ರೈಲ್ವೆ ಕ್ರಾಸಿಂಗ್‌ನಲ್ಲಿ ಕಾಯುವ ತಾಳ್ಮೆ ಇಲ್ಲದ ಯುವಕನೊರ್ವ ಬೈಕನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಬೈಕ್‌ನ ತೂಕ 100 ಕೆಜಿಗೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಯುವಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇಂದು ಜನರಿಗೆ ಸ್ವಲ್ಪವೂ ತಾಳ್ಮೆ ಇಲ್ಲ, ಮೊಬೈಲ್ ನೋಡುವುದರಲ್ಲಿ ಗಂಟೆಗಟ್ಟಲೇ ಕಳೆಯುತ್ತಾರೆ. ಆದರೆ ಅಗತ್ಯವಾಗಿ ನಿಲ್ಲಬೇಕಾದ ರೈಲ್ವೆ ಕ್ರಾಸಿಂಗ್‌ನಲ್ಲಿ ಕಾಯಬೇಕಾದರೆ ಸಮಯ ಸುಮ್ಮನೇ ಕಳೆದು ಹೋಗುತ್ತದೆ ಎಂಬ ಭಾವನೆ ಬರುತ್ತದೆ. ಹಾಗೆಯೇ ರೈಲ್ವೆ ಕ್ರಾಸಿಂಗ್‌ನಲ್ಲಿ ಕಾಯುವುದಕ್ಕೆ ತಾಳ್ಮೆ ಇಲ್ಲದ ಯುವಕನೋರ್ವ ಬೈಕನ್ನು ಹೆಗಲ ಮೇಲಿಟ್ಟು ಹೊತ್ತುಕೊಂಡು ಹೋದಂತಹ ವಿಚಿತ್ರ ಘಟನೆಯೊಂದು ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಕೆಲವರು ಆತನನ್ನು ಬಾಹುಬಲಿ ಎಂದು ಕರೆದರೆ ಮತ್ತೆ ಕೆಲವರು ಹೀಗೆ ಕಾರಣವಿಲ್ಲದೇ ರಿಸ್ಕ್ ತೆಗೆದುಕೊಂಡಿರುವುದಕ್ಕೆ ಟೀಕೆ ಮಾಡಿದ್ದಾರೆ. ವೀಡಿಯೋದಲ್ಲಿ ರೈಲು ಪಾಸಾಗುವವರೆಗೂ ಕಾಯುವ ತಾಳ್ಮೆ ಇಲ್ಲದ ಆತ ಬೈಕನ್ನು ಅಕ್ಕಿ ಚೀಲ ಹೊತ್ತುಕೊಂಡು ಹೋದಂತೆ ಹೆಗಲ ಮೇಲಿಟ್ಟು ಬಂದ್ ಆದಂತಹ ರೈಲ್ವೆ ಕ್ರಾಸಿಂಗ್‌ನಲ್ಲಿ ದಾಟಿ ಹೋಗುವುದನ್ನು ವೀಡಿಯೋದಲ್ಲಿ ನೋಡಬಹುದು.

100 ಕೇಜಿಗೂ ಅಧಿಕ ತೂಕದ ಬೈಕ್:

ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ಭಾರತದ ಗ್ರಾಮೀಣ ಪ್ರದೇಶದಂತೆ ಈ ದೃಶ್ಯ ಕಾಣುತ್ತಿದ್ದು, ರೈಲ್ವೆ ಕ್ರಾಸಿಂಗ್‌ನ ಎರಡು ಬದಿಗಳಲ್ಲೂ ರೈಲು ಹಾದು ಹೋಗುವುದಕ್ಕಾಗಿ ರಸ್ತೆ ಬಂದ್ ಮಾಡಲಾಗಿದೆ. ಆದರೆ ಈ ಬೈಕ್ ಸವಾರ ಕೆಲ ನಿಮಿಷ ಕಾಯುವ ತಾಳ್ಮೆ ಇಲ್ಲದೇ 100 ಕೆಜಿಗೂ ಅಧಿಕ ತೂಕ ಇರುವ ಬೈಕನ್ನು ಹೆಗಲ ಮೇಲೆ ಇಟ್ಟು ನಡೆದಿದ್ದಾನೆ. ಅನೇಕರು ಈ ರೀತಿ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಹೊರುವುದರಿಂದ ತೀವ್ರ ಬೆನ್ನು ನೋವಿಗೆ ಕಾರಣವಾಗಬಹುದು ಅಥವಾ ಸಂಧಿವಾತಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಆದರೆ ಆ ಬೈಕ ಹೊತ್ತ ವ್ಯಕ್ತಿ ಮಾತ್ರ ಜಾಸ್ತಿ ಕಷ್ಟಪಟ್ಟಂತೆ ಕಾಣುತ್ತಿಲ್ಲ, ಬಹಳ ಆರಾಮವಾಗಿ ಬೈಕನ್ನು ಹೆಗಲ ಮೇಲೆ ಎತ್ತಿಇಟ್ಟ ಆತ ಸೀದಾ ರೈಲ್ವೆ ಕ್ರಾಸಿಂಗ್ ಅನ್ನು ಹಾಯಾಗಿ ದಾಟಿ ಬಂದಿದ್ದಾನೆ.

ಸಾಮಾನ್ಯವಾಗಿ ಬೈಕ್‌ಗಳು ಮತ್ತು ಇತರ ದ್ವಿಚಕ್ರ ವಾಹನಗಳು 150ರಿಂದ 200 ಕೆಜಿಯಷ್ಟು ತೂಕವಿರುತ್ತವೆ, ಆದರೆ ಆತ ಹೊತ್ತೊಯ್ಯುತ್ತಿರುವ ಬೈಕ್ ಹೀರೋ ಹೋಂಡಾ ಮಾಡೆಲ್‌ನಂತೆ ಕಾಣುತ್ತಿದ್ದು, ಇದು ಇಂಧನ ಮತ್ತು ಬೈಕ್‌ನ ಇತರ ಭಾಗಗಳನ್ನು ಒಳಗೊಂಡಂತೆ ಸರಾಸರಿ 112 ಕೆಜಿ ತೂಗುತ್ತದೆ. ವೀಡಿಯೋ ನೋಡಿದ ಅನೇಕರು ಆತನ ತಾಕತ್ತಿನ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

View post on Instagram

ಚಾಂದ್ ಚಮ್ಕೆ ಹಾಡಿಗೆ ರಷ್ಯನ್ ಪುಟಾಣಿಗಳ ಡಾನ್ಸ್‌:

ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವೀಡಿಯೋ ಹಲ್‌ಚಲ್ ಸೃಷ್ಟಿಸುತ್ತಿದೆ. ರಷ್ಯಾದ ಪುಟಾಣಿಗಳು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡುತ್ತಿದ್ದು, ಆ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. tathyakul ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಸಂಸ್ಕೃತಿಗಳು ಒಂದಾದಾಗ ಮ್ಯಾಜಿಕ್ ಸಂಭವಿಸುತ್ತದೆ. ಚಾಂದ್ ಚಮ್ಕೆ ಹಾಡಿಗೆ ನೃತ್ಯ ಮಾಡುವ ಈ ಮುದ್ದಾದ ರಷ್ಯನ್ ಮಕ್ಕಳು ಶೋವನ್ನೇ ಸೆಳೆದಿದ್ದಾರೆ. ನಮ್ಮ ಹೃದಯಗಳನ್ನು ಸಹ ಕದ್ದಿದ್ದಾರೆ. ಸಂಗೀತಕ್ಕೆ ನಿಜವಾಗಿಯೂ ಯಾವುದೇ ಮಿತಿಗಳಿಲ್ಲ ಎಂಬುದಕ್ಕೆ ಇದೊಂದು ಸಾಕ್ಷಿ. ಮುಂದಿನ ಬಾರಿ ಅವರು ಯಾವ ಬಾಲಿವುಡ್ ಹಾಡುಗಳನ್ನು ಟ್ರೈ ಮಾಡ್ಬೇಕು ಎಂದು ಬರೆದುಕೊಂಡಿದ್ದಾರೆ.

ವೀಡಿಯೋದಲ್ಲಿ ಪುಟಾಣಿಗಳು ಕೆಂಪು ಬಣ್ಣದ ಮಿಡಿ ಹಾಗೂ ತಲೆ ಮೇಲೆ ದುಪ್ಪಟ್ಟಾವನ್ನು ಧರಿಸಿ ಸೊಗಸಾಗಿ ಅಲಂಕರಿಸಿಕೊಂಡಿದ್ದು ಸೊಗಸಾಗಿ ಡಾನ್ಸ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಗೊಂಬೆಗಳೇ ಡಾನ್ಸ್ ಮಾಡಿದಂತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಮುದ್ದಾದ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: ಟರ್ಕಿ ಅಧ್ಯಕ್ಷರಿಗೂ ಮೊದಲೇ ಟೇಪ್ ಕತ್ತರಿಸಿದ ಬಾಲಕಿ: ಬಾಲಕಿಯ ಒಂದೇ ಕೂಗಿಗೆ ಕೆನೆದು ಓಡಿದ ಕುದುರೆ: ವೀಡಿಯೋ

ಇದನ್ನೂ ಓದಿ: ತೂಗಿರೆ ರಂಗನ ತೂಗಿರೆ ಕೃಷ್ಣನ: ಉಡುಪಿಯಲ್ಲಿ ಕೃಷ್ಣನ ತೊಟ್ಟಿಲು ತೂಗಿದ ಸ್ಪೀಕರ್ ಯು.ಟಿ ಖಾದರ್

View post on Instagram