ದೆಹಲಿಯ ಬೀದಿ ನಾಯಿಗಳನ್ನು ತೆರವುಗೊಳಿಸುವ ಸುಪ್ರೀಂ ಕೋರ್ಟ್ ಆದೇಶಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಹಲವು ನಟ-ನಟಿಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆದೇಶವನ್ನು ಅಮಾನವೀಯ ಎಂದು ಕರೆದಿರುವ ಅವರು, ನಾಯಿಗಳಿಗೆ ಆಶ್ರಯ ತಾಣಗಳ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. 

ನವದೆಹಲಿ (ಆ.13): ದೆಹಲಿಯ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಕಾಂಗ್ರೆಸ್ ರಾಹುಲ್ గాంಧಿ, ಪ್ರಿಯಾಂಕಾ ಗಾಂಧಿ, ನಟ- ನಟಿಯರು ಹಾಗೂ ಆಕ್ಷೇಪಿಸಿದ್ದಾರೆ. ದಿಲ್ಲಿಯ ಇಂಡಿಯಾ ಗೇಟಲ್ಲಿ ಜನರು ಪ್ರತಿಭಟಿಸಿದ್ದು, ಅವರ ಮೇಲೆ ಎಫ್‌ಐಆ‌ರ್ ದಾಖಲಾಗಿದೆ.

ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, 'ಈ ತೀರ್ಪಿ ನಿಂದಾಗಿ ಸುಪ್ರೀಂ ದಶಕಗಳ ಮಾನವೀಯ ನೀತಿಯಿಂದ ಹಿಂದಕ್ಕೆ ಸರಿದಿದೆ. ಈ ಧ್ವನಿರಹಿತ ಆತ್ಮ ಅಳಿಸಲು ಅವು ಸಮಸ್ಯೆ ಅಲ್ಲ, ಆಶ್ರಯಗಳು, ಸಂತಾನಶಕ್ತಿಹರಣ, ಲಸಿಕೆ, ಆರೈಕೆಯು ಯಾವುದೇ ಕ್ರೌರ್ಯವಿಲ್ಲದೆ ಬೀದಿಗಳನ್ನು ರಕ್ಷಿಸಬಹುದು. ಇವುಗಳನ್ನು ಇತರೆಡೆಗೆ ಕಳುಹಿಸು ವುದು ಕ್ರೂರ' ಎಂದಿದ್ದಾರೆ.

ಪ್ರಿಯಾಂಕಾ ಅಪಸ್ವರ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಆಕ್ಷೇಪಿಸಿದ್ದು, 'ಕೆಲವೇ ವಾರಗಳಲ್ಲಿ ನಗರದಲ್ಲಿನ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸುವುದು ಭಯಾನಕ ಅಮಾನವೀಯ ವರ್ತನೆ. ಅವುಗಳಿಗೆ ಬೇಕಾದಷ್ಟು ಆಶ್ರಯ ತಾಣಗಳು ಅಸ್ತಿತ್ವದಲ್ಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಖಂಡಿತವಾಗಿಯೂ ಬೇರೆ ವಿಧಾನಗಳಿರುತ್ತವೆ. ನಾಯಿಗಳು ಅತ್ಯಂತ ಸೌಮ್ಯ ಜೀವಿಗಳು, ಈ ರೀತಿಯ ಕ್ರೌರ್ಯಕ್ಕೆ ಅರ್ಹವಲ್ಲ' ಎಂದಿದ್ದಾರೆ.

ನಟರ ಅಕ್ಷೇಪ: ಹಲವು ನಟ-ನಟಿಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾನ್ ಅಬ್ರಹಾಂ ಸುಪ್ರೀಂ ಆದೇಶ ಮರು ಪರಿಶೀಲಿಸುವಂತೆ ಬಹಿರಂಗ ಅರ್ಜಿ ಸಲ್ಲಿಸಿ ದ್ದು, 'ನಾಯಿಗಳೂ ದಿಲ್ಲಿನಿವಾಸಿಗಳ ಭಾಗ, ಇವುಗಳು ದೆಹಲಿ ಜನರಿಂದ ತಮ್ಮದೇ ಆದ ರೀತಿಯಲ್ಲಿ ಗೌರವಿಸಲಟ್ಟ, ಪ್ರೀತಿಸಲ್ಪಡುವ ನಾಯಿಗಳು. ನಾಗರಿಕರಿಗೆ ನೆರೆಹೊರೆಯವರಾಗಿ ತಲೆಮಾರುಗಳಿಂದ ವಾಸಿಸುತ್ತಿವೆ' ಎಂದಿದ್ದಾರೆ. ವರುಣ್ ಧವನ್, ಜಾಹ್ನವಿ ಕಪೂರ್, ವೀರ್‌ದಾಸ್, ಸಾನ್ಯಾ ಮಲ್ಲೋತ್ರಾ, ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತ.ನಾಡಲ್ಲೂ ಶೆಡ್‌ಗೆ ನಾಯಿ: ಸೂಚನೆ

ಚೆನ್ನೈ: ದೆಹಲಿಯಲ್ಲಿರುವ ಬೀದಿ ನಾಯಿಗಳನ್ನು ಸಾಕಣೆ ಕೇಂದ್ರಗಳಿಗೆ ಕಡ್ಡಾಯವಾಗಿ ಸಳಾಂತರಿಸಬೇಕು ಎಂದು ಅಲ್ಲಿನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದ ಬೆನ್ನಲ್ಲೇ, ಈ ಆದೇಶವನ್ನು ತಮಿಳುನಾಡಿನ ನಗರಗಳಲ್ಲಿಯೂ ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಎಂ.ಕೆ. ಸ್ಟಾಲಿನ್ ಅವರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮಾಲೀಕನ ಕಿವಿಗೇ ಕಚ್ಚಿದ ಸಾಕುನಾಯಿ

ಗೋಪಾಲ್‌ ಗಂಜ್: ನಾಯಿಗಳನ್ನು ಶೆಡ್‌ಗೆ ಸಾಗಿಸುವ ಸುಪ್ರೀಂ ತೀರ್ಪು ದೇಶದಲ್ಲಿ ಸಂಚಲಕ್ಕೆ ಕಾರಣವಾಗಿರು ವ ನಡುವೆಯೇ ಬಿಹಾರದಲ್ಲಿ ಸಾಕು ನಾಯಿಯೊಂದು ಮಾಲೀಕನ ಕಿವಿಗೆ ಕಚ್ಚಿದ ಘಟನೆ ನಡೆದಿದೆ. ಗೋಪಾಲ್ ಗಂಜ್ ನಿವಾಸಿ ಸಂದೀಪ್‌ ಕುಮಾರ್ ತಮ್ಮ ಶ್ವಾನದಿಂದಲೇ ಕಡಿತಕ್ಕೆ ಒಳಗಾದವರು. ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.