ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 24ರಂದು ಬಿಹಾರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದು, ಚುನಾವಣೆ ಘೋಷಣೆ ನಂತರ ಮೊದಲ ಬಾರಿ ರಣಕಹಳೆ ಮೊಳಗಿಸಲಿದ್ದಾರೆ.ಅಂದು ಬೆಳಗ್ಗೆ ಸಮಷ್ಟಿಪುರದಿಂದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ

ಪಟನಾ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 24ರಂದು ಬಿಹಾರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದು, ಚುನಾವಣೆ ಘೋಷಣೆ ನಂತರ ಮೊದಲ ಬಾರಿ ರಣಕಹಳೆ ಮೊಳಗಿಸಲಿದ್ದಾರೆ.

ಅಂದು ಬೆಳಗ್ಗೆ ಸಮಷ್ಟಿಪುರದಿಂದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಭಾರತ ರತ್ನ ಕರ್ಪೂರಿ ಠಾಕೂರ್‌ ಅವರ ಗ್ರಾಮಕ್ಕೆ ಭೇಟಿ ಕೊಡಲಿದ್ದಾರೆ. ಬಳಿಕ ಮಧ್ಯಾಹ್ನ ಬೇಗುಸರಾಯ್‌ಗೆ ತೆರಳಲಿದ್ದಾರೆ ಎಂದು ಬಿಜೆಪಿ ಬಿಹಾರ ಅಧ್ಯಕ್ಷ ದಿಲೀಪ್‌ ಜೈಸ್ವಾಲ್‌ ತಿಳಿಸಿದ್ದಾರೆ.

24ರ ಬಳಿಕ 30ರಂದು ಮತ್ತೆ ಬಿಹಾರಕ್ಕೆ ಮೋದಿ ಆಗಮಿಸಲಿದ್ದು, ಮುಜಫ್ಫರ್‌ಪುರದಲ್ಲಿ ಸಮಾವೇಶ ನಡೆಸಲಿದ್ದಾರೆ. ನಂತರದಲ್ಲಿ ನ.2, 3, 6 ಮತ್ತು 7ರಂದು ಸಹ ಬಿಹಾರಕ್ಕೆ ಬರಲಿದ್ದಾರೆ.

ಟಿಕೆಟ್ ನೀಡುವ ಭರವಸೆ ನೀಡಿ ಈಗ 2.7 ಕೋಟಿಗೆ ಬೇಡಿಕೆ

ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಆರ್‌ಜೆಡಿಯಿಂದ ಟಿಕೆಟ್ ಕೈತಪ್ಪಿದ ಅಭ್ಯರ್ಥಿ ಮದನ್ ಶಾ ಲಾಲೂ ನಿವಾಸದ ಮುಂದೆ ಹೈಡ್ರಾಮಾ ಮಾಡಿದ್ದು, ಆರ್‌ಜೆಡಿ ನಾಯಕ ಸಂಜಯ್ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನಗೆ ಲಾಲು ಪ್ರಸಾದ್ ಯಾದವ್‌ 2025ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್ ನೀಡುವ ಭರವಸೆ ನೀಡಿದರು. ಆದರೆ ಸಂಜಯ್ ಯಾದವ್‌ ನನಗೆ ಟಿಕೆಟ್ ನೀಡಲುು 2.7 ಕೋಟಿ ಹಣ ಪಾವತಿ ಮಾಡುವಂತೆ ಬೇಡಿಕೆ ಇಟ್ಟರು, ನಾನು ನಿರಾಕರಿಸಿದಾಗ ನನಗೆ ನೀಡಬೇಕಾಗಿದ್ದ ಟಿಕೆಟ್‌ನ್ನು ಬೇರೆಯವರಿಗೆ ನೀಡಿದರು ಎಂದು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಆಪ್ತ ಮದನ್‌ ಶಾ ಆರೋಪಿಸಿದ್ದಾರೆ.

ಟಿಕೆಟ್ ಕೈತಪ್ಪಿದ್ದಕ್ಕೆ ಲಾಲೂ ನಿವಾಸದ ಮುಂದೆ ರಸ್ತೆಯಲ್ಲಿ ಹೊರಳಾಡಿದ ಮದನ್ ಶಾ:

ತಮಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ದುಃಖಿತರಾದ ಮದನ್ ಶಾ ಅವರು ಅವರು ಲಾಲೂ ಪ್ರಸಾದ್ ನಿವಾಸದ ಮುಂದೆ ರಸ್ತೆಯಲ್ಲಿ ಬಿದ್ದು ಹೊರಳಾಡಿ ತಾನು ಸಾಯುವುದಾಗಿ ಹೇಳಿದ್ದಾರೆ. ನನಗೆ ಮೋಸವಾಗಿದೆ. ಸಂಜಯ್ ಯಾದವ್ ನನಗೆ ಟಿಕೆಟ್ ತಪ್ಪಿಸಿದ, ಟಿಕೆಟ್ ಕೇಳಿದಾಗ 2. 7 ಕೋಟಿ ರೂಪಾಯಿ ಕೇಳಿದ, ನನ್ನ ಬಳಿ ಅಷ್ಟು ಹಣವಿಲ್ಲ, ಲಾಲು ಯಾದವ್ ನನ್ನ ಗುರು, ಆದರೆ ಇಲ್ಲಿ ನನಗೆ ಸಂಜಯ್ ಯಾದವ್ ಹಾಗೂ ತೇಜಸ್ವಿ ಯಾದವ್‌ರಿಂದ ಮೋಸವಾಗಿದೆ. ನನಗೆ ಟಿಕೆಟ್ ತಪ್ಪಿಸಿ ಕಳ್ಳನಿಗೆ ಟಿಕೆಟ್ ನೀಡ್ತಿದ್ದಾರೆ. ಆತ ಬಿಜೆಪಿ ಏಜೆಂಟ್ ಎಂದು ಮದನ್ ಶಾ ಆರೋಪಿಸಿದ್ದಾರೆ.

ಆರ್‌ಜೆಡಿ ನಾಯಕ ಸಂಜಯ್ ಯಾದವ್ ವಿರುದ್ಧ ಮದನ್ ಶಾ ಗಂಭೀರ ಆರೋಪ

 ಮಾಧ್ಯಮಗಳೊಂದಿಗೆ ಮಾತನಾಡಿದ ಮದನ್‌ ಶಾ, ಲಾಲು ಪ್ರಸಾದ್ ಯಾದವ್ ಅವರು 2025 ರ ಬಿಹಾರ ವಿಧಾನಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಆದರೆ, ಆರ್‌ಜೆಡಿ ನಾಯಕ ಸಂಜಯ್ ಯಾದವ್ ತಮ್ಮಿಂದ 2.7 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರ. ಹಣ ನೀಡಲು ನಿರಾಕರಿಸಿದಾಗ, ಪಕ್ಷದ ಟಿಕೆಟ್ ಅನ್ನು ಬೇರೆ ಅಭ್ಯರ್ಥಿಗೆ ಹಸ್ತಾಂತರಿಸಲಾಯಿತು ಎಂದು ಶಾ ಹೇಳಿದರು.

ಲಾಲೂ ಪ್ರಸಾದ್ ಯಾದವ್ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮದನ್ ಶಾ ಅಲ್ಲಿ ರಸ್ತೆಯಲ್ಲಿ ಬಿದ್ದು ಹೊರಳಾಡಿ ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮಗೆ ಮೋಸವಾಗಿದೆ ತಾನು ಸಾಯುವುದಾಗಿ ಹೇಳಿದರು. ಅವರು ಸರ್ಕಾರ ರಚಿಸುವುದಿಲ್ಲ, ತೇಜಸ್ವಿ ತುಂಬಾ ದುರಹಂಕಾರಿ ಆತ ಜನರನ್ನು ಭೇಟಿಯಾಗುವುದಿಲ್ಲ. ಅವರು ಟಿಕೆಟ್ ಬೇರೆಯವರಿಗೆ ನೀಡುತ್ತಿದ್ದಾರೆ. ಸಂಜಯ್ ಯಾದವ್ ಇದನ್ನೆಲ್ಲ ಮಾಡುತ್ತಿದ್ದಾರೆ. ನಾನು ಇಲ್ಲಿಗೆ ಸಾಯಲು ಬಂದಿದ್ದೇನೆ. ಲಾಲು ಯಾದವ್ ನನ್ನ ಗುರು. ಅವರು ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು, ಆದರೆ ಇವರು ಬಿಜೆಪಿ ಏಜೆಂಟ್ ಸಂತೋಷ್ ಕುಶ್ವಾಹ ಅವರಿಗೆ ಟಿಕೆಟ್ ನೀಡಿದರು ಎಂದು ಮದನ್ ಶಾ ಆರೋಪಿಸಿದ್ದಾರೆ.