ನಟ ವಿಜಯ್ ಜೊಸೆಫ್ ಟಿವಿಕೆ ರ‍್ಯಾಲಿಯಲ್ಲಿ ಕಾಲ್ತುಳಿತ, ಮಕ್ಕಳು ಸೇರಿ 20ಕ್ಕೂ ಅಧಿಕ ಸಾವಿನ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಕರೂರ್ (ಸೆ.27) ತಮಿಳು ನಟ ವಿಜಯ್ ಜೊಸೆಫ್ ಕಟ್ಟಿದ ಟಿವಿಕೆ ಪಕ್ಷ ಅತೀ ಹೆಚ್ಚಿನ ಜನ ಸೇರಿಸಿ ರ‍್ಯಾಲಿ ಆಯೋಜನೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಮಿಳುನಾಡಿನ ಕರೂರ್‌ನಲ್ಲಿ ಆಯೋಜಿಸಿದ ಟಿವಿಕೆ ಪಕ್ಷದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದೆ. ಅತ್ಯಧಿಕ ಸಂಖ್ಯೆಯಲ್ಲಿ ಜನರು ಸೇರಿದ ಕಾರಣ ಪರಿಸ್ಥಿತಿ ಕೈಮೀರಿದೆ. ಕಾಲ್ತುಳಿತ ರೀತಿಯ ಪರಿಸ್ಥಿತಿಯಲ್ಲಿ ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ಮಕ್ಕಳು ಮೂರ್ಛೆ ಹೋಗಿದ್ದಾರೆ.ಸ್ಥಳೀಯ ಮಾಧ್ಯಮ ಹಾಗೂ ಮೂಲಗಳ ಪ್ರಕಾರ 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
30ಕ್ಕೂ ಹೆಚ್ಚು ಮಂದಿಗೆ ಗಾಯ
ಟಿವಿಕೆ ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇತ್ತ 20ಕ್ಕೂ ಅಧಿಕ ಮಂದಿಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಪೈಕಿ ಬಹುತೇಕ ಮಕ್ಕಳು ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿದೆ.
6 ಗಂಟೆ ಕಾದ ವಿಜಯ್ ಅಭಿಮಾನಿಗಳು, ಪರಿಸ್ಥಿತಿ ಗಂಭೀರ
ಕಳೆದ 6 ಗಂಟೆಯಿಂದ ವಿಜಯ್ ಜೊಸೆಫ್ ಅಭಿಮಾನಿಗಳು ನೆಚ್ಚಿನ ನಟ, ನಾಯಕನ ನೋಡಲು ಕಾದಿದ್ದಾರೆ. ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ. ಹೀಗಾಗಿ ಕಾಲ್ತುಳಿತ ಪರಿಸ್ಥಿತಿ ನಿರ್ಮಾಣವಾಗಿದೆ. ನಟ ವಿಜಯ್ ಬರೋಬ್ಬರಿ 6 ಗಂಟೆ ತಡವಾಗಿ ಆಗಮಿಸಿದ್ದಾರೆ. ವಿಜಯ್ ವಿಳಂಬವಾಗಿರುವುದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
ತಮಿಳು ನಟ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ ಪರಿಸ್ಥಿತಿ, ಹಲವರು ಆಸ್ಪತ್ರೆ ದಾಖಲು
ಘಟನೆಗೆ ಆಘಾತ ವ್ಯಕ್ತಪಡಿಸಿದ ಸಿಎಂ ಸ್ಟಾಲಿನ್
ಕರೂರ್ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತ ಘಟನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿದ್ದಾರೆ. ಕರೂರ್ ಜಿಲ್ಲಾ ಕಾರ್ಯದರ್ಶಿ ಪರಿಸ್ಥಿತಿ ನಿಯಂತ್ರಣ ಮಾಡುವಂತೆ ಸ್ಟಾಲಿನ್ ಸೂಚನೆ ನೀಡಿದ್ದರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ಆಸ್ಪತ್ರೆಗೆ ದೌಡಾಯಿಸಿದ ಆರೋಗ್ಯ ಸಚಿವ
ಆರೋಗ್ಯ ಸಚಿವ ಎಂ ಸುಬ್ರಹ್ಮಣ್ಯಯನ್ ಗಾಯಾಳುಗಳನ್ನು ದಾಖಲಿಸಿದ ಕರೂರ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಗಾಯಾಳುಗಳ ಆರೋಗ್ ವಿಚಾರಿಸಿದ್ದಾರೆ. ಸೂಕ್ತ ಚಿಕಿತ್ಸೆಯ ಭರವಸೆ ನೀಡಿದ್ದಾರೆ. ಆಸ್ಪತ್ರೆ ವೈದ್ಯಾಧಿಕಾರಿಗಳು, ಆಡಳಿತ ಮಂಡಳಿ ಜೊತೆಗೆ ಮಾತುಕತೆ ನಡೆಸಿದ್ದಾರೆ.
ದುಬೈನಲ್ಲಿ HDFC ಬ್ಯಾಂಕ್‌ಗೆ ನಿರ್ಬಂಧ: ಭಾರತೀಯರ ಹಣಕ್ಕೆ ಯುಎಇ ಶಾಕ್!
