ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವೀಡಿಯೋಗಳು ವೈರಲ್ ಆಗಿ ಸಂಚಲನ ಸೃಷ್ಟಿಸುತ್ತಿರುತ್ತವೆ. ಎಂದೋ ಆದ ಘಟನೆ ಮತ್ತೆ ಎಷ್ಟು ಸಮಯದ ನಂತರ ವೈರಲ್ ಆಗ್ತಿರ್ತವೆ. ಅದೇ ರೀತಿ ಇಲ್ಲೊಂದು ಕಡೆ ಟರ್ಕಿ ದೇಶದ ವೀಡಿಯೋವೊಂದು ಈಗ ಮತ್ತೆ ವೈರಲ್ ಆಗಿದ್ದು ನಗೆಯುಕ್ಕಿಸುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವೀಡಿಯೋಗಳು ವೈರಲ್ ಆಗಿ ಸಂಚಲನ ಸೃಷ್ಟಿಸುತ್ತಿರುತ್ತವೆ. ಎಂದೋ ಆದ ಘಟನೆ ಮತ್ತೆ ಎಷ್ಟು ಸಮಯದ ನಂತರ ವೈರಲ್ ಆಗ್ತಿರ್ತವೆ. ಅದೇ ರೀತಿ ಇಲ್ಲೊಂದು ಕಡೆ ಟರ್ಕಿ ದೇಶದ ವೀಡಿಯೋವೊಂದು ಈಗ ಮತ್ತೆ ವೈರಲ್ ಆಗಿದ್ದು ನಗೆಯುಕ್ಕಿಸುತ್ತಿದೆ. ಅಂದಹಾಗೆ ಇದು 2021ರ ವೀಡಿಯೋ. ದೇಶದ ರಾಜಧಾನಿ ಅಂಕಾರಾದಲ್ಲಿ ಸಾರ್ವಜನಿಕ ಉದ್ಯಾನವನವನ್ನು ದೇಶದ ಅಧ್ಯಕ್ಷರಾಗಿದ್ದ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಬೇಕಿತ್ತು. ಆದರೆ ಅವರ ಮುಂದೆ ನಿಂತಿದ್ದ ಪುಟ್ಟ ಬಾಲಕಿ ಅವರು ಕತ್ತರಿ ಹಾಕುವ ಮೊದಲೇ ರಿಬ್ಬನ್ ಕಟ್ ಮಾಡಿ ಬಿಟ್ಟಿದ್ದಳು.

ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪುಟ್ಟ ಮಕ್ಕಳನ್ನು ಸಾಂಕೇತಿಕವಾಗಿ ಉದ್ಘಾಟಿಸುವವರಂತೆ ಮುಂದೆ ನಿಲ್ಲಿಸಿರುತ್ತಾರೆ. ಅದೇ ರೀತಿ ಬಾಲಕಿ ಸೇರಿದಂತೆ ಕೆಲ ಮಕ್ಕಳನ್ನು ಅಲ್ಲಿ ನಿಲ್ಲಿಸಿದ್ದರು ಅಧ್ಯಕ್ಷರು ರಿಬ್ಬನ್‌ಗೆ ಕತ್ತರಿ ಹಾಕುವ ವೇಳೆ ಈ ಮಕ್ಕಳು ಕೈಜೋಡಿಸಲಿ ಎಂಬ ಉದ್ದೇಶದಿಂದ ಅವರ ಕೈಗೂ ಕತ್ತರಿ ನೀಡಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಎರ್ಡೋಗನ್ ಮತ್ತೊಬ್ಬ ಅಧಿಕಾರಿಯೊಂದಿಗೆ ಮಾತನಾಡುತ್ತಿದ್ದಾಗ, ಅವರ ಮುಂದೆ ನಿಂತಿದ್ದ ಹುಡುಗಿ ತನ್ನ ಕೈಯಲ್ಲಿದ ಕತ್ತರಿ ಬಳಸಿ ರಿಬ್ಬನ್ ಕತ್ತರಿಸಿಯೇ ಬಿಟ್ಟಿದ್ದಳು. ನಂತರ ಅಲ್ಲಿದ್ದ ಅಧಿಕಾರಿ ಬೇಗನೆ ರಿಬ್ಬನ್ ಅನ್ನು ಹಿಂದಕ್ಕೆ ಎತ್ತಿದರು. ಹಾಗೂ ಎರ್ಡೋಗನ್ ಅವರು ಹೊಸ ಅಂಕಾರಾ ಪೀಪಲ್ಸ್ ಪಾರ್ಕ್ ಉದ್ಘಾಟನೆಯ ಸಮಯದಲ್ಲಿ ಆ ಮಗು ಅದನ್ನು ಮತ್ತೆ ಕತ್ತರಿಸದಂತೆ ತಡೆಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇತರ ಅಧಿಕಾರಿಗಳು ಸಹ ರಿಬ್ಬನ್ ಅನ್ನು ಎತ್ತರಕ್ಕೆ ಮತ್ತು ಆ ಮಗುವಿನ ಕೈಗೆಟುಕದಂತೆ ಎತ್ತುವುದನ್ನು ವೀಡಿಯೋ ಸೆರೆ ಹಿಡಿದಿದೆ.

ಈ ವಿಡಿಯೋಗೆ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಸದ್ಯ ಆಕೆಯನ್ನು ಜೈಲಿಗಟ್ಟಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಸದ್ಯ ಏನು ಆಗಲಿಲ್ಲ, ಕಾರ್ಯಕ್ರಮ ಏನು ಆಗೇ ಇಲ್ಲ ಎಂಬಂತೆ ಮುಂದುವರೆದಿದ್ದು ಖುಷಿ ನೀಡಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram

ಬಾಲಕಿಯ ಒಂದೇ ಕೂಗಿಗೆ ಕೆನೆದಾಡುವ ಕುದುರೆ:

ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮತ್ತೊಂದು ವೀಡಿಯೋ ಇಲ್ಲಿದೆ ನೋಡಿ. ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಕೂಗುವ ಸ್ವರವನ್ನೇ ಯಾರಾದರೂ ಅನುಕರಿಸಿದರೆ ಅಚ್ಚರಿಯಿಂದ ನೋಡುತ್ತವೆ. ಮೂಕ ಪ್ರಾಣಿಗಳ ಭಾಷೆ ನಮಗೆ ಅರ್ಥವಾಗದಿದ್ದರೂ ಅವುಗಳಿಗೆ ಅದು ಅರ್ಥವಾಗುತ್ತದೆ. ಅದೇ ರೀತಿ ಇಲ್ಲಿ ಬಾಲಕಿ ಕುದುರೆಯಂತೆ ಕೂಗುತ್ತಾಳೆ. ಆಕೆಯ ಒಂದೇ ಕೂಗಿಗೆ ದೂರದಲ್ಲಿ ಮೇಯಲು ಬಿಟ್ಟ ಪಕ್ಕದ ಮನೆಯವರ ಕುದುರೆಯೊಂದು ಮೈದಾನ ತುಂಬೆಲ್ಲಾ ಓಡಲು ಶುರು ಮಾಡುತ್ತದೆ. ಈ ಹುಡುಗಿ ಬಹುಮಹಡಿ ಕಟ್ಟಡದ ಮೇಲಿಂದ ಕೂಗಿದರೆ ಆ ಕುದುರೆಓಡುತ್ತಾ ಮೈದಾನಕ್ಕೊಂದು ಸುತ್ತು ಬರುವುದನ್ನು ವೀಡಿಯೋದಲ್ಲಿ ನೋಡಬಹುದು. ಪ್ಯುಬಿಟಿ ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ಬಾಲಕಿ ತಾನು ವಾಸ ಮಾಡುವ ಕಟ್ಟಡದ ಬಾಲ್ಕನಿಯಲ್ಲಿ ನಿಂತು ಕುದುರೆ ಕೆನೆದಂತೆ ಧ್ವನಿ ಮಾಡುತ್ತಾಳೆ. ಈ ವೇಳೆ ಕುದುರೆ ಆ ಮೈದಾನದ ತುಂಬೆಲ್ಲಾ ಓಡಿ ಒಂದು ಕಡೆ ಬಂದು ಬೇಲಿಯಿಂದ ಹೊರಗೆ ಯಾರನ್ನೋ ಕಾಯುವಂತೆ ನಿಲ್ಲುವುದನ್ನು ನೋಡಬಹುದು. ನನ್ನ ಸೋದರಿ ಪಕ್ಕದ ಮನೆ ಕುದುರೆ ಜೊತೆ ಮಾತನಾಡುವುದಕ್ಕೆ ದಾರಿಯೊಂದನ್ನು ಕಂಡುಕೊಂಡಿದ್ದಾಳೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಈ ವೀಡಿಯೋ ನೋಡಿದ ಕೆಲವರು ಬಾಲಕಿ ಸ್ವರ ಕೇಳಿ ಕುದುರೆಗೆ ತಾನು ಒಂಟಿ ಅಲ್ಲ ಎಂಬ ಭಾವನೆ ಮೂಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕುದುರೆಗಳು ತಮ್ಮ ಗುಂಪಿನೊಂದಿಗೆ ವಾಸ ಮಾಡುವ ಜೀವಿಗಳು ಆತನಿಗೊಂದು ಸಂಗಾತಿ ಬೇಕಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಆತನೇಕೆ ಒಂಟಿಯಾಗಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಒಬ್ಬರು ಆತನಿಗೊಂದು ಹೆಣ್ಣು ಹುಡುಕಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ಕೂಡ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ತೂಗಿರೆ ರಂಗನ ತೂಗಿರೆ ಕೃಷ್ಣನ: ಉಡುಪಿಯಲ್ಲಿ ಕೃಷ್ಣನ ತೊಟ್ಟಿಲು ತೂಗಿದ ಸ್ಪೀಕರ್ ಯು.ಟಿ ಖಾದರ್

ಇದನ್ನೂ ಓದಿ: ವಿಮಾನ ಆಟೋ ಪೈಲಟ್‌ ಮೋಡ್‌ಗೆ ಹಾಕಿ 35,000 ಅಡಿ ಎತ್ತರದಲ್ಲಿ ರೋಮ್ಯಾನ್ಸ್ : ಕಾಕ್‌ಫಿಟ್‌ ರಹಸ್ಯ ಹೇಳಿದ ಗಗನಸಖಿ

View post on Instagram