Niveditha Gowda: ಇದೀಗ ನಿವೇದಿತಾ ಮತ್ತೊಂದು ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಬಹುಶಃ ಅವರಿರುವ ಸ್ಥಳ ಗೋವಾದ ಕಡಲ ತೀರದ್ದು ಎಂದು ಕಾಣಿಸುತ್ತದೆ. ವಿಡಿಯೋದಲ್ಲಿ ಬಳಿ ಬಣ್ಣದ ಉಡುಪು ಧರಿಸಿ ಕಾಣಿಸಿಕೊಂಡಿರುವ ನಿವೇದಿತಾ ನ್ಯೂ ಲುಕ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಯಾರೂ ಏನೇ ಹೇಳಿದ್ರೂ ಕ್ಯಾರೆ ಅನ್ನದೆ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ನಿವೇದಿತಾ ಗೌಡ (Niveditha Gowda), ರೀಲ್ಸ್ ಅಂದ್ರೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ. ತಮ್ಮ ಅಭಿಮಾನಿಗಳಿಗಾಗಿಯೇ ಹೊಸ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಿವಿ, ಇತ್ತೀಚೆಗೆ ಅಮೆರಿಕದ ಟ್ರಿಪ್ ಮುಗಿಸಿಕೊಂಡು ಬಂದಿದ್ದರು. ಬಳಿಕ ವಿಯೆಟ್ನಾಂ (Vietnam) ಪ್ರವಾಸಕ್ಕೂ ತೆರಳಿದ್ದರು. ಪ್ರವಾಸದಲ್ಲಿ ನಿವೇದಿತಾ ಜೊತೆಗೆ ಸ್ನೇಹಿತೆಯೂ ಇದ್ದರು.

ಇದೀಗ ನಿವೇದಿತಾ ಮತ್ತೊಂದು ವಿಡಿಯೋ ಅಪ್‌ಲೋಡ್‌ ಮಾಡಿದ್ದು, ಬಹುಶಃ ಅವರಿರುವ ಸ್ಥಳ ಗೋವಾದ ಕಡಲ ತೀರದ್ದು ಎಂದು ಕಾಣಿಸುತ್ತದೆ. ವಿಡಿಯೋದಲ್ಲಿ ಬಳಿ ಬಣ್ಣದ ಉಡುಪು ಧರಿಸಿ ಕಾಣಿಸಿಕೊಂಡಿರುವ ನಿವೇದಿತಾ ನ್ಯೂ ಲುಕ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹಿಂದೆ ಸದ್ದು ಮಾಡಿದ್ದ ಬಾತ್ ರೂಮ್‌ ಸೆಲ್ಫಿ

ನಿವೇದಿತಾ ಅವರನ್ನ ಸೋಶಿಯಲ್ ಮೀಡಿಯಾದಲ್ಲಿ ನೀವೂ ಫಾಲೋ ಮಾಡ್ತಿದ್ರೆ ಈ ವಿಷಯ ಖಂಡಿತ ನಿಮಗೂ ತಿಳಿದಿರುತ್ತದೆ. ಬಾತ್ ರೂಮ್‌ಗೂ ನಿವೇದಿತಾಗೂ ಸಿಕ್ಕಾಪಟ್ಟೆ ನಂಟು. ಯಾಕಂದ್ರೆ ತಮ್ಮ ರೀಲ್ಸ್, ಫೋಟೋ ಶೂಟ್ ಹೀಗೆ ಬಹುತೇಕ ಇಂಟ್ರಸ್ಟಿಂಗ್ ಅನಿಸೋ ಎಲ್ಲ ಕೆಲಸವನ್ನು ಇಲ್ಲಿಯೇ ಮಾಡುತ್ತಾರೆ. ಹಾಗಾಗಿಯೇ ಬಾತ್ ರೂಮ್‌ ಜೊತೆಗೆ ಸಿಕ್ಕಾಪಟ್ಟೆ ಅಟ್ಯಾಚ್‌ಮೆಂಟ್ ಇದೆ.

ಅಂದಹಾಗೆ ನಿವೇದಿತಾ ಬಾತ್ ರೂಮ್‌ ಫೋಟೋ ಜೊತೆಗೆ ಒಂದು ಲೈನ್ ಬರೆದುಕೊಂಡಿದ್ದರು. ಅದು ತುಂಬಾನೆ ತಮಾಷೆಯಾಗಿತ್ತು. ಅದರ ಅರ್ಥ ಹೀಗಿತ್ತು.. ನಾನು ಮತ್ತು ನನ್ನ ಬಾತ್‌ ರೂಮ್‌ ನಮ್ಮ ಪಾಡಿಗೆ ನಾವು ಇರುತ್ತೇವೆ. ಇದು ನಮ್ಮ ಕೆಲಸ ನೋಡಿ. ಆದರೆ, ನೀವು ನಿಮ್ಮ ಕೆಲಸ ನೋಡಿಕೊಳ್ಳಿ ಅನ್ನೋದನ್ನೆ ಇದು ಹೇಳುತ್ತವೆ. ಈ ಮಾತಿನ ಇಂಗ್ಲಿಷ್ ಸಾಲು ಈ ರೀತಿ ಇವೆ. Me and my bathroom selfies minding our own business. you should too.ಅದೇನೇ ಇರಲಿ ಒಟ್ಟಿನಲ್ಲಿ ನಿವೇದಿತಾ ಬಾತ್ ರೂಮ್‌ ಅಲ್ಲಿ ತೆಗೆದುಕೊಂಡ ಸೆಲ್ಫಿ ಫೋಟೋಗಳು, ಬಾತ್‌ ರೂಮ್‌ ಅಲ್ಲಿಯೇ ಮಾಡಿರೋ ರೀಲ್ಸ್ ವಿಡಿಯೋಗಳು ಹೆಚ್ಚು ಹೆಚ್ಚು ಗಮನ ಸೆಳೆಯುತ್ತಲೇ ಇರುತ್ತವೆ. ನಿವೇದಿತಾ ನಿರಂತರ ಸುದ್ದಿಯಲ್ಲಿ ಇರ್ತಾರೆ.

ಬಿಗ್‍ಬಾಸ್ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನತೆಗೆ ಚಿರಪರಿಚಿತವಾದವರು ನಿವೇದಿತಾ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿತಗಳನ್ನು ಕಂಡಿದ್ದಾರೆ. ಕಳೆದ ವರ್ಷ ಕನ್ನಡದ ಖ್ಯಾತ ರ್‍ಯಾಪರ್ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಮಧ್ಯೆ ಬಿರುಕು ಉಂಟಾಗಿ ಡಿವೋರ್ಸ್ ಕೂಡ ಪಡೆದರು. ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ನಲ್ಲಿ ಗಮನ ಸೆಳೆದಿದ್ದ ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಇಬ್ಬರು ಡಿವೋರ್ಸ್‌ ನಿರ್ಧಾರ ಪಡೆದದ್ದು, ಎಲ್ಲರಿಗೂ ಶಾಕ್‌ ಆಗಿತ್ತು. ನಿಮಗೆಲ್ಲರಿಗೂ ತಿಳಿದಿರುವಂತೆ ಚಂದನ್ ಅವರ ಕೆಲಸದಲ್ಲಿ ಬ್ಯುಸಿಯಾದರೆ, ನಿವೇದಿತಾ ಅವರು ಟ್ರಾವೆಲ್ ಅಂತ ಬ್ಯುಸಿ ಇದ್ದಾರೆ. ಹೊಸ ಹೊಸ ಊರನ್ನು ಸುತ್ತುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ 

View post on Instagram

ರಿಯಾಲಿಟಿ ಶೋಗಳಲ್ಲಿ ಬ್ಯೂಸಿ

ಸಿನಿಮಾ ಹಾಗೂ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಆಗಿರುವ ಅವರು ಗ್ಯಾಪ್ ಇದ್ದಾಗಲೆಲ್ಲಾ ವಿದೇಶ ಸುತ್ತಾಟ ನಡೆಸುತ್ತಾರೆ. ನಿವೇದಿತಾ ಡಿವೋರ್ಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ, ನ್ಯೂ ಲುಕ್‌ನಲ್ಲಿ ಕಾಣಿಡಿಕೊಂಡಾಗಲೆಲ್ಲಾ ರೀಲ್ಸ್, ವಿಡಿಯೊ ಶೇರ್ ಮಾಡುತ್ತಿರುತ್ತಾರೆ.‌ ಈ ಬಗ್ಗೆ ನೆಟ್ಟಿಗರು ಅದೆಷ್ಟೇ ನೆಗೆಟಿವ್ ಕಾಮೆಂಟ್ ಮಾಡಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಫುಲ್ ಜಾಲಿಯಾಲ್ಲಿದ್ದಾರೆ. ಸೋಷಿಯಲ್ ಮೀಡಿಯಾ ಮಾತ್ರವಲ್ಲ, ಜೊತೆಗೆ ಸಿನಿಮಾ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ ನಿವೇದಿತಾ. ಇತ್ತೀಚೆಗಷ್ಟೇ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ 'ಮುದ್ದು ರಾಕ್ಷಸಿ' ಎಂಬ ಚಿತ್ರದಲ್ಲಿ ನಟಿಸಿದ್ದರು. ಹಾಗೆಯೇ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೊಕೇಶ್ ಜೊತೆ 'ಜಿಎಸ್‌ಟಿ' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.