- Home
- Entertainment
- ಮದ್ವೆಯಾಗಿ ಒಂಬತ್ತು ತಿಂಗಳಿಗೆ Lakshmi Nivasa ಚಂದನಾ ಗುಡ್‌ನ್ಯೂಸ್? ಪತಿಗೆ ಹೇಳದೇ ನಟಿ ಮಾಡಿದ್ದೇನು ನೋಡಿ!
ಮದ್ವೆಯಾಗಿ ಒಂಬತ್ತು ತಿಂಗಳಿಗೆ Lakshmi Nivasa ಚಂದನಾ ಗುಡ್‌ನ್ಯೂಸ್? ಪತಿಗೆ ಹೇಳದೇ ನಟಿ ಮಾಡಿದ್ದೇನು ನೋಡಿ!
ಮದ್ವೆಯಾಗಿ ವರ್ಷದಲ್ಲಿ Lakshmi Nivasa ಚಂದನಾ ಅನಂತಕೃಷ್ಣ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಆದರೆ ಪತಿಗೆ ಹೇಳುವ ಬದ್ಲು ಹೀಗೆ ಯಾಕೆ ಮಾಡಿದ್ರು ನಟಿ? ಇಲ್ಲಿದೆ ಡಿಟೇಲ್ಸ್

ಲಕ್ಷ್ಮೀ ನಿವಾಸದ ಪ್ರೀತಿಯ ಚಿನ್ನುಮರಿ
ಚಿನ್ನುಮರಿಯಾದ್ರೂ ಹೇಳಿ ಚಂದನಾ ಆದ್ರೂ ಹೇಳಿ, ಜಾಹ್ನವಿಯಾದ್ರೂ ಹೇಳಿ... ಸೀರಿಯಲ್ ಪ್ರಿಯರ ದೃಷ್ಟಿ ಹೋಗುವುದು ಲಕ್ಷ್ಮೀ ನಿವಾಸದ ಸೈಕೋ ಜಯಂತ್ ಪತ್ನಿಯ ಮೇಲೆ. ಚಿನ್ನುಮರಿ ಚಿನ್ನುಮರಿ ಎನ್ನುತ್ತಲೇ ಪತ್ನಿಯ ಮೇಲೆ ಕಹಿ ಎನ್ನಿಸುವಂಥ ಪ್ರೀತಿ ತೋರಿಸಿರೋ ಜಯಂತ್‌ನಿಂದ ಸದ್ಯ ಜಾಹ್ನವಿ ಚಂದನಾ ಹೆಸರಿನಲ್ಲಿ ವಿಶ್ವನ ಮನೆ ಸೇರಿದ್ದಾಳೆ. ಅವಳು ಪಾತಾಳದಲ್ಲಿ ಇದ್ದರೂ ಸರಿ, ಅವಳನ್ನು ಹುಡುಕುವ ಪಣ ತೊಟ್ಟಿದ್ದಾನೆ ಜಯಂತ.
ಸೈಕೋ ಜಯಂತ್‌ಗೆ ಸಿಕ್ತಾಳಾ?
ಅವಳು ಸಿಕ್ಕಳು ಎಂದರೆ, ಅವಳಿಗೆ ಅರಿವಿಲ್ಲದೇ ಆಶ್ರಯ ಕೊಟ್ಟಿರೋ ವಿಶ್ವನ ಕಥೆ ಮುಗಿಸುವ ಪ್ಲ್ಯಾನ್ ಕೂಡ ಮಾಡಿದ್ದಾನೆ ಈ ಸೈಕೋ. ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಮುಂದೇನು ಆಗುತ್ತದೆಯೋ ಎನ್ನುವ ಭಯದಲ್ಲಿದ್ದಾರೆ ಸೀರಿಯಲ್ ವೀಕ್ಷಕರು. ಪತಿ-ಪತ್ನಿ ಒಂದಾಗಲಿ ಎಂದು ಸಹಜವಾಗಿ ಬಯಸಿದರೆ, ಇಲ್ಲಿ ಮಾತ್ರ ಜಾಹ್ನವಿ ಈ ಜಯಂತ್‌ಗೆ ಸಿಗುವುದೇ ಬೇಡ ಎನ್ನುವವರೇ ಹೆಚ್ಚು.
ಗುಡ್‌ನ್ಯೂಸ್ ಕೇಳ್ತಿರೋ ಫ್ಯಾನ್ಸ್
ಇರಲಿ ಬಿಡಿ ಇದು, ಸೀರಿಯಲ್ ಸ್ಟೋರಿ ಆಯ್ತು. ಆದರೆ ಸದ್ಯ ಚಂದನಾ ಹೆಸರಿನಲ್ಲಿ ವಿಶ್ವನ ಮನೆಯಲ್ಲಿ ಇರೋ ನಟಿಯ ರಿಯಲ್ ಹೆಸರು ಕೂಡ ಚಂದನಾನೇ. ಇವರ ಫುಲ್ ಹೆಸರು ಚಂದನಾ ಅನಂತಕೃಷ್ಣ. ಕಳೆದ ವರ್ಷ ನವೆಂಬ್‌ನಲ್ಲಿ ಇವರ ಮದುವೆಯಾಗಿದೆ. ಗುಡ್‌ನ್ಯೂಸ್ ಯಾವಾಗ ಗುಡ್‌ನ್ಯೂಸ್ ಯಾವಾಗ ಎಂದು ಫ್ಯಾನ್ಸ್ ಕೇಳುತ್ತಲೇ ಇದ್ದಾರೆ.
ಗುಡ್‌ನ್ಯೂಸ್ ಕೊಟ್ಟ ನಟಿ
ಇದೀಗ ಚಂದನಾ ಅವರು ತಾವು ಪ್ರೆಗ್ನೆಂಟ್ ಎಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಯುಟ್ಯೂಬ್ ಒಂದರ ಸಂದರ್ಶನದ ವೇಳೆ ಈ ಸುದ್ದಿಯನ್ನು ಅವರು ರಿವೀಲ್ ಮಾಡಿದ್ದಾರೆ. ಪಬ್ಲಿಕ್‌ನೆಕ್ಟ್ಸ್ ಎನ್ನುವ ಚಾನೆಲ್‌ಗೆ ಅವರು ಸಂದರ್ಶನ ನೀಡುವ ಸಂದರ್ಭದಲ್ಲಿ ಅವರ ಸ್ನೇಹಿತೆ ನಟಿ ನಯನಾ ಅವರಿಗೆ ಪ್ರಾಂಕ್‌ಕಾಲ್ ಮಾಡಿದ್ದಾರೆ.
ಸ್ನೇಹಿತೆಗೆ ಪ್ರಾಂಕ್ ಕಾಲ್
ನಾನು ಕ್ಯಾರಿಂಗ್ ಕಣೆ ಎಂದು ಫೋನ್ ಮಾಡಿ ಅವರು ಹೇಳಿದ್ದಾರೆ. ಆದರೆ ನಟಿ ನಯನಾ ನಾಗರಾಜ್ ಅದನ್ನು ನಂಬಲಿಲ್ಲ. ಸುಳ್ಳು ಹೇಳಬೇಡ ಎಂದು ಹೇಳಿದ್ದಾರೆ. ನಿಜ ಕಣೆ ಎಂದರೂ ನಯನಾ ಅವರು ನಂಬಲಿಲ್ಲ. ಕೊನೆಗೆ ಚಂದನಾ, ಇದು ಸುಳ್ಳು ಸುದ್ದಿ ಪ್ರಾಂಕ್ ಮಾಡಲು ಹೇಳಿರೋ ಕಾರಣ ಮಾಡಿದೆ ಎಂದಿದ್ದಾರೆ! ಅಂದರೆ, ಇಷ್ಟು ಬೇಗ ನಟಿಗೆ ಮಗು ಮಾಡಿಕೊಳ್ಳುವ ಆಸೆ ಇಲ್ಲ ಎನ್ನುವುದು ನಟಿ ನಯನಾಗೂ ತಿಳಿದಿದೆ.
ಭರತನಾಟ್ಯ ಕಲಾವಿದೆ
ಇನ್ನು, ಚಂದನಾ ಕುರಿತು ಹೇಳುವುದಾದರೆ, ಅವರು ಕೇವಲ ಕಿರುತೆರೆ ಕಲಾವಿದೆಯಷ್ಟೇ ಅಲ್ಲದೇ, ರಂಗಭೂಮಿ ಕಲಾವಿದೆಯೂ ಹೌದು. ಜೊತೆಗೆ ಅದ್ಭುತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ ಕೂಡ. ಇದಾಗಲೇ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅದ್ಭುತ ಶಾಸ್ತ್ರೀಯ ನೃತ್ಯದ ವಿಡಿಯೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
ನವೆಂಬರ್‌ನಲ್ಲಿ ಮದುವೆ
ಇನ್ನು ಇವರ ಮದುವೆಯ ಕುರಿತು ಹೇಳುವುದಾದರೆ, ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದೆ. ಇವರದ್ದು ಅರೆಂಜ್ಡ್ ಮ್ಯಾರೇಜ್. ಇವರದ್ದು ಹಿರಿಯರು ನೋಡಿ ಆಗಿರುವ ಮದುವೆಯಾಗಿರುವ ಕಾರಣ, ಮದುವೆಯ ಬಗ್ಗೆ ಕೀರ್ತಿ ಅವರು ಕೇಳಿದಾಗ, ಈ ಜೋಡಿ ಸಕತ್ ತಮಾಷೆಯಾಗಿ ಉತ್ತರ ಕೊಟ್ಟಿದೆ.
ಪ್ರತ್ಯಕ್ಷ್ ಕುರಿತು..
ಪ್ರತ್ಯಕ್ಷ್ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ. ಆ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ತಮಾಷೆ ಮಾಡಿದ್ದಾರೆ.