ಒಂದು ಕಾಲದಲ್ಲಿ ಭಾರತದ ಮೇಲೆ ಸುಂಕ ಹೇರಿ ಸಂಬಂಧ ಹಾಳುಮಾಡಿಕೊಂಡಿದ್ದ ಡೊನಾಲ್ಡ್ ಟ್ರಂಪ್, ಈಗ ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ಕರೆ ಮಾಡಿ ಶುಭ ಕೋರಿದ್ದಾರೆ. ಪ್ರಧಾನಿ ಮೋದಿಯವರನ್ನು 'ಆಪ್ತ ಗೆಳೆಯ' ಎಂದು ಕರೆದಿರುವ ಟ್ರಂಪ್, ಹದಗೆಟ್ಟಿದ್ದ ಭಾರತ-ಅಮೆರಿಕ ಸಂಬಂಧ ಸುಧಾರಿಸುವ ಪ್ರಯತ್ನ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ (Donald Trump) ಬಾಂಧವ್ಯ ತೀರಾ ಹಳೆಯದ್ದೇ. ಆದರೆ ಸುಮ್ಮನೇ ಇರಲಾರದವ... ಎನ್ನುವ ಮಾತಿನಂತೆ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಸುಂಕದ ನೀತಿ ಹೇರಿದರು. ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಟ್ರಂಪ್ ಸರ್ಕಾರವು ಭಾರತದ ಮೇಲೆ ಸುಂಕ ಹೇರಿದೆ. ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯಿಂದ (US Tariff On India Modi VS Trump) ಭಾರತಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದರೂ, ಹೇಳಿ ಕೇಳಿ ಅವರ ಪ್ರಧಾನಿ ನರೇಂದ್ರ ಮೋದಿ. ಇಂಥದ್ದೆಕೆಲ್ಲಾ ಸೊಪ್ಪು ಹಾಕಲೇ ಇಲ್ಲ. ಇಂಥ ಯಾವುದೇ ಒತ್ತಡಕ್ಕೂ ಮಣಿಯಲ್ಲ ಎಂದು ಭಾರತ ಸ್ಪಷ್ಟಪಡಿಸಿತು. ಅಮೆರಿಕ ಮತ್ತು ಭಾರತದ ಬಾಂಧವ್ಯದಲ್ಲಿ ದೊಡ್ಡ ಬಿರುಕು ಉಂಟಾಗಿದೆ ಎಂದೇ ಎಲ್ಲೆಡೆ ಸದ್ದು ಮಾಡಿತು ಸುದ್ದಿ. ಆದರೆ, ಟ್ರಂಪ್​ಗೆ ತಾವು ಮಾಡಿದ್ದು ತಪ್ಪು ಎಂದು ಅರಿವಾಗುತ್ತಲೇ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಕರೆ ಮಾಡಿದರು. ಆದರೆ ನಾಲ್ಕು ಸಲ ಫೋನ್​ ಕರೆ ಮಾಡಿದರೂ ಅದನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಲೇ ಇಲ್ಲ. ಇದರಿಂದ ನೊಂದುಕೊಂಡ ಮೋದಿ, ಟ್ವೀಟ್​ನಲ್ಲಿಯೇ ಈ ಬಗ್ಗೆ ನೊಂದು ಬೇಸರ ವ್ಯಕ್ತಪಡಿಸಿ ಯಾಕೋ ಭಾರತವನ್ನು ನಾನು ಕಳೆದುಕೊಳ್ಳುವಂತೆ ತೋರುತ್ತಿದೆ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: Narendra Modi ರಾಜಕೀಯ ಸನ್ಯಾಸ ? ಮುಂದಿನ ಪ್ರಧಾನಿ ಯಾರು? ದೇಶಕ್ಕೇನಾಗಲಿದೆ? ಈ ಭವಿಷ್ಯವಾಣಿ ಕೇಳಿ...

ಬಾಂಧವ್ಯ ವೃದ್ಧಿಗೆ ಸಕಾಲ ಎಂದ ಟ್ರಂಪ್​

ಆದರೆ ಇಂದು (ಸೆ.17) ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಾಗಿರುವ ಹಿನ್ನೆಲೆಯಲ್ಲಿ, ಭಾರತದ ಜೊತೆ ಮತ್ತೊಮ್ಮೆ ಬಾಂಧವ್ಯ ವೃದ್ಧಿಗೆ ಸಕಾಲ ಎಂದುಕೊಂಡಿರುವ ಟ್ರಂಪ್​, ಗೆಳೆಯ ಎಂದು ಸಂಬೋಧಿಸುತ್ತಲೇ ಮೋದಿಗೆ ವಿಷ್​ (PM Modi birthday wish) ಮಾಡಿದ್ದಾರೆ. ಅಪ್ತ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಫೋನ್​ ಮಾಡಿ ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಖುದ್ದು ದೂರವಾಣಿ ಕರೆ ಮಾಡುವ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ ಅಮೆರಿಕ ಅಧ್ಯಕ್ಷರು, ಆಪ್ತ ಸಮಾಲೋಚನೆ ನಡೆಸಿದರು. ಜೊತೆಗೆ ಸೋಷಿಯಲ್​ ಮೀಡಿಯಾದಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನು ಶೇರ್​ ಮಾಡಿರುವ ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕ ಸಂಬಂಧ ಮತ್ತು ಜಾಗತಿಕ ಸಹಭಾಗಿತ್ವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಜಂಟಿ ಸಹಕಾರದ ಭರವಸೆ ವ್ಯಕ್ತಪಡಿಸಿದ್ದಾರೆ.

ದೂರವಾಣಿ ಮೂಲಕ ವಿಷ್​

ಪ್ರಧಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ನನ್ನ ಸ್ನೇಹಿತ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು, ನನ್ನ 75ನೇ ಹುಟ್ಟುಹಬ್ಬಕ್ಕಾಗಿ ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇದಕ್ಕಾಗಿ ನಾನು ಅಧ್ಯಕ್ಷರಿಗೆ ಧನುವಾದ ಅರ್ಪಿಸುತ್ತೇನೆ. ನಿಮ್ಮಂತೆಯೇ, ಭಾರತ-ಅಮೆರಿಕ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ' ಎಂದಿದ್ದಾರೆ. ತಾವು ಫೋನ್​ ಮಾಡಿರುವ ಬಗ್ಗೆ ಟ್ರಂಪ್​ ಕೂಡ ಬರೆದುಕೊಂಡಿದ್ದಾರೆ. "ಪ್ರಧಾನಿ ಮೋದಿ ಅವರೊಂದಿಗೆ ನಾನು ದೂರವಾಣಿ ಕರೆಯಲ್ಲಿ ಮಾತನಾಡಿದೆ. ಉಕ್ರೇನ್-ರಷ್ಯಾ ಯುದ್ಧವನ್ನು ಪರಿಹರಿಸುವಲ್ಲಿ, ಅಮೆರಿಕದ ಉಪಕ್ರಮಗನ್ನು ಭಾರತ ಬೆಂಬಲಿಸಿದ್ದಕ್ಕಾಗಿ ನಾನು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.

ಸುಧಾರಿಸುವ ದ್ವಿಪಕ್ಷೀಯ ಸಂಬಂಧ

ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ಹೇರುವ ಮೂಲಕ ಭಾರತ-ಅಮೆರಿಕ ಸಂಬಂಧ ಹದಗೆಡಲು ಕಾರಣರಾದ ಡೊನಾಲ್ಡ್‌ ಟ್ರಂಪ್‌, ಈಗ ದ್ವಿಪಕ್ಷೀಯ ಸಂಬಂಧ ಸುಧಾರಣೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ತಮ್ಮ "ಆಪ್ತ ಸ್ನೇಹಿತ" ಎಂದು ಕರೆದಿರುವ ಅಮೆರಿಕ ಅಧ್ಯಕ್ಷರು, ಭಾರತವನ್ನು ಅಮೆರಿಕ ಜಾಗತಿಕ ಕಾರ್ಯತಂತ್ರದ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: We want Modi... ನೇಪಾಳದಲ್ಲಿ ಯುವಕರ ಘೋಷಣೆ- ಓಲಿ ಬೇಡ ನಮಗೂ ಮೋದಿ ಬೇಕೆಂದ ವಿಡಿಯೋ ವೈರಲ್​