5 ತಿಂಗಳ ಕಾಲ ದೇಶಾದ್ಯಂತ ಉತ್ತಮ ಮಳೆ ಸುರಿಸಿದ ಮುಂಗಾರು ಮಾರುತಗಳು ಅ.16ರಂದು ಪೂರ್ಣ ಪ್ರಮಾಣದಲ್ಲಿ ನಿರ್ಗಮನಗೊಂಡಿವೆ. ಈ ಬಾರಿ ಅವಧಿಗಿಂತ ಮೊದಲೇ, ಮೇ 24ಕ್ಕೆ ಕೇರಳ ಕರಾವಳಿ ಪ್ರವೇಶಿಸಿದ್ದ ಮಾರುತಗಳ 5 ತಿಂಗಳ ಅವಧಿಯಲ್ಲಿ ಒಟ್ಟು 937 ಮಿ.ಮೀ ಮಳೆ ಸುರಿಸಿವೆ.
ನವದೆಹಲಿ: 5 ತಿಂಗಳ ಕಾಲ ದೇಶಾದ್ಯಂತ ಉತ್ತಮ ಮಳೆ ಸುರಿಸಿದ ಮುಂಗಾರು ಮಾರುತಗಳು ಅ.16ರಂದು ಪೂರ್ಣ ಪ್ರಮಾಣದಲ್ಲಿ ನಿರ್ಗಮನಗೊಂಡಿವೆ. ಈ ಬಾರಿ ಅವಧಿಗಿಂತ ಮೊದಲೇ, ಮೇ 24ಕ್ಕೆ ಕೇರಳ ಕರಾವಳಿ ಪ್ರವೇಶಿಸಿದ್ದ ಮಾರುತಗಳ 5 ತಿಂಗಳ ಅವಧಿಯಲ್ಲಿ ಒಟ್ಟು 937 ಮಿ.ಮೀ ಮಳೆ ಸುರಿಸಿವೆ.
ಇದು ದೀರ್ಘಕಾಲೀನ ಸರಾಸರಿಯಾದ 868 ಮಿ.ಮೀಗಿಂತ ಶೇ.8ರಷ್ಟು ಹೆಚ್ಚು. ಈ ಅವಧಿಯಲ್ಲಿ ಕಾಶ್ಮೀರ, ಪಂಜಾಬ್, ಹಿಮಾಚಲ, ಉತ್ತರಾಖಂಡ ಭಾರೀ ಮೇಘಸ್ಫೋಟ, ಪ್ರವಾಹಕ್ಕೆ ತುತ್ತಾಗಿದ್ದವು. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆ ಸುರಿದಿದೆ.
ಮುಂಗಾರು 2ನೇ ಅವಧೀಲಿ 80%ವರೆಗೂ ಮಳೆ ಕೊರತೆ
ಬೆಂಗಳೂರು : ಮುಂಗಾರು ಅವಧಿಯ ದ್ವಿತೀಯಾರ್ಧದಲ್ಲಿ ರಾಜ್ಯದಲ್ಲಿ ಭಾರೀ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸಕ್ತ ಮುಂಗಾರು ಅವಧಿಯ ಮೊದಲಾರ್ಧ ಜುಲೈ ಅಂತ್ಯಕ್ಕೆ ಮುಕ್ತಾಯಗೊಂಡಿದ್ದು, ದ್ವಿತೀಯಾರ್ಧದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಇದೀಗ ಬಿಡುಗಡೆ ಮಾಡಿದ್ದು, ಒಟ್ಟಾರೆ ದೇಶದಲ್ಲಿ ವಾಡಿಕೆಯ ಮಳೆ ಬಂದರೂ ರಾಜ್ಯದ ಪಾಲಿಗೆ ಮಳೆ ಕೊರತೆಯಾಗುವ ಸಾಧ್ಯತೆ ಎಂದು ತಿಳಿಸಿದೆ.
ಆಗಸ್ಟ್‌ನಲ್ಲಿ ಕರಾವಳಿ, ಮಲೆ ನಾಡು ಸೇರಿ ರಾಜ್ಯದಲ್ಲಿ ಶೇ.50ರಷ್ಟು ಮಳೆ ಕೊರತೆ ಕಂಡು ಬರಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಈ ಮಳೆ ಕೊರತೆ ಪ್ರಮಾಣ ಶೇ.80ರಷ್ಟು ಇರಲಿದೆ. ಸೆಪ್ಟೆಂಬರ್‌ನಲ್ಲಿ ಒಳನಾಡು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಸುಧಾರಿಸಲಿದೆ. ಆದರೆ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.11ರಷ್ಟು ಹೆಚ್ಚಾಗಿದೆ. ಕರಾವಳಿಯಲ್ಲಿ ಶೇ.18, ಉತ್ತರ ಒಳನಾಡಿನಲ್ಲಿ ಶೇ.22ರಷ್ಟು ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.1ರಷ್ಟು ಕೊರತೆ ಕಂಡು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.58ರಷ್ಟು ಮಳೆ ಕೊರತೆ ಉಂಟಾಗಿದೆ. ರಾಮನಗರ ಶೇ.49, ಹಾಸನ ಶೇ.47 ರಷ್ಟು, ಬೆಂಗಳೂರು ನಗರ ಶೇ.36, ಕೋಲಾರ ಶೇ.34, ತುಮಕೂರು ಶೇ.28, ಶಿವಮೊಗ್ಗ ಶೇ.22 ಹಾಗೂ ಚಿಕ್ಕಬಳ್ಳಾಪುರದಲ್ಲಿ ಶೇ.18 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
