Bill Gates advice : ಎಷ್ಟು ಸಂಬಳ ನಿರೀಕ್ಷೆ ಮಾಡ್ತೀರಿ, ಇಂಟರ್ವ್ಯೂಗೆ ಹೋದಾಗ ಕೇಳುವ ಕಾಮನ್ ಪ್ರಶ್ನೆ ಇದು. ಇದಕ್ಕೆ ಏನು ಉತ್ತರ ನೀಡ್ಬೇಕು ಅನ್ನೋದು ಅನೇಕರಿಗೆ ತಿಳಿದಿಲ್ಲ. ಬಿಲ್ ಗೇಟ್ಸ್ ಉದ್ಯೋಗಿಗಳಿಗೆ ಟಿಪ್ಸ್ ನೀಡಿದ್ದಾರೆ.
ಪ್ರೈವೆಟ್ ಜಾಬ್ (Private Job) ನಲ್ಲಿ ಜನರು ಸ್ಯಾಲರಿ ಹೈಕ್ (Salary hike) ಜೊತೆ ಗ್ರೋಥ್ ಬಯಸ್ತಾರೆ. ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಜಂಪ್ ಆಗ್ತಿದ್ದಾರೆ ಅಂದ್ರೆ ಪ್ರಮೋಷನ್ ಜೊತೆ ಸ್ಯಾಲರಿ ಹೈಕ್ ಕಾಮನ್. ಈಗಿರೋದಕ್ಕಿಂತ ಕಡಿಮೆ ಸಂಬಳಕ್ಕೆ ಯಾವುದೇ ವ್ಯಕ್ತಿ ಜಾಬ್ ಬದಲಿಸೋದಿಲ್ಲ. ಹೊಸಬರಿರಲಿ ಇಲ್ಲಿ ಅನುಭವ ಹೊಂದಿದ ಉದ್ಯೋಗಿ ಇರ್ಲಿ, ಕೆಲ್ಸಕ್ಕೆ ಅರ್ಜಿ ಸಲ್ಲಿಸಿದಾಗ್ಲೆಲ್ಲ ಕಂಪನಿ ಕೇಳುವ ಒಂದು ಒಂದು ಕಾಮನ್ ಪ್ರಶ್ನೆ, ನಿಮಗೆ ಸಂಬಳ ಎಷ್ಟು ಬೇಕು?. ಪ್ರತಿ ಬಾರಿ ನೀವು ಕೆಲ್ಸ ಬದಲಿಸುವಾಗ ಈ ಪ್ರಶ್ನೆಯನ್ನು ಎದುರಿಸ್ತೀರಿ. ಅನೇಕರು ಎಷ್ಟು ಸಂಬಳ ಬೇಕು ಎಂಬ ಬೇಡಿಕೆಯನ್ನು ಕಂಪನಿ ಮುಂದೆ ಇಡ್ತಾರೆ. ಕೆಲವೊಮ್ಮೆ ನಿಮ್ಮ ಸ್ಯಾಲರಿ ಡಿಮ್ಯಾಂಡ್ ನಿಂದ್ಲೇ ಒಳ್ಳೆ ಕಂಪನಿ ಕೈಬಿಟ್ಟು ಹೋಗುತ್ತೆ. ಕೆಲ್ಸ ಬದಲಿಸಿ ಎಷ್ಟೇ ಅನುಭವ ಇರಲಿ, ಈಗ್ಲೂ ಅನೇಕರಿಗೆ ಸಂಬಳವನ್ನು ಯಾವ ರೀತಿ ಡಿಮ್ಯಾಂಡ್ ಮಾಡ್ಬೇಕು ಎಂಬುದು ಗೊತ್ತಿಲ್ಲ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್, ಉದ್ಯೋಗಿಗಳಿಗೆ ಈ ಟಿಪ್ಸ್ ನೀಡಿದ್ದಾರೆ. ಜಾಬ್ ಇಂಟರ್ವ್ಯೂಗೆ ಹೋದಾಗ ಸ್ಯಾಲರಿ ಹೇಗೆ ಕೇಳ್ಬೇಕು ಎಂಬುದಕ್ಕೆ ಮೂರು ವಾಕ್ಯದ ಉತ್ತರ ನೀಡಿದ್ದಾರೆ.
ಬಿಲ್ ಗೇಟ್ಸ್ (Bill Gates) ನೀಡಿದ ಟಿಪ್ಸ್ ಏನು? : ಸಂದರ್ಶನವೊಂದರಲ್ಲಿ ಮಾತನಾಡಿದ ಬಿಲ್ ಗೇಟ್ಸ್, ನೀವು ಹೊಸ ಕೆಲ್ಸ ಸರ್ಚ್ ಮಾಡ್ತಿದ್ದರೆ ಇಲ್ಲ ಜಾಬ್ ಸೆಲೆಕ್ಷನ್ ನಲ್ಲಿ ಸಂಬಳ ಎಷ್ಟು ಅಂತ ಕೇಳಿದ್ರೆ ನೀವು ಎಂದೂ ಸಂಖ್ಯೆಯಲ್ಲಿ ಉತ್ತರ ಹೇಳ್ಬೇಡಿ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ನೀವು ಯಾವ್ದೆ ಸಂಖ್ಯೆ ಅಥವಾ ಇಷ್ಟು ಪರ್ಸೆಂಟೇಜ್ ಹೈಕ್ ಬೇಕು ಎನ್ನುವ ಬದಲು ವಿವರವಾಗಿ ಉತ್ತರ ನೀಡಲು ಪ್ರಯತ್ನಿಸಿದ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ನಿಮ್ಮ ಉತ್ತರ, ನೀವು ಕಂಪನಿ ಜೊತೆ ದೀರ್ಘ ಸಂಬಂಧ ಬಯಸ್ತೀರಿ ಎಂಬುದನ್ನು ಸೂಚಿಸ್ಬೇಕು, ನಿಮಗೆ ಕಂಪನಿ ಮೇಲೆ ಹೆಚ್ಚಿನ ಆಸಕ್ತಿ ಇದೆ ಎಂಬ ಉತ್ತರವನ್ನು ನೀವು ನೀಡ್ಬೇಕು ಎನ್ನುತ್ತಾರೆ ಬಿಲ್ ಗೇಟ್ಸ್. ಬಿಲ್ ಗೇಟ್ಸ್, ಸಂಬಳಕ್ಕಿಂತ ಸ್ಟಾಕ್ ಗೆ ಹೆಚ್ಚು ಒತ್ತು ನೀಡಿದ್ದಾರೆ.
ಎಷ್ಟು ಸಂಬಳ ಬೇಕು ಎಂಬುದಕ್ಕೆ ಉತ್ತರ ಹೀಗಿರಲಿ : ಇಂಟರ್ವ್ಯೂ ಸಮಯದಲ್ಲಿ ಕಂಪನಿ ಮುಖ್ಯಸ್ಥರು ಸಂಬಳ ಎಷ್ಟು ಬೇಕು ಅಂತ ನಿಮ್ಮನ್ನು ಪ್ರಶ್ನೆ ಮಾಡಿದಾಗ, ಪ್ಯಾಕೇಜ್ ಉತ್ತಮವಾಗಿರುತ್ತೆ ಅಂತ ನಾನು ಭಾವಿಸ್ತೇನೆ, ಯಾಕೆಂದ್ರೆ ನನಗೆ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ಕಂಪನಿಯ ಭವಿಷ್ಯ ತುಂಬಾ ಚೆನ್ನಾಗಿದೆ ಅಂತ ನನಗನ್ನಿಸುತ್ತೆ, ಹಾಗಾಗಿ ಕ್ಯಾಶ್ ಸ್ಯಾಲರಿಗಿಂತ ಸ್ಟಾಕ್ ಆಯ್ಕೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಆದ್ಯತೆ ನೀಡುತ್ತೇನೆ. ಅನೇಕ ಕಂಪನಿಗಳು ಉತ್ತಮ ಆಫರ್ ನೀಡಿವೆ, ಆದ್ರೆ ನೀವು ನನ್ನ ಜೊತೆ ನ್ಯಾಯಯುತವಾಗಿ ವರ್ತಿಸುತ್ತೀರಿ ಮತ್ತು ಸ್ಟಾಕ್ ಆಯ್ಕೆಗಳನ್ನು ನೀಡ್ತೀರಿ ಅಂತ ನಾನು ಭಾವಿಸ್ತೇನೆ ಎಂಬ ಉತ್ತರ ಇರಬೇಕು ಎನ್ನುತ್ತಾರೆ ಬಿಲ್ ಗೇಟ್ಸ್.
ಉನ್ನತ ಹುದ್ದೆಯಲ್ಲಿ ಕೆಲ್ಸ ಮಾಡುವ ಅನೇಕರು ಕಂಪನಿಯಿಂದ ಬರೀ ಸಂಬಳ ತೆಗೆದುಕೊಳ್ಳೋದಿಲ್ಲ. ಕಂಪನಿ ಷೇರುಗಳಲ್ಲಿ ಪಾಲು ಪಡೆದಿರ್ತಾರೆ. ನೀವು ಇಂಥ ಉತ್ತರ ನೀಡಿದಾಗ, ಕಂಪನಿಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗುತ್ತೆ. ಬಿಲ್ ಗೇಟ್ಸ್ ಈ ಮಾತಗೆ ಅನೇಕ ತಜ್ಞರ ಒಪ್ಪಿಗೆ ಮುದ್ರೆ ಬಿದ್ದಿದೆ.
