smart jewelry store: ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್‌ಗಳಲ್ಲಿ ರಾತ್ರೋರಾತ್ರಿ ಕಳ್ಳರು ಕೈಚಳಕ ತೋರಿ ಕೈಗೆ ಸಿಕ್ಕಿದೆಲ್ಲವನ್ನು ದೋಚಿ ಹೋಗುವಂತಹ ಹಲವು ಘಟನೆಗಳು ನಡೆದಿವೆ. ಆದರೆ ಎಲ್ಲವೂ ಕಣ್ಣೆದುರೇ ಇದ್ದರೂ ಕಳ್ಳರಿಗೆ ಏನನ್ನೂ ಕದಿಯಲಾಗದಂತೆ ಮಾಡಿದ ಘಟನೆಯ ವೀಡಿಯೋವೊಂದು ಈಗ ಭಾರಿ ವೈರಲ್ ಆಗಿದೆ.

ದರೋಡೆಕೋರರ ಯತ್ನ ವಿಫಲಗೊಂಡಿದ್ದು ಹೇಗೆ?

ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್‌ಗಳಲ್ಲಿ ರಾತ್ರೋರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿ ಕೈಗೆ ಸಿಕ್ಕಿದೆಲ್ಲವನ್ನು ದೋಚಿ ಹೋಗುವಂತಹ ಹಲವು ಘಟನೆಗಳು ಈಗಾಗಲೇ ಹಲವು ಭಾರಿ ನಡೆದಿವೆ. ಗ್ರಿಲ್ ಮಿಷಿನ್ ಬಳಸಿ ಯಾರಿಗೂ ತಿಳಿಯದಂತೆ ಜ್ಯುವೆಲ್ಲರಿ ಶಾಪ್‌ನ ಗೋಡೌನ್‌ಗೆ ಅಥವಾ ಸಿಕ್ರೇಟ್ ಲಾಕರ್‌ಗೆ ಕಳ್ಳರು ಕನ್ನ ಕೊರೆದಿಯುತ್ತಾರೆ. ಇಡೀ ಶಾಪ್ ಕೊಳ್ಳೆ ಹೊಡೆದ ನಂತರವೇ ಈ ಘಟನೆ ಬೆಳಕಿಗೆ ಬರುತ್ತದೆ. ಆದರೆ ಎಲ್ಲವೂ ಕಣ್ಣೆದುರೇ ಇದ್ದರೂ ಕಳ್ಳರಿಗೆ ಏನನ್ನೂ ಕದಿಯಲಾಗದಂತೆ ಮಾಡಿದ ಘಟನೆಯ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಈಗ ಭಾರಿ ವೈರಲ್ ಆಗಿದೆ. ಇದು ನಿಜವಾಗಿ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೂರಾರು ನೆಟ್ಟಿಗರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ವೈರಲ್ ಆದ ವೀಡಿಯೋದಲ್ಲೇನಿದೆ?

ವೀಡಿಯೋದಲ್ಲಿ ಜ್ಯುವೆಲ್ಲರಿ ಶಾಪೊಂದಕ್ಕೆ ಕಳ್ಳರು ನಗುಗ್ಗುತ್ತಿದ್ದಂತೆ ಅಲ್ಲಿ ಮೆಷಿನ್‌ವೊಂದರ ಮೂಲಕ ಹೊಗೆ ಆವರಿಸಲು ಶುರುವಾಗುತ್ತದೆ. ಕ್ಷಣದಲ್ಲಿ ಆ ಹೊಗೆ ಆ ಕೊಠಡಿಯ ತುಂಬೆಲ್ಲಾ ದಟ್ಟವಾಗಿ ಹರಡಿ ಯಾರಿಗೂ ಏನನ್ನೂ ಕಾಣದಂತೆ ಮಾಡುತ್ತದೆ. ನೀವು ಏನನ್ನೂ ನೋಡಲು ಸಾಧ್ಯವಿಲ್ಲವೋ ಅದನ್ನು ನಿಮಗೆ ಕದಿಯಲು ಸಾಧ್ಯವಿಲ್ಲ ಎಂದು ಈ ವೀಡಿಯೋದ ಮೇಲೆ ಬರೆಯಲಾಗಿದೆ. stacked.wealth ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,

ಹೊಗೆ ಕಳ್ಳರಿಗಿಂತ ಬುದ್ಧಿವಂತ ಎನಿಸಿದಾಗ, ಆಭರದಣ ಅಂಗಡಿಯು ಸೆಕೆಂಡುಗಳಲ್ಲಿ ದರೋಡೆಯನ್ನು ತಡೆಯಲು ಹೆಚ್ಚಿನ ಸಾಂದ್ರತೆಯ ಮಂಜಿನ ಯಂತ್ರಗಳನ್ನು ಸಕ್ರಿಯಗೊಳಿಸುತ್ತದೆ. ಇಲ್ಲಿ ದರೋಡೆ ತಡೆಯಲು ಯಾವುದೇ ಹಿಂಸೆ ಇಲ್ಲ, ಕೇವಲ ವೇಗವಾಗಿ ಕಾಣದಂತೆ ಮಾಡುವ ಕೆಲಸವಷ್ಟೇ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.

ಅನೇಕರು ಈ ತಂತ್ರಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೊಂದು ಬುದ್ಧಿವಂತ ತಂತ್ರಜ್ಞಾನ ಎಂದು ಕಾಮೆಂಟ್ ಮಾಡಿದ್ದಾರೆ. ಬರೀ ಹೊಗೆಯ ಬದಲು ಕೆಲ ವಿಷಕಾರಿ ಅಂಶ ಮಿಶ್ರಿತವಾದ ಏನನ್ನಾದರೂ ಅದಕ್ಕೆ ಸೇರಿಸಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎಲ್ಲಾ ಜ್ಯುವೆಲ್ಲರಿ ಶಾಪ್‌ಗೆ ಈ ರೀತಿಯ ತಂತ್ರಜ್ಞಾನದ ಅಗತ್ಯವಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈ ಹೊಗೆಯ ಜೊತೆ ಸ್ವಲ್ಪ ಟೀಯರ್ ಗ್ಯಾಸ್ ಹಾಗೂ ತುರಿಕೆಯ ಪೌಡರ್‌ ಮಿಕ್ಸ್ ಮಾಡಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೇಳೆ ಆ ಬಾಗಿಲುಗಳು ಕೂಡ ತನ್ನಷ್ಟಕ್ಕೆ ಬಂದ್ ಆಗಿ ಈ ದರೋಡೆಕೋರರು ಒಳಗೆಯೇ ಸಿಲುಕುವಂತೆ ಮಾಡಬೇಕಿತ್ತು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಒಬ್ಬರು ನನ್ನ ತಂದೆ ಈ ಮೆಷಿನ್ ತಯಾರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ನಿಮ್ಮಪ್ಪನಿಗೆ ಹೇಳಿ ಆ ಅದಕ್ಕೆ ಸ್ವಲ್ಪ ಕಾಳುಮೆಣಸಿನ ಪೌಡರ್ ಹಾಕುವಂತೆ ಸಲಹೆ ನೀಡಿದ್ದಾರೆ.

ನಿದ್ರೆ ತರಿಸುವ ಹೊಗೆ ಕಳ್ಳರನ್ನು ಹಿಡಿಯಲು ಸಹಾಯ ಮಾಡುತ್ತದೆ. ಅದು ಸಾಧ್ಯ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ರೆ ಕಳ್ಳರು ಎಸ್ಕೇಪ್ ಆಗೋದು ಹೇಗೆ ಎಂದು ಒಬ್ಬರು ಪ್ರಶ್ನಿಸಿದ್ದು, ಅದಕ್ಕೆ ಒಬ್ಬರು ಅವರಿಗೆ ಪೊಲೀಸರು ಸಹಾಯ ಮಾಡುತ್ತಾರೆ ಎಂಬ ತಮಾಷೆಯ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಈ ವೀಡಿಯೋ, ಈ ತಂತ್ರಜ್ಞಾನದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಇದನ್ನೂ ಓದಿ: ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನಿಸಿದ ಪ್ರಯಾಣಿಕ: ಕುಡುಕನ ಕಿತಾಪತಿಯಿಂದಾಗಿ ವಿಮಾನ ತುರ್ತು ಲ್ಯಾಂಡಿಂಗ್

ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ದೇಗುಲಕ್ಕೆ ಬಂದ ಯುವತಿ: ಒಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ಅರ್ಚಕರ ಜೊತೆ ಗಲಾಟೆ

View post on Instagram