ಒತ್ತಡದ ಬದುಕಿನಲ್ಲಿ ಸಂತೋಷ ಕಾಣಲು 7 ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಪರಿಣಾಮಕಾರಿಯಾಗಿ ಬದಲಾಯಿಸಬಹುದು. ಸ್ಥಿರತೆ ಮುಖ್ಯ, ಆಲಸ್ಯ ಬೇಡ.
ಇಂದಿನ ಅಧುನಿಕ ಹಾಗೂ ವೇಗದ ಬದುಕಿನಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ದೂರದ ಕನಸಿನಂತೆ ಕಾಣಿಸಬಹುದು, ದೈನದಿಂನ ಕೆಲಸದ ಒತ್ತಡ, ಖಿನ್ನತೆ,(Stress, depression )ಇವೆಲ್ಲವುಗಳಿಂದ ಮನಸ್ಸು ಜರ್ಜರಿತವಾಗಿ ಮಾನಸಿಕ ನೆಮ್ಮದಿಯನ್ನ ಕಳೆದುಕೊಳ್ಳುತ್ತಿದ್ದೇವೆ.ಆದರೆ ಈ ಒತ್ತಡದ ಬದುಕಿನಿಂದ ಹೊರಬರಬೇಕಾದರೆ ಕೆಲವೊಂದು ಚಿಕ್ಕ ಅಭ್ಯಾಸಗಳನ್ನ ಅಳವಡಿಕೊಳ್ಳುವುದರಿಂದ ಸಾಧ್ಯವಾಗುತ್ತದೆ. ನಮ್ಮ ದಿನಚರಿಯಲ್ಲಿ ಸಣ್ಣ ಸಕಾರಾತ್ಮಕ ಅಭ್ಯಾಸಗಳನ್ನ ಸೇರಿಸಿಕೊಳ್ಳುವುದರಿಂದ ದೊಡ್ಡ ವ್ಯತ್ಯಾಸವನ್ನುಂಟುಮಾಡಬಹುದು. ನಿಮ್ಮ ಸಂತೋಷವನ್ನು ಗಮನಾರ್ಹವಾಗಿ ಹೆಚ್ಚಿಸುವ ಏಳು ದೈನಂದಿನ ಅಭ್ಯಾಸಗಳು ಇಲ್ಲಿವೆ, ಕೇವಲ ಈ ಏಳು ಅಭ್ಯಾಸಗಳನ್ನ ನೀವು ರೂಢಿಸಿಕೊಳ್ಳುವುದರಿಂದ ನಿಮ್ಮ ಜೀವನವನ್ನ ಹೆಚ್ಚು ಪರಿಣಾಮಕಾರಿಯಾಗಿ ಜೀವಿಸಬಹುದು. ಹಾಗೇ ಒತ್ತಡದಿಂದ ದೂರವಿರಬಹುದು.
ಯಾವುದೇ ಅಭ್ಯಾಸವನ್ನಾದರೂ ಅದರಲ್ಲಿ ಸ್ಥಿರತೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ಈ ಸಣ್ಣ ಅಭ್ಯಾಸಗಳನ್ನು ನಿಯಮಿತವಾಗಿ ಅಳವಡಿಸಿಕೊಳ್ಳುವುದರಿಂದ, ವ್ಯಕ್ತಿಯ ಮನಸ್ಥಿತಿ ಮತ್ತು ಜೀವನಶೈಲಿ ಅವರು ಊಹಿಸದಂತಹ ಬದಲಾವಣೆಯನ್ನು ಅವರ ಜೀವನದಲಲ್ಲಿ ಕಾಣಬಹುದು.ನೀವೇನಾದರೂ ಅಭ್ಯಾಸಗಳಲ್ಲಿ ಆಲಸ್ಯವನ್ನ ತೋರಿಸಿದರೆ, ಆ ಕ್ರಮ ತಪ್ಪಿ ಹೊಗುತ್ತದೆ.
ಸರಿಯಾದ ಸಮಯಕ್ಕೆ ಮಲಗುವುದು (Going to bed at the right time) ನಿದ್ರೆ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತವಾದಂತಹ ಅಗತ್ಯ. ಅದನ್ನೆ ಸರಿಯಾಗಿ ಮಾಡಿಲ್ಲವೆಂದರೆ ಮಾನಸಿಕವಾಗಿ ನಾವು ಆರೋಗ್ಯವಾಗಿರುವುದಿಲ್ಲ. ಉತ್ತಮ ನಿದ್ರೆ ಎಲ್ಲದರ ಅಡಿಪಾಯ. ಆದರೂ, ಅನೇಕರು ದಿನಕ್ಕೆ ಬೇಕಾಗುವಷ್ಟು ನಿದ್ರೆಯನ್ನ ಸಹ ಮಾಡುವುದಿಲ್ಲ.ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಬೇಕಾಗುತ್ತದೆ. ಆದರೆ ಕೆಲವರು ನಾಲ್ಕು ಗಂಟೆಗಳಷ್ಟು ಮಲಗುವುದು ಕಡಿಮೆಯಾಗುತ್ತಿದೆ. ಮಲಗುವಾಗ ಮೊಬೈಲ್ ಹಿಡಿದು ಮಲಗುವುದು ಇದೊಂದು ಕೆಟ್ಟ ಅಭ್ಯಾಸ, ನಮ್ಮ ನಿದ್ರೆಯನ್ನ ಕಿತ್ತುಕೊಳ್ಳುವ ಮೂಲ ಇದೆ. ಮಲಗುವ ಒಂದು ಗಂಟೆಯ ಮುಂಚೆ ಮೊಬೈಲ್‌ನ್ನ ಬದಿಗಿಟ್ಟು ಮಲಗಿ. ಇದು ಉತ್ತಮ ಅಭ್ಯಾಸ.
ಸಣ್ಣ ಗುರಿಗಳನ್ನು ಹೊಂದಿಸುವುದು ಮತ್ತು ಬರೆದಿಡುವುದು (Setting and writing down small goals)
ಪ್ರತಿ ದಿನ ಕೆಲ ಕ್ಷಣಗಳನ್ನು ತೆಗೆದುಕೊಂಡು ದೊಡ್ಡದಾಗಲಿ ಚಿಕ್ಕದಾಗಲಿ, ಜೀವನದಲ್ಲಿರುವ ಉತ್ತಮ ವಿಷಯಗಳನ್ನು ನೆನಪಿಸಿಕೊಂಡು ಬರೆಯುವುದು ಮಾನಸಿಕ ಸ್ಥಿತಿಗತಿಯ ಮೇಲೆ ಮಹತ್ತ್ವದ ಪರಿಣಾಮ ಬೀರುತ್ತದೆ. ಕೃತಜ್ಞತೆ ಎಂಬುದು ನಮ್ಮ ಗಮನವನ್ನು ಕೊರತೆಗಳನ್ನೋ ಅಥವಾ ತಪ್ಪುಗಳನ್ನೋ ಕಡೆಗೆ ಅಲ್ಲ, ಈಗಾಗಲೇ ಇರುವ ಉತ್ತಮತೆಯ ಕಡೆಗೆ ಕರೆದೊಯ್ಯುತ್ತದೆ. ಈ ಸರಳ ಅಭ್ಯಾಸದಿಂದ ನಮ್ಮ ಮೆದುಳನ್ನು ಧನಾತ್ಮಕತೆಯನ್ನು ಗುರುತಿಸಲು ಪುನಃ ರೂಪಗೊಳಿಸಲಾಗುತ್ತದೆ — ಇದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಂತೋಷ ಹೆಚ್ಚಾಗುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ, ನೀವು ಕೃತಜ್ಞರಾಗಿರುವ ಮೂರು ವಿಷಯಗಳನ್ನು ಬರೆಯುವ ಮೂಲಕ, ಒಬ್ಬ ವ್ಯಕ್ತಿ ಹೆಚ್ಚು ಧನಾತ್ಮಕ ಮನೋಭಾವವನ್ನು ಬೆಳೆಸಬಹುದು. ಇದರಿಂದ ನನ್ನ ಜೀವನದಲ್ಲಿ ನಾನೆಷ್ಟು ಜೀವನದಲ್ಲಿ ತೃಪ್ತನಗಿದ್ದೀನಿ ಎಂದು ತಿಳಿಯುತ್ತದೆ.
ಯೋಗ, ಧ್ಯಾನ ಅಭ್ಯಾಸ ಮಾಡಿ (Practice yoga and meditation.)
ಜೀವನದಲ್ಲಿ ಒತ್ತಡ ಹೆಚ್ಚಾಗಿರುವಾಗ, ಕೇವಲ ನಿಮ್ಮ ಉಸಿರಾಟದತ್ತ ಗಮನ ಹರಿಸುವುದರಿಂದ ನರವ್ಯವಸ್ಥೆ ಶಮನವಾಗುತ್ತದೆ. ದಿನನಿತ್ಯ ಕೆಲ ನಿಮಿಷಗಳ ಕಾಲ ಮನನಸಭರಿತ ಉಸಿರಾಟವನ್ನು ಅಭ್ಯಾಸ ಮಾಡುವುದರಿಂದ ಆತಂಕ ಕಡಿಮೆಯಾಗುತ್ತದೆ ಮತ್ತು ಏಕಾಗ್ರತೆ ಉತ್ತಮವಾಗುತ್ತದೆ.ಇದನ್ನ ಎಲ್ಲಾ ಕಡೆಗಳಲ್ಲಿಯೂ ಮಾಡಬಹುದು. ಒತ್ತಡವನ್ನು ನಿಯಂತ್ರಿಸಲು, ಶಕ್ತಿ ಮತ್ತು ತಾಳ್ಮೆ ಹೆಚ್ಚಿಸಲು ಹಾಗೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ಪಷ್ಟತೆ ತರುವಲ್ಲಿ ಸಹಾಯ ಮಾಡುತ್ತದೆ.ಮಾತ್ತು ಮಾನಸಿಕ ನೆಮ್ಮದಿಯನ್ನ ಹೆಚ್ಚಿಸುತ್ತದೆ.ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಉತ್ತಮಗೊಳ್ಳುತ್ತದೆ.
ಪ್ರತಿದಿನ ನಿಮ್ಮನ್ನ ನೀವು ಪ್ರಶ್ನಿಸಿಕೊಳ್ಳಿ(Question yourself every day)
ಪ್ರತಿದಿನವೂ ಕೆಲವು ನಿಮಿಷಗಳನ್ನು ತೆಗೆದುಕೊಂಡು ನಿಮ್ಮ ದಿನ ಹೇಗೆ ಕಳೆಯಿತು ಎಂಬುದನ್ನು ಪರಿಶೀಲಿಸುವುದು ಸ್ವಅವಗಾಹನೆ ಮತ್ತು ವೈಯಕ್ತಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೀವನದಲ್ಲಿ ಆಗುವಂತಹ ಬದಲಾವಣೆಯ ಬಗ್ಗೆ ವಿಮರ್ಶೆ ಮಾಡುವ ಮೂಲಕ ನಮ್ಮನ್ನ ನಾವು ಸುಧಾರಿಸಿಕೊಳ್ಳಬಹುದು, ಒಬ್ಬ ವ್ಯಕ್ತಿ ಕಲಿಯುವ ಮನೋಭಾವವನ್ನು ಬೆಳೆಸಬಹುದು ಮತ್ತು ತಾವೆತ್ತ ಹೋಗುತ್ತಿದ್ದಾರೋ ಆ ದಿಕ್ಕಿನಲ್ಲಿ ಸುಧಾರಣೆ ಮಾಡಿಕೊಳ್ಳಬಹುದು. ಈ ಅಭ್ಯಾಸದಿಂದ ನಿಮ್ಮ ಭಾವನೆಗಳು, ನಡವಳಿಕೆಗಳು ಮತ್ತು ಗುರಿಗಳ ಬಗ್ಗೆ ಸ್ಪಷ್ಟ ಅರಿವು ಮೂಡುತ್ತದೆ, ಇದು ಉದ್ದೇಶಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತಿಯನ್ನು ನೀಡುತ್ತದೆ.
‘ಇಲ್ಲ’ ಎಂದು ಹೇಳುವುದು ಕಲಿಯುರಿ(Learn to say ‘no’)
ಇಲ್ಲ’ ಎನ್ನಲು ಕಲಿಯುವುದರಿಂದ ನಿಮ್ಮ ಸಮಯ, ಶಕ್ತಿ ಮತ್ತು ಆದ್ಯತೆಗಳೆಗೆ ಪ್ರಾಮುಖ್ಯತೆ ಕೊಡಿ. ಇಲ್ಲ ಎನ್ನುವುದು ಅಸಭ್ಯತೆ ಅಲ್ಲ, ಬದಲಾಗಿ ಅದು ನಿಮ್ಮನ್ನು ನೀವು ಗೌರವಿಸುವುದು ಮತ್ತು ನಿಮಗೆ ನೀವು ಹೆಚ್ಚು ಸಮಯವನ್ನ ಕೊಟ್ಟುಕೊಳ್ಳಿ, ಇಮ್ಮ ಜೊತೆ ನೀವು ಹೆಚ್ಚು ಸಮಯ ಕಳೆಯಿರಿ. ಈ ಅಭ್ಯಾಸದಿಂದ ಸ್ವಅವಗಾಹನೆ ಬೆಳೆಯುತ್ತದೆ ಮತ್ತು ನಿಮ್ಮ ಬದ್ಧತೆಗಳು ನಿಮ್ಮ ಮೌಲ್ಯಗಳೊಂದಿಗೆ ಹೊಂದಾಣಿಕೆಯಾಗುತ್ತವೆ. ನಿಮ್ಮ ಜೊತೆ ನೀವು ಹೆಚ್ಚಾಗಿ ಸಮಯ ಕಳೆಯುವುದರಿಂದ ನೀವು ಎನೆಂದು ನಿಮಗೆ ತಿಳಿಯುತ್ತದೆ. ನಿಮ್ಮ ತಪ್ಪುಗಳನ್ನ ನೀವು ತಿದ್ದಿಕೊಳ್ಳಬಹುದು.
ಸಾಮಾಜಿಕ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಿ (Question yourself every day) |
ಇಡೀ ದಿನವಿಡೀ ಮೊಬೈಲ್ (Mobile )ಮುಂದೆ ಕಾಲ ಕಳೆಯುವುದು ಶಕ್ತಿಯನ್ನು ಕುಗ್ಗಿಸಬಹುದು ಮತ್ತು ಗಮನವನ್ನು ಒಂದೇ ಕಡೆ ಕೆಂದ್ರಿಕರಿಸುತ್ತದೆ. ಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದರಿಂದ ಮನಸ್ಸು ಉತ್ತಮವಾಗುತ್ತದೆ ಮತ್ತುವಾಸ್ತವದಲ್ಲಿಇರಲು ಸಹಾಯವಾಗುತ್ತದೆ. ಮಲಗುವ ಮುನ್ನ ಒಂದು ಗಂಟೆ ಅಥವಾ ಊಟದ ಸಮಯದಲ್ಲಿ ಸಣ್ಣ ಡಿಜಿಟಲ್ ಡಿಟಾಕ್ಸ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನಿದ್ರೆ ಗುಣಮಟ್ಟ ಉತ್ತಮವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ. ಈ ಅಭ್ಯಾಸವು ಜಾಗ್ರತ ಜೀವನಶೈಲಿಯ ಅಭಿವೃದ್ಧಿಗೆ ಹಾಗೂ ತಂತ್ರಜ್ಞಾನದೊಂದಿಗೆ ಆರೋಗ್ಯಕರ ಸಂಬಂಧ ಬೆಳೆಸಲು ಸಹಾಯಮಾಡುತ್ತದೆ.
ಸಣ್ಣ ಗುರಿಗಳನ್ನು ನಿಗದಿ ಮಾಡುವುದು (Setting small goals)
ದೊಡ್ಡ ಮಹತ್ವಾಕಾಂಕ್ಷೆಗಳ ಒತ್ತಡಕ್ಕೆ ಒಳಗಾಗುವ ಬದಲು, ಗುರಿಗಳನ್ನು ಸಣ್ಣ ಮತ್ತು ನಿಭಾಯಿಸಬಹುದಾದ ಹಂತಗಳಾಗಿ ವಿಭಜಿಸುವುದರಿಂದ ಪ್ರಗತಿಯ ಶಕ್ತಿ ಉಂಟಾಗುತ್ತದೆ ಮತ್ತು ಕೆಲಸಗಳನ್ನ ಮುಂದೂಡಿಕೆಯಿಂದ ದೂರವಿರಲು ಸಹಾಯವಾಗುತ್ತದೆ.ಸಣ್ನ ಗುರಿಗಳು ಸುಲಭವಾಗಿ ಸಾಧಿಸಬಹುದಾಗಿದ್ದು ಆತ್ಮವಿಶ್ವಾಸವನ್ನು ಕಟ್ಟುತ್ತವೆ, ಜೊತೆಗೆ ಪ್ರತಿದಿನವೂ ಉತ್ಸಾಹ ಉಂಟುಮಾಡುತ್ತವೆ. ಉದಾಹರಣೆಗೆ, “ಪುಸ್ತಕವನ್ನು ಬರೆಯುವುದು” ಎಂಬ ಗುರಿಯನ್ನು ಹೊಂದುವುದರ ಬದಲು, ಪ್ರತಿದಿನ 100 ಪದಗಳನ್ನು ಬರೆಯುವುದನ್ನು ಗುರಿಯನ್ನಾಗಿ ಇಡಬಹುದು. ಈ ಅಭ್ಯಾಸವು ಕನಿಷ್ಠ ಪ್ರಗತಿಯನ್ನಾದರೂ ಆರಂಭಿಸುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ದೊಡ್ಡ ಯೋಜನೆಗಳನ್ನೂ ಸಾಧ್ಯವಾಗುವಂತೆ ಮಾಡುತ್ತದೆ.
