Love Story : ಯುವತಿಯೊಬ್ಬಳ ಲವ್ ಸ್ಟೋರಿ ಸದ್ಯ ಸುದ್ದಿಯಲ್ಲಿದೆ. 25 ವರ್ಷದ ಹುಡುಗಿ 76 ವರ್ಷದ ಅಜ್ಜನ ಕೈ ಹಿಡಿದಿದ್ದಾಳೆ.
ಶುಗರ್ ಡ್ಯಾಡಿ (Sugar daddy) ಜಮಾನಾ ಇದು. ಕಡಿಮೆ ವಯಸ್ಸಿನ ಯುವತಿಯರಿಗೆ ಅಜ್ಜಂದಿರು ಇಷ್ಟ ಆಗ್ತಿದ್ದಾರೆ. ಅವ್ರೇ ನಮ್ಮ ಸರ್ವಸ್ವ ಅಂತ ಅವ್ರ ಜೊತೆ ಜೀವನ ನಡೆಸೋಕೆ ಮುಂದೆ ಬರ್ತಿದ್ದಾರೆ. ಹುಡುಗಿಯರ ಈ ವರ್ತನೆ ನೋಡಿ ಕೆಲವರು ಹುಚ್ಚು ಅಂದ್ರೆ ಮತ್ತೆ ಕೆಲವರು ಈಗ ಕಾಲ ಬದಲಾಗಿದೆ, ಹುಡುಗಿಯರು ಅವ್ರಿಷ್ಟದಂತೆ ಬದುಕ್ತಿದ್ದಾರೆ, ಬದುಕ್ಲಿ ಬಿಡಿ ಅಂತ ಸುಮ್ಮನಾಗ್ತಿದ್ದಾರೆ. ಅಷ್ಟಕ್ಕೂ ಈ ವಿಷ್ಯ ಈಗ ಏಕೆ ಬಂತು ಅಂದ್ರೆ 25 ವರ್ಷದ ಯುವತಿಗೆ 76 ವರ್ಷ ಅಜ್ಜನ ಮೇಲೆ ಪ್ರೀತಿಯಾಗಿದೆ. ತಾವಿಬ್ಬರೂ ಒಂದಾಗಿ ಜೀವನ ಮಾಡ್ತಿದ್ದೇವೆ, ಲೈಫ್ ಖುಷಿಯಾಗಿದೆ ಅಂತ ಹುಡುಗಿ ಹೇಳಿದ್ದಾಳೆ.
ಇದು ಸ್ಯಾನ್ ಡಿಯಾಗೋದ ಡಯಾನಾ ಮೊಂಟಾನೊ ಅವರ ಕಥೆ. ಡೈಲಿ ಮೇಲ್ ಜೊತೆ ಮಾತನಾಡಿದ ಡಯಾನಾ, ತನ್ ಪ್ರೀತಿ ಬಗ್ಗೆ ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾಳೆ. ನನಗೆ ಈಗ 25 ವರ್ಷ ವಯಸ್ಸು, ನನ್ನ ಬಾಯ್ ಫ್ರೆಂಡ್ ಗೆ 76 ವರ್ಷ ವಯಸ್ಸು. ಇಬ್ಬರ ಮಧ್ಯೆ 51 ವರ್ಷ ವಯಸ್ಸಿನ ಅಂತ್ರ ಇದ್ರೂ ನಾವಿಬ್ರೂ ಖುಷಿ ಖುಷಿಯಿಂದ ಜೀವನ ನಡೆಸ್ತಿದ್ದೇವೆ ಎಂದು ಡಯಾನಾ ಮೊಂಟಾನೊ ಹೇಳಿದ್ದಾಳೆ.
ಹೇಗಾಯ್ತು ಪ್ರೀತಿ (love)? : ಡಯಾನಾ, ತನಗಿಂತ 51 ವರ್ಷ ದೊಡ್ಡವರಾಗಿರುವ ಎಡ್ಜಿಯರ್ ಹೇಗೆ ಭೇಟಿ ಆದ್ಲು, ಇಬ್ಬರ ಮಧ್ಯೆ ಪ್ರೀತಿ ಹೇಗೆ ಶುರುವಾಯ್ತು, ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಯ್ತು ಎಂಬುದನ್ನು ಹೇಳಿದ್ದಾಳೆ. ಮ್ಯೂಚುವಲ್ ಫ್ರೆಂಡ್ ನಿಂದ ಡಯಾನಾ ಮತ್ತು ಎಡ್ಜಿಯರ್ ಮೊದಲ ಭೇಟಿಯಾಗಿತ್ತು. ಆಗ ಇಬ್ಬರು ಜೆಸ್ಟ್ ಫ್ರೆಂಡ್ಸ್ ಆಗಿದ್ರು. ಇಬ್ಬರ ಮಧ್ಯೆ ನಡೆದ ಘಟನೆಯೊಂದು ಪ್ರೀತಿಗೆ ತಿರುಗಲು ಕಾರಣವಾಯ್ತು.
ಜುಲೈ 2024ರಲ್ಲಿ ಇಬ್ಬರು ಮದುವೆ ಆದ್ರು. ರೋಮ್ಯಾನ್ಸ್ ವಿಷ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಳು ಡಯಾನಾ. ಆಕೆ ಕುಟುಂಬ ಕೂಡ ಈ ಸಂಬಂಧವನ್ನು ವಿರೋಧಿಸಿತ್ತು. ನಮಗೆ ಎಂದೂ ವಯಸ್ಸಿನ ಅಂತರ ಗೊತ್ತಾಗ್ಲಿಲ್ಲ ಎನ್ನುವ ಡಯಾನಾ, ನಾವಿಬ್ಬರೂ ಪರಸ್ಪರ ಅರ್ಥ ಮಾಡ್ಕೊಂಡಿದ್ದೇವೆ. ಎಡ್ಜಿಯರ್ ನನಗೆ ಗೌರವ ನೀಡ್ತಾರೆ, ನನ್ನ ಭಾವನೆಗಳಿಗೆ ಸ್ಪಂದಿಸ್ತಾರೆ ಎಂದು ಡಯಾನಾ ಹೇಳಿದ್ದಾಳೆ. ನಮ್ಮಿಬ್ಬರ ಅನೇಕ ಆಲೋಚನೆ ಒಂದೇ ರೀತಿ ಇದೆ. ಹಾಗಾಗಿ ನಮಗೆ ಯಾವ್ದೆ ಟೈಂನಲ್ಲಿ ತೊಂದ್ರೆ ಆಗ್ಲಿಲ್ಲ ಎಂದು ಡಯಾನಾ ಹೇಳಿದ್ದಾಳೆ.
ವಯಸ್ಸಿನ ಅಂತರ ನಮ್ಮಿಬ್ಬರ ಪ್ರೀತಿ, ರೋಮ್ಯಾನ್ಸ್ ಗೆ ಯಾವುದೇ ಅಡ್ಡಿಯಾಗ್ಲಿಲ್ಲ. ಆದ್ರೆ ಸಮಾಜವನ್ನು ಎದುರಿಸೋದೇ ದೊಡ್ಡ ಸಮಸ್ಯೆ ಆಗ್ತಿದೆ ಎಂದು ಡಯಾನಾ ಹೇಳಿದ್ದಾಳೆ. ಡಯಾನಾ ಕುಟುಂಬದ ಅನೇಕರಿಗೆ ಈ ಸಂಬಂಧ ಇಷ್ಟವಿಲ್ಲವಂತೆ. ಎಡ್ಜಿಯರ್ ಮದುವೆ ಆಗಿ ನನ್ನ ಜೀವನ ಹಾಳು ಮಾಡ್ಕೊಂಡೆ ಅಂತ ಅನೇಕರು ಭಾವಿಸಿದ್ದಾರೆ. ಆದ್ರೆ ವಾಸ್ತವ ಹಾಗಿಲ್ಲ. ನಾನು ಖುಷಿಯಾಗಿದ್ದೇನೆ ಎಂದು ಡಯಾನಾ ಹೇಳಿದ್ದಾಳೆ.
ಎಡ್ಜಿಯರ್ ಗೆ ಕಾಡುವ ಸಮಸ್ಯೆ ಏನು? : ಡಯಾನಾ ಪ್ರಕಾರ, ಡಯನಾ ಕುಟುಂಬದ ಪಾರ್ಟಿಗಳಲ್ಲಿ ತನ್ನ ವಯಸ್ಸಿನ ಸ್ನೇಹಿತರು, ಸಂಬಂಧಿಕರನ್ನು ಭೇಟಿ ಆಗ್ತಿದ್ದಳು. ಅಪರೂಪಕ್ಕೆ ತನಗಿಂತ ದೊಡ್ಡ ವಯಸ್ಸಿನ ಸಂಬಂಧಿಕರ ಜೊತೆ ಮಾತನಾಡ್ತಿದ್ದಳು. ಈಗ ಹಿರಿಯರ ಜೊತೆ ಹೆಚ್ಚು ಬೆರೆಯಬೇಕಾಗಿದೆ ಅಂತ ಡಯಾನಾ ಹೇಳಿದ್ದಾಳೆ. ಹಿರಿಯ ವ್ಯಕ್ತಿಗಳಿಗೆ ತೊಂದ್ರೆ ನೀಡಿದ್ರೆ ನೀನು ನರಕಕ್ಕೆ ಹೋಗ್ತೀಯಾ ಅಂತ ಯಾರೋ ಕಮೆಂಟ್ ಕೂಡ ಮಾಡಿದ್ದರಂತೆ. ಆರಂಭದಲ್ಲಿ ಇಂಥ ಕಮೆಂಟ್ ನೋವು ನೀಡ್ತಾಯಿತ್ತು. ಈಗ ಅದನ್ನು ನೋಡಿದ್ರೆ ನಗು ಬರುತ್ತೆ ಎಂದು ಡಯಾನಾ ಹೇಳಿದ್ದಾಳೆ.
