ಹಮಾಸ್ ಉಗ್ರರನ್ನು ಸ್ವಾತಂತ್ರ್ಯವೀರ ಭಗತ್ ಸಿಂಗ್‌ಗೆ ಹೋಲಿಸಿದ ಕಾಂಗ್ರೆಸ್ ಸಂಸದ, ಭುಗಿಲೆದ್ದ ಆಕ್ರೋಶ, ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದೆ. ಕಾಂಗ್ರೆಸ್ ಸಂಸದನ ವಿರುದ್ಧ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.
ನವದೆಹಲಿ (ಅ.24) ಹಮಾಸ್ ಉಗ್ರರು, ಪ್ಯಾಲೆಸ್ತಿನ್ ಪರ ವಕಾಲತ್ತು ವಹಿಸು ಭಾರತದಲ್ಲೂ ಹಲವು ಪ್ರತಿಭಟನೆಗಳು, ಹೋರಾಟಗಳು ನಡೆದಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಸಂಸದ, ಹಮಾಸ್ ಉಗ್ರರನ್ನು ಭಾರತತದ ವೀರ ಪುತ್ರ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ಗೆ ಹೋಲಿಸಿದ್ದಾರೆ. ಹಮಾಸ್ ಹಾಗೂ ಭಗತ್ ಇಬ್ಬರ ಹೋರಾಟ ಒಂದೇ ಎಂದು ಉತ್ತರ ಪ್ರದೇಶದ ಸಹರಾನಪುರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ನೀಡಿದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇತ್ತ ಬಿಜೆಪಿ ಈ ಹೇಳಿಕೆಯನ್ನು ಖಂಡಿಸಿದೆ. ಇದು ಸ್ವಾತಂತ್ರ್ಯವೀರನಿಗೆ ಮಾಡಿದ ಅವಮಾನ ಎಂದಿದೆ. ಉಗ್ರರೊಂದಿಗೆ ಭಗತ್ ಸಿಂಗ್ ಹೋಲಿಕೆ ಮಾಡಿರುವುದು ಅತೀ ದೊಡ್ಡ ತಪ್ಪು, ತಕ್ಷಣವೇ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹಿಸಿದೆ.
ದೇಶಭಕ್ತ ಭಗತ್ ಸಿಂಗ್‌ನ ಉಗ್ರರಿಗೆ ಹೋಲಿಸಿ ಅಪಮಾನ
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪಾಡ್‌ಕಾಸ್ಟ್ ಒಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದು ಬಾಯಿತಪ್ಪಿನಿಂದ ಬಂದ ಮಾತಲ್ಲ. ಕಾರಣ ಈ ವೇಳೆ ಮಾತಿಗೆ ಸ್ಪಷ್ಟನೆ ನೀಡುವಂತೆ ಹೇಳಲಾಗಿದೆ. ಈ ವೇಳೆ ಮತ್ತೆ ಹಮಾಸ್ ಉಗ್ರರು ಹಾಗೂ ಭಗತ್ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಹಮಾಸ್ ಉಗ್ರರು ಸ್ವಾತಂತ್ರ್ಯ ಯೋಧರು ಎಂದು ಬಿಂಬಿಸಿರುವ ಇಮ್ರಾನ್ ಮಸೂದ್, ಪ್ಯಾಲೆಸ್ತಿನ್‌ಗಾಗಿ ಹಮಾಸ್ ಉಗ್ರರು ಹೋರಾಡುತ್ತಿದ್ದಾರೆ. ಹಮಾಸ್ ಉಗ್ರರು ಅವರ ನೆಲಕ್ಕಾಗಿ ಹೋರಾಡುತ್ತಿದ್ದಾರೆ. ಭಗತ್ ಸಿಂಗ್ ಕೂಡ ಈ ನೆಲಕ್ಕಾಗಿ ಹೋರಾಡಿದ್ದರು ಎಂದ ಇಮ್ರಾನ್ ಮಸೂದ್ ಹೇಳಿದ್ದಾರೆ.
ಹಮಾಸ್ ಪಡೆಯನ್ನು ಉಗ್ರರು ಕಣ್ಣಿನಿಂದ ನೋಡಲಾಗುತ್ತಿದೆ. ಇದು ತಪ್ಪು ಎಂದಿದ್ದಾರೆ. ಹಮಾಸ್ ಉಗ್ರರು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರಕಾರ ಸಮಾಜ ಸುಧಾರಕರು ಹಾಗೂ ಸ್ವಾತಂತ್ರ್ಯ ಯೋಧರು ಎಂದಿದ್ದಾರೆ.
ಬಿಜೆಪಿ ತೀವ್ರ ಆಕ್ರೋಶ, ಕ್ಷಮೆಗೆ ಪಟ್ಟು
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಿತ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ, ಭಗತ್ ಭಾರತದ ಸ್ವಾತಂತ್ರ್ಯ ವೀರ, ದೇಶ ಭಕ್ತ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಪುತ್ರ. ಆದರೆ ಈ ಭಗತ್ ಸಿಂಗ್ ಕೆಚ್ಚೆದೆಯ ಹೋರಾಟವನ್ನು ಕಾಂಗ್ರೆಸ್ ಸಂಸದರು ಅವಮಾನಿಸಿದ್ದಾರೆ. ಇದು ಅತ್ಯಂತ ಶೋಚನೀಯ ಮನಸ್ಥಿತಿಯಾಗಿದೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಂದ ಪ್ರೇರಿತವಾದ ಹೇಳಿಕೆ ಎಂದು ಪೂನಾವಾಲ ಹೇಳಿದ್ದಾರೆ.
ಕಾಂಗ್ರೆಸ್ ಪದೇ ಪದೇ ಉಗ್ರರನ್ನು ಹೊಗಳುತ್ತಿದೆ. ಈ ಮೂಲಕ ಭಾರತದ ಸ್ವಾತಂತ್ರ್ಯ ವೀರರು, ಯೋಧರನ್ನು ಅಪಮಾನಿಸುವ ಹಾಗೂ ಅವರ ತ್ಯಾಗ, ಬಲಿದಾನವನ್ನು ನಗಣ್ಯವಾಗಿ ನೋಡುತ್ತಿದೆ.ಗಾಂಧಿಯನ್ನು ಅಟ್ಟಕ್ಕೇರಿಸಲು ದೇಶದ ಸ್ವಾತಂತ್ರ್ಯವೀರರನ್ನು ಅವಮಾನಿಸುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ಕನ್ನಯ್ಯ ಕುಮಾರ್ ಹೇಳಿಕೆಯಲ್ಲಿ ಭಗತ್ ಸಿಂಗ್ ಅವರನ್ನು ಲಾಲು ಪ್ರಸಾದ್ ಯಾದವ್‌ಗೆ ಹೋಲಿಸಿದ್ದರು. ಇಂತಾ ಹೇಳಿಕೆ, ಹೋಲಿಕೆ ಕಾಂಗ್ರೆಸ್ ನಾಯಕರಿಂದ ಮಾತ್ರ ಸಾಧ್ಯ ಎಂದು ಶೆಹಜಾದ್ ಪೂನಾವಾಲ ಹೇಳಿದ್ದಾರೆ. ದೇಶದ ಹಲವು ವೀರ ಪುತ್ರರಿಗೆ ಈ ರೀತಿ ಕಾಂಗ್ರೆಸ್ ಅಪಮಾನ ಮಾಡಿದ್ದಾರೆ ಎಂದು ಪೂನಾವಾಲ ಹೇಳಿದ್ದಾರೆ.
