ಬಕೆಟ್ ಮತ್ತು ಮಗ್‌ಗಳ ಮೇಲೆ ಕಲೆಗಳು ಆವರಿಸಿ ಹಳೆಯದಾಗಿ ಕಾಣುತ್ತಿದ್ದರೆ, ಮನೆಯಲ್ಲಿಯೇ ಇರುವಂತಹ ಕೆಲವೊಂದು ಸರಳ ವಿಧಾನಗಳಿಂದ ಹೊಳೆಯುವಂತೆ ಮಾಡಬಹುದು. ನಿಂಬೆ, ಉಪ್ಪು, ಅಡುಗೆ ಸೋಡಾ, ವಿನೆಗರ್ ಮತ್ತು ಬಿಸಿನೀರು ಬಳಸಿ ಕಲೆಗಳನ್ನು ತೆಗೆದುಹಾಕುವುದು ಹೇಗೆ ಎಂಬುದನ್ನು ತಿಳಿಯಿರಿ.
ಮನೆಗೆ ಹೊಸ ಬಕೆಟ್(Bucket)ಗಳನ್ನ ತಂದಾಗ ಫಳಫಳನೇ ಹೊಳೆಯುತ್ತಿರುತ್ತವೆ ಆದರೆ ತಿಂಗಳುಗಳು ಕಳೆದಂತೆ ಹಳೆಯದಾಗುತ್ತಾ ಕಲೆಗಳು ಬಕೆಟ್(Bucket) ಮತ್ತು ಮಗ್‌ಗಳ ಮೇಲೆ ಕಲೆಗಳು ಆವರಿಸುತ್ತವೆ.ಆಗ ಬಕೆಟ್‌ಗಳು ತೀರಾ ಹಳೆಯದರಂತೆ ಕಾಣುತ್ತವೆ. ಸ್ನಾನ ಮಾಡಲೆಂದು ಬಾತ್ ರೂಮ್ ಗೆ ಹೋದಾಗ ಸ್ನಾನದ ಬಕೆಟ್ ಸ್ವಚ್ಛವಾಗಿಲ್ಲದಿದ್ದರೆ ಕಿರಿಕಿರಿ ಉಂಟಾಗುವುದು ಸಹಜ. ನೀರಿನ ಕಲೆಗಳು ಮತ್ತು ಬಿಳಿ ಪದರಗಳು ಅವುಗಳ ಮೇಲೆ ಸಂಗ್ರಹವಾಗುತ್ತವೆ. ಈ ಕಲೆಗಳು ಬಾತ್‌ರೂಮ್‌ನ ಸೌಂದರ್ಯವನ್ನು ಹಾಳುಮಾಡುತ್ತವೆ.ಕಲೆ ಹಿಡಿದಿವೆ ಎಂದು ಅವುಗಳನ್ನ ಎಸೆಯಲೂ ಆಗುವುದಿಲ್ಲ. ಅಂತ ಸಮಯದಲ್ಲಿ ಮನೆಯಲ್ಲಿಯೇ ಇರುವಂತಹ ಕೆಲವೊಂದು ಮನೆ ಮದ್ದುಗಳನ್ನು ಪ್ರಯತ್ನಿಸಿದರೆ ಬಕೆಟ್ ಮಗ್‌ಗಳನ್ನ ಹೊಳೆಯುವಂತೆ ಮಾಡಬಹುದು. ಅಷ್ಟೊಂದು ಹಣ ಕೊಟ್ಟು ತಂದಿರುವಂತಹ ಬಕೆಟ್ ಮಗ್‌ಗ(Mug)ಳನ್ನ ಕೆಲವರು ಕಲೆಗಳು ಬಂದ ತಕ್ಷಣ ಬಿಸಾಕಿಬಿಡುತ್ತಾರೆ.ಆದರೆ ಮನೆಯಲ್ಲಿಯೇ ಇರುವಂತಹ ವಸ್ತುಗಳನ್ನ ಬಳಸಿ ಹಣವನ್ನ ಉಳಿಸಬಹುದು. ಬಕೆಟ್‌ನ ಹಳದಿ ಕಲೆ ಹೋಗಿಸುವ ಸರಳ ವಿಧಾನ: ಒಂದು ಬೌಲ್‌ನಲ್ಲಿ ಒಂದು ಟೇಬಲ್ ಚಮಚ ಅಡುಗೆ ಸೋಡಾ ಹಾಕಿ, ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ.ಈ ಪೇಸ್ಟ್ ಅನ್ನು ಸ್ಕ್ರಬ್ಬರ್ ಸಹಾಯದಿಂದ ಬಕೆಟ್ ಮತ್ತು ಮಗ್ ಮೇಲೆ ಚೆನ್ನಾಗಿ ಉಜ್ಜಿ.ನಂತರ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.ಆಮೇಲೆ ಪಾತ್ರೆ ತೊಳೆಯುವ ಲಿಕ್ವಿಡ್ ಬಳಸಿ ಮತ್ತೆ ಒಮ್ಮೆ ಉಜ್ಜಿ ಸ್ವಚ್ಛಗೊಳಿಸಿ.ಕೊನೆಯಲ್ಲಿ ತಣ್ಣೀರಿನಿಂದ ಬಕೆಟ್ ಅಥವಾ ಮಗ್‌ಗಳನ್ನು ಸರಿಯಾಗಿ ಉಜ್ಜಿ ತೊಳೆಯಿರಿ.
ನಿಂಬೆ ಮತ್ತು ಉಪ್ಪಿನಿಂದ ಬಕೆಟ್ ಕ್ಲೀನ್ ಮಾಡುವ ವಿಧಾನ: ಬಕೆಟ್‌ನ ಹಳದಿ ಕಲೆಗಳನ್ನು ತೆಗೆದುಹಾಕಲು ನಿಂಬೆಹಣ್ಣು(Lemon) ಮತ್ತು ಉಪ್ಪು (Salt)ಉತ್ತಮ ಮನೆಮದ್ದು.ಮೊದಲಿಗೆ ಒಂದು ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ.ತಟ್ಟೆಯಲ್ಲಿ ಸ್ವಲ್ಪ ಉಪ್ಪು ಹಾಕಿ, ಕತ್ತರಿಸಿದ ನಿಂಬೆಯನ್ನು ಅದರಲ್ಲಿ ಮುಳುಗಿಸಿ ಬಕೆಟ್ ಮೇಲೆ ಉಜ್ಜಿ.ನಂತರ ಸ್ವಲ್ಪ ಉಪ್ಪನ್ನು ಬಕೆಟ್ ಮೇಲೆಯೇ ಸಿಂಪಡಿಸಿ, ಬ್ರಷ್ ಬಳಸಿ ಸ್ಕ್ರಬ್ ಮಾಡಿ.ಇದಾದ ಬಳಿಕ ಸರ್ಫ್‌ನ ದಪ್ಪ ದ್ರಾವಣವನ್ನು ತೆಗೆದು, ಸ್ಕ್ರಬ್ಬರ್‌ನಿಂದ ಚೆನ್ನಾಗಿ ಉಜ್ಜಿ. ಕೊನೆಗೆ ಶುದ್ಧ ನೀರಿನಿಂದ ಬಕೆಟ್ ಅನ್ನು ತೊಳೆದುಕೊಳ್ಳಿ.
ಅಡುಗೆ ಸೋಡಾ(Baking soda) ಚಮಚ ಅಡುಗೆ ಸೋಡಾಗೆ ಒಂದು ಚಮಚದಷ್ಟು ನಿಂಬೆ ರಸ ಸೇರಿಸಿ ದಪ್ಪಗೆ ಪೇಸ್ಟ್ ರೀತಿ ರೆಡಿ ಮಾಡಿಕೊಳ್ಳಿ.ಇನ್ನು ಈ ಪೇಸ್ಟ್ ಅನ್ನು ಬಕೆಟ್ ಮತ್ತು ಮಗ್ ಮೇಲೆ ಹಚ್ಚಿ 5-10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಸ್ವಲ್ಪ ಅದರ ಮೇಲೆ ಸ್ವಲ್ಪ ಮಸ್ಸಾಜ್ ಮಾಡುವ ರೀತಿಯಲ್ಲಿ ತಿಕ್ಕಿ ಆ ಬಳಿಕ ಇದನ್ನು ಚೆನ್ನಾಗಿ ನೀರಿ ನಿಂದ ಸ್ವಚ್ಛಗೊಳಸಿ.ಈ ವಿಧಾನವನ್ನ ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡಿ.
ವಿನೆಗರ್ (Vinegar) ಬಿಳಿ ವಿನೆಗರ್ ಆಹಾರದಲ್ಲಿ ರುಚಿ ಹೆಚ್ಚಿಸುವುದಲ್ಲದೆ, ಕ್ಲಿಷ್ಟಕರವಾದ ಕಲೆಗಳನ್ನು ತೆಗೆದುಹಾಕುವಲ್ಲಿಯೂ ಸಹಾಯ ಮಾಡುತ್ತದೆ.ಒಂದು ದೊಡ್ಡ ಬಕೆಟ್‌ನಲ್ಲಿ 2 ಚಮಚ ಬಿಳಿ ವಿನೆಗರ್ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಈ ಮಿಶ್ರಣವನ್ನು ನೊರೆಯಂತೆ ತಯಾರಿಸಿ, ನಂತರ ಸ್ಪಂಜ್ ಅನ್ನು ಅದರಲ್ಲಿ ನೆನೆಸಿ ಬಕೆಟ್ ಅನ್ನು ಸ್ಕ್ರಬ್ ಮಾಡಿ. ಕೆಲವೇ ನಿಮಿಷಗಳಲ್ಲಿ ಮೇಲ್ಮೈಯಲ್ಲಿರುವ ಹಳದಿಕಲೆಗಳು ನಿಧಾನವಾಗಿ ಬಿಡಲು ಆರಂಭಿಸುತ್ತವೆ.ಆ ನಂತರ ನೀರಿನಿಂದ ಬಕೆಟ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ.
ಡಿಟರ್ಜೆಂಟ್ ಮತ್ತು ಬಿಸಿನೀರು ಮೊದಲು ಎರಡು ಲೀಟರ್ ನೀರನ್ನು ಬಿಸಿ ಮಾಡಿ, ಅದಕ್ಕೆ ಸರ್ಫ್ ಸೇರಿಸಿ.ಮಿಶ್ರಣ ಕುದಿದ ಬಳಿಕ ಅದರಲ್ಲಿ 2–3 ನಿಂಬೆಹಣ್ಣಿನ ರಸವನ್ನು ಹಾಕಿ.ಈಗ ಆ ಮಿಶ್ರಣದ ಅರ್ಧವನ್ನು ಬಕೆಟ್ ಒಳಗೆ ಹಾಕಿ,ಬ್ರಷ್‌ನಿಂದ ಒಳಭಾಗವನ್ನು ಉಜ್ಜಿ.ಉಳಿದ ಅರ್ಧ ಮಿಶ್ರಣವನ್ನು ಬ್ರಷ್‌ಗೆ ಹಚ್ಚಿ, ಬಕೆಟ್ ಹೊರಭಾಗವನ್ನು ಸ್ಕ್ರಬ್ ಮಾಡಿ. 5-10 ಉಜ್ಜಿ ಬಕೆಟ್‌ನ ಯಾವುದೇ ಕಲೆಯಾದರೂ ಮಾಯವಾಗುತ್ತದೆ.
