ರಾಜಧಾನಿ ನವದೆಹಲಿಯ ಜನವಸತಿ ಪ್ರದೇಶದ ಎಲ್ಲಾ ಶ್ವಾನಗಳನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರ್ಧರಿಸಿದೆ.

ನವದೆಹಲಿ: ರಾಜಧಾನಿ ನವದೆಹಲಿಯ ಜನವಸತಿ ಪ್ರದೇಶದ ಎಲ್ಲಾ ಶ್ವಾನಗಳನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ಈ ಕುರಿತು ದ್ವಿಸದಸ್ಯ ಪೀಠ ನೀಡಿದ್ದ ಆದೇಶವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅದೇಶಿಸಿದ್ದು, ಗುರುವಾರವೇ ಅದರ ವಿಚಾರಣೆ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯಾ। ಜೆ.ಬಿ ಪರ್ದಿವಾಲಾ ಮತ್ತು ಆರ್‌.ಮಹಾದೇವನ್‌ ಅವರ ಪೀಠವು ನಾಯಿ ಕಡಿತದಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ, 3 ತಿಂಗಳೊಳಗೆ ದೆಹಲಿ ಮತ್ತು ರಾಜಧಾನಿ ಪ್ರದೇಶದಿಂದ ಬೀದಿ ನಾಯಿಗಳನ್ನು ಎತ್ತಂಗಡಿ ಮಾಡಿ ಶೆಡ್‌ಗಳಲ್ಲಿ ಇರಿಸಬೇಕು. ಇದಕ್ಕೆ ಯಾವುದೇ ಪ್ರಾಣಿದಯಾ ಸಂಘಟನೆಗಳು ಅಡ್ಡಿ ಮಾಡಿದರೆ ನಮಗೆ ತಿಳಿಸಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿತ್ತು. ಇದಕ್ಕೆ ದೇಶವ್ಯಾಪಿ ಶ್ವಾನಪ್ರಿಯರಿಂದ ವಿರೋಧ ವ್ಯಕ್ತವಾಗಿತ್ತು.

ಅದರ ಬೆನ್ನಲ್ಲೇ ಈ ಪ್ರಕರಣದ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಅದರ ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ನ್ಯಾ. ವಿಕ್ರಂ ಸಂಪತ್‌, ನ್ಯಾ. ಸಂದೀಪ್‌ ಮೆಹ್ತಾ ಮತ್ತು ನ್ಯಾ.ಎನ್‌.ವಿ.ಅಂಜಾರಿಯಾ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಲಿದೆ.