ಟ್ರಂಪ್ ಶೇ.50 ತೆರಿಗೆ ಹೇರಿರುವ ಹೊರತಾಗಿಯೂ ಆಗಸ್ಟ್‌ನಲ್ಲಿ ಈವರೆಗೆ ಭಾರತವು ನಿತ್ಯ 20 ಲಕ್ಷ ಬ್ಯಾರೆಲ್ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಜುಲೈಗಿಂತ 4 ಲಕ್ಷ ಬ್ಯಾರೆಲ್ ಅಧಿಕ ಎಂದು ತೈಲ ಅಧ್ಯಯನ ವೇದಿಕೆ ‘ಕೆಪ್ಲರ್’ ಹೇಳಿದೆ.
ನವದೆಹಲಿ : ರಷ್ಯಾ ಜತೆ ವ್ಯಾಪಾರ ಮಾಡಿದ್ದಕ್ಕೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ.50 ತೆರಿಗೆ ಹೇರಿರುವ ಹೊರತಾಗಿಯೂ ಆಗಸ್ಟ್‌ನಲ್ಲಿ ಈವರೆಗೆ ಭಾರತವು ನಿತ್ಯ 20 ಲಕ್ಷ ಬ್ಯಾರೆಲ್ ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇದು ಜುಲೈಗಿಂತ 4 ಲಕ್ಷ ಬ್ಯಾರೆಲ್ ಅಧಿಕ ಎಂದು ತೈಲ ಅಧ್ಯಯನ ವೇದಿಕೆ ‘ಕೆಪ್ಲರ್’ ಹೇಳಿದೆ.
ಜುಲೈನಲ್ಲಿ ಪ್ರತಿ ದಿನ 16 ಲಕ್ಷ ಬ್ಯಾರೆಲ್ ತರಿಸಿಕೊಳ್ಳುತ್ತಿದ್ದ ಭಾರತ ಆಗಸ್ಟ್‌ನಲ್ಲಿ 20 ಲಕ್ಷ ಬ್ಯಾರಲ್ ಆಮದು ಮಾಡಿಕೊಳ್ಳುತ್ತಿದೆ. ಇರಾಕ್, ಸೌದಿ ಅರೇಬಿಯಾದಿಂದ ಖರೀದಿಸುತ್ತಿದ್ದ ತೈಲವನ್ನು ಕಡಿಮೆ ಮಾಡಿ ರಷ್ಯಾದಿಂದ ಹೆಚ್ಚು ಇಂಧನ ಖರೀದಿಸುತ್ತಿದೆ ಎಂದು ಅದು ಹೇಳಿದೆ. ಆಗಸ್ಟ್‌ನಲ್ಲಿ ಭಾರತ ದಿನಕ್ಕೆ 52 ಲಕ್ಷ ಬ್ಯಾರೆಲ್ ಇಂಧನದಲ್ಲಿ ರಷ್ಯಾದ ಪಾಲು ಶೇ.38ರಷ್ಟಿದೆ.
ಇನ್ನು ಅಮೆರಿಕವು 5ನೇ ದೊಡ್ಡ ತೈಲು ಪೂರೈಕೆದಾರನಾಗಿದ್ದು, ದಿನಕ್ಕೆ 2.64 ಲಕ್ಷ ಬ್ಯಾರೆಲ್ ಪೂರೈಸುತ್ತಿದೆ ಎಂದು ಕೆಪ್ಲರ್ ಹೇಳಿದೆ.
ಸೆಪ್ಟೆಂಬರ್‌ನಲ್ಲಿ ಮೋದಿ ಅಮೆರಿಕ ಪ್ರವಾಸ : ಟ್ರಂಪ್ ಭೇಟಿ ಸಾಧ್ಯತೆ
ವಿಶ್ವಸಂಸ್ಥೆ: ಭಾರತ ಮತ್ತು ಅಮೆರಿಕ ನಡುವೆ ತೆರಿಗೆ ಸಂಘರ್ಷ ಭುಗಿಲೆದ್ದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ಭೇಟಿಯಾಗಿ ತೆರಿಗೆ ಸೇರಿ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಎರಡು ದೇಶಗಳ ನಡುವಿನ ತೆರಿಗೆ ವಿವಾದಕ್ಕೆ ಸಂಬಂಧಿಸಿದ ಗೊಂದಲಕ್ಕೆ ಕೊಂಚ ಬ್ರೇಕ್ ಬೀಳುವ ನಿರೀಕ್ಷೆ ಇದೆ.
