ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾದ 2 ತಿಂಗಳ ಒಳಗಾಗಿ ಅವುಗಳನ್ನು ಇತ್ಯರ್ಥ ಮಾಡಿ ಎಂದು ಸುಪ್ರೀಂಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ಶುಕ್ರವಾರ ಸೂಚಿಸಿದೆ.
ನವದೆಹಲಿ: ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾದ 2 ತಿಂಗಳ ಒಳಗಾಗಿ ಅವುಗಳನ್ನು ಇತ್ಯರ್ಥ ಮಾಡಿ ಎಂದು ಸುಪ್ರೀಂಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ಶುಕ್ರವಾರ ಸೂಚಿಸಿದೆ.
‘ಬೇಲ್‌ನಂತಹ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವರ್ಷಗಳ ಕಾಲ ಕಾಯ್ದಿರಿಸುವುದು ಸರಿಯಲ್ಲ. ಇದು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ವಿರುದ್ಧವಾಗಿದೆ ಮತ್ತು 14 ಮತ್ತು 21ನೇ ವಿಧಿಯಡಿ ಕೊಡಲಾಗುವ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ.
ಹಾಗಾಗಿ ಎಲ್ಲಾ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಗೆ ಒಳಪಡುವ ನಿರೀಕ್ಷಣಾ ಮತ್ತು ಸಾಮಾನ್ಯ ಜಾಮೀನುಗಳಿಗೆ ಸಂಬಂಧಿಸಿದಂತೆ 2 ತಿಂಗಳ ಒಳಗೆ ತೀರ್ಪು ನೀಡಬೇಕು’ ಎಂದು ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠ ಹೇಳಿದೆ.
ಜತೆಗೆ ಅರ್ಜಿದಾರರಿಂದಲೇ ಜಾಮೀನು ಪ್ರಕ್ರಿಯೆಯಲ್ಲಿ ವಿಳಂಬವಾದರೆ ಇದು ಅನ್ವಯಿಸುವುದಿಲ್ಲ ಎಂದೂ ಹೇಳಿದೆ. ವಂಚನೆ ಮತ್ತು ನಕಲಿ ದಾಖಲೆ ಪ್ರಕರಣದ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧದ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಹೀಗೆ ಹೇಳಿದೆ.
ಸಂವಿಧಾನ ಮೇಲೆ ದಾಳಿಯ ಬಗ್ಗೆ ಚರ್ಚೆ ಅಗತ್ಯ : ನ್ಯಾ. ರೆಡ್ಡಿ ಸಲಹೆ
ದೇಶದಲ್ಲೀಗ ಪ್ರಜಾಪ್ರಭುತ್ವದ ಕೊರತೆ ಇದೆ ಮತ್ತು ಸಂವಿಧಾನಕ್ಕೆ ಸವಾಲು ಎದುರಾಗಿದೆ. ಅವಕಾಶ ಸಿಕ್ಕರೆ ಸಂವಿಧಾನವನ್ನು ಸಮರ್ಥಿಸಿಕೊಳ್ಳುವ ಮತ್ತು ಅದನ್ನು ರಕ್ಷಿಸುವ ಕೆಲಸ ಮಾಡುವೆ ಎಂದು ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ, ನ್ಯಾ. ಸುದರ್ಶನ್ ರೆಡ್ಡಿ ಹೇಳಿದ್ದಾರೆ. ಜೊತೆಗೆ ತಾವು ನಕ್ಸಲ್ ಪರ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ತಿರುಗೇಟು ನೀಡಿರುವ ಅವರು, ಸಲ್ವಾ ಜುಡುಂ ತೀರ್ಪು ನೀಡಿದ್ದು ಸುಪ್ರೀಂಕೋರ್ಟ್ ಎಂದು ಹೇಳಿದ್ದಾರೆ.
ಉಮೇದುವಾರಿಕೆ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ನಿವೃತ್ತ ನ್ಯಾಯಮೂರ್ತಿ ರೆಡ್ಡಿ, ‘ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಅಡಚಣೆಗಳು ಅತ್ಯಗತ್ಯ. ಆದರೆ ಅವು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಬಾರದು. ಚರ್ಚೆಗಳು ಸಭ್ಯತೆ ಮೀರಬಾರದು. ಸದ್ಯ ದೇಶದಲ್ಲಿ ಪ್ರಜಾಪ್ರಭುತ್ವದ ಕೊರತೆ ಇದೆ. ಪ್ರಜಾಪ್ರಭುತ್ವ ಎಂದರೆ ನನ್ನ ದೃಷ್ಟಿಯಲ್ಲಿ ವ್ಯಕ್ತಿಗಳ ನಡುವಿನ ಸೆಣಸಾಟವಲ್ಲ. ಸೈದ್ಧಾಂತಿಕ ಹೋರಾಟ ಎಂದಿದ್ದಾರೆ.
ಇದೇ ವೇಳೆ ಭಾರತದಲ್ಲಿ ಈಗಲೂ ಸಾಂವಿಧಾನಿಕ ಪ್ರಜಾಪ್ರಭುತ್ವ ಇದೆಯಾದರೂ ಅದು ಒತ್ತಡದಲ್ಲಿದೆ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆಯೇ ಎಂಬುದರನನಗೆ ಅವಕಾಶ ಸಿಕ್ಕರೆ ಸಂವಿಧಾನವನ್ನು ಸಮರ್ಥಿಸಿಕೊಳ್ಳುವ ಮತ್ತು ಅದನ್ನು ರಕ್ಷಿಸುವ ಕೆಲಸ ಮಾಡುವೆ ಎಂದಿದ್ದಾರೆ.
