಸುತ್ತಲೇ ಇರುತ್ತಾರೆ ಅದೇ ರೀತಿ ಸ್ನೇಹಿತರು ತಮ್ಮ ಮದುವೆಯಾಗುವ ವರನಿಗೆ ವಧುವಿನಂತೆ ವೇಷ ಹಾಕಿ ಕಾಡಿಸಿದ್ದ ರೀತಿಯ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.

ಇದು ಹಳೆಯ ವೀಡಿಯೋ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ವೀಡಿಯೋದಲ್ಲಿ ಹಲವು ಮದುವೆಗಳ ದಿನದ ತಮಾಷೆಯ ಕ್ಷಣವನ್ನು ಒಟ್ಟಿಗೆ ಸಂಯೋಜಿಸಿ ನೀಡಲಾಗಿದ್ದು, ವೀಡಿಯೋ ನೋಡಿದರೆ ನೀವು ನಕ್ಕು ನಗುವಿರಿ. alexandermariafassbender ಎಂಬುವವರು ಇನ್ಸ್ಟಾದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನನಗೆ ಈ ಐಡಿಯಾ ಇಷ್ಟವಾಯಿತು. ಮುಖಗಳು ಮತ್ತು ಪ್ರತಿಕ್ರಿಯೆಗಳು ಅದ್ಭುತವಾಗಿವೆ ಎಂದು ನಾನು ಭಾವಿಸುತ್ತೇನೆ. ಹಿನ್ನೆಲೆ ಇಲ್ಲದೆ, ಜೀವನದ ಶುದ್ಧ ಸಂತೋಷ ಮಾತ್ರ ಎಂದು ಅವರು ಬರೆದಿದ್ದಾರೆ.

ವೀಡಿಯೋದಲ್ಲಿ ಏನಿದೆ?

ಇದರಲ್ಲಿ ರೆಡಿಯಾಗಿ ನಿಂತು ವಧುವಿಗಾಗಿ ಕಾಯುತ್ತಿರುವ ವರರ ವೀಡಿಯೋ ಇದಾಗಿದೆ. ಆದರೆ ಹೀಗೆ ಕಾಯುತ್ತಿರುವ ವರನಿಗೆ ಅವರ ಸ್ನೇಹಿತರೇ ವಧುವಿನಂತೆ ಬಂದು ಶಾಕ್ ನೀಡಿದ್ದಾರೆ. ಬಹುತೇಕ ಒಬ್ಬೊಬ್ಬರ ರಿಯಾಕ್ಷನ್ ಕೂಡ ಇಲ್ಲಿ ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ವಧು ಬರ್ತಾಳೆ ಅಂದ್ರೆ ವರ ಮಾಮೂಲಿಯಂತೆ ಇರಲು ಸಾಧ್ಯ ಇಲ್ಲ ನೋಡಿ, ಸ್ನೇಹಿತರ ಜೊತೆ ಹೇಗೆ ಬೇಕಾದರೂ ಇರಬಹುದು. ಆದ್ರೆ ತಮ್ಮ ಬಗ್ಗೆ ಹೆಚ್ಚೇನು ತಿಳಿಯದ ವಧುವಿನ ಮುಂದೆ ಕೋತಿಯಂತೆ ವರ್ತಿಸಿದರೆ ಅವರು ಮದ್ವೆಯನ್ನೇ ಮುರಿದು ಬಿಡಬಹುದು. ಅದಕ್ಕಿಂತಲೂ ಹೆಚ್ಚು ಆಕೆಯನ್ನು ಇಂಪ್ರೆಸ್ ಮಾಡಬೇಕು ಅನ್ನೋ ಮನಸ್ಥಿತಿಯಲ್ಲಿ ವರ ಇರ್ತಾನೆ. ಅದೇ ರೀತಿ ಇಲ್ಲಿ ವಧು ಬರ್ತಾಳೆ ಅಂತ ಕೆಲವರು ಕಣ್ಣು ಮುಚ್ಚಿ ನಿಂತಿದ್ದರೆ ಮತ್ತೆ ಕೆಲವರು ಪೂರ್ತಿ ನಾಚಿ ನೀರಾಗಿ ಕಷ್ಟಪಟ್ಟು ವಧು ಎಂದು ತಲೆ ಎತ್ತಿ ನೋಡಿದಾಗ ಅಲ್ಲಿ ವಧುವಿನ ಬದಲು ತಮ್ಮದೇ ಚಡ್ಡಿದೋಸ್ತ್ ಗೆಳೆಯನನ್ನು ಕಂಡು ಶಾಕ್ ಆಗುವುದಲ್ಲದೇ ಬಿದ್ದು ಬಿದ್ದು ನಗುವುದಕ್ಕೆ ಶುರು ಮಾಡುತ್ತಾರೆ.

ವಧುವಿನಂತೆ ವೇಷ ಧರಿಸಿ ಕಚಗುಳಿ ಇಟ್ಟ ಸ್ನೇಹಿತರು

ಹಾಗಂತ ವರರ ಸ್ನೇಹಿತರು ಏನೂ ಕಡಿಮೆ ಇಲ್ಲ, ಸುಮ್ಮನೆ ಹಿಂದೆ ತಿರುಗಿ ನಿಂತ ವರನ, ಹೆಣ್ಣಿನಂತೆ ಮೆಲ್ಲನೇ ಟಚ್ ಮಾಡೋದು, ಮುತ್ತು ಕೊಡಲು ಹೋಗುವುದು, ಅಸಭ್ಯವಾಗಿ ಬ್ಯಾಕ್ ಟಚ್‌ ಮಾಡುವುದು ಹೀಗೆ ಇಲ್ಲಿ ಏನೇನೋ ಮಾಡುತ್ತಾರೆ. ಇದಕ್ಕೆ ಎಲ್ಲಾ ವರರು ವಿಭಿನ್ನ ರಿಯಾಕ್ಷನ್ ನೀಡಿದ್ದು, ಒಬ್ಬೊಬ್ಬರ ರಿಯಾಕ್ಷನ್ ನಿಮ್ಮನ್ನು ನಗೆಗಡಲಲ್ಲಿ ತೇಲಿಸುತ್ತದೆ. ಇದೊಂದು ಕ್ರಿಶ್ಚಿಯನ್ ಶೈಲಿಯ ಮದ್ವೆ ವೀಡಿಯೋ ಆಗಿದ್ದು, ಬಹುತೇಕ ಸ್ನೇಹಿತರು ತಮ್ಮ ಮದ್ವೆಯಾಗುವ ಗೆಳೆಯನನ್ನು ಕಾಡಿಸುವುದಕ್ಕಾಗಿ ವಧುವಿನ ವೇಷ ಧರಿಸಿ ಆತನಿಗೆ ಕಚಗುಳಿ ಇಟ್ಟಿದ್ದಾರೆ. ಸ್ನೇಹಿತ ವಧುವಿನಂತೆ ಗವನ್ ಧರಿಸಿ ನಿಂತಿದ್ದನ್ನು ನೋಡಿ ವರ ಒಂದು ಕ್ಷಣ ಶಾಕ್ ಆದರೂ ನಂತರ ಕಂಟ್ರೋಲ್ ಮಾಡಲಾಗದಂತೆ ಬಿದ್ದು ಬಿದ್ದು ನಗೋದನ್ನು ವೀಡಿಯೋದಲ್ಲಿ ಕಾಣಬಹುದು. ಮತ್ತೆ ಕೆಲವರು ನಗುತ್ತಲೇ ಆ ಜಾಗದಿಂದ ಓಡಿ ಹೋಗಿದ್ದಾರೆ. ಈ ವೀಡಿಯೋ ನೋಡುವುದಕ್ಕೆ ಬಹಳ ಮಜವಾಗಿದೆ. ನೀವು ನೋಡಿ ನಿಮಗೆ ಹೇಗನಿಸಿತು ಅಂತ ಕಾಮೆಂಟ್ ಮಾಡಿ...

ಇಲ್ಲಿದೆ ನೋಡಿ ವೈರಲ್ ವೀಡಿಯೋ

View post on Instagram

ಇದನ್ನೂ ಓದಿ: ವರನ ಒಂದು ನಗುವಿಗೆ ಮುರಿದುಬಿತ್ತು ಮದುವೆ: ಮದ್ವೆ ಮನೇಲಿ ನಡೆದಿದ್ದೇನು?
ಇದನ್ನೂ ಓದಿ: ಒಂದು ಯುಟ್ಯೂಬ್ ರೀಲ್ಸ್‌ಗೆ ಸಿಗೋ ಹಣ ಇಷ್ಟೊಂದಾ: ಸಂಪಾದನೆ ರೀವಿಲ್ ಮಾಡಿದ ಯುಟ್ಯೂಬರ್ ಗಾಯಕ ಗಣೇಶ್ ಕಾರಂತ್