Heart Attack : ಹೃದಯಾಘಾತದ ಸಂಖ್ಯೆಯಲ್ಲಿ ಹೆಚ್ಚಳವಾಗಿರೋದು ಭಯ ಹುಟ್ಟಿಸಿದೆ. ನಮ್ಮ ಹೃದಯ ಕಾಪಾಡಿಕೊಳ್ಳೋದು ಹೇಗೆ ಎನ್ನುವ ಪ್ರಶ್ನೆ ಶುರುವಾಗಿದೆ. ಅದಕ್ಕೆ ವೈದ್ಯರು ಸೂಕ್ತ ಸಲಹೆ ನೀಡಿದ್ದಾರೆ. 

ನಮ್ಮ ಹೃದಯ (Heart) ಕಾಪಾಡಿಕೊಳ್ಳೋದೇ ಕಷ್ಟ ಎನ್ನುವ ಸ್ಥಿತಿ ಈಗಿದೆ. ಸಡನ್ ಡೆತ್ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಮಕ್ಕಳು ಕೂಡ ಹೃದಯಾಘಾತಕ್ಕೆ ಒಳಗಾಗ್ತಿದ್ದಾರೆ. ನಮ್ಮ ಹೃದಯ ಕಾಪಾಡಿಕೊಳ್ಳೋದು ಹೇಗೆ ಎನ್ನುವ ಪ್ರಶ್ನೆಗೆ ಡಾಕ್ಟರ್ ನಾಗಮಲೇಶ್ ಉತ್ತರ ನೀಡಿದ್ದಾರೆ. ರ್ಯಾಪಿಡ್ ರಶ್ಮಿ (Rapid Rashmi) ಶೋಗೆ ಬಂದ ಡಾ. ನಾಗಮಲೇಶ್ ಹೃದಯಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಭಾರತದಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಏನು? : 

ಭಾರತದಲ್ಲಿ ಮೊದಲಿಗಿಂತ ಈಗ ಹೃದಯಾಘಾತದ ಸಂಖ್ಯೆ ಡಬಲ್ ಆಗಿದೆ. ಇದಕ್ಕೆ ಕಾರಣ ಆಹಾರ ಸೇವನೆಯಲ್ಲಿ ಆಗ್ತಿರುವ ಬದಲಾವಣೆ. ಜನರು ಆಯಿಲ್, ಸಾಲ್ಟ್ ಸೇರಿದಂತೆ ಹೆಚ್ಚು ಹೊರಗಿನ, ರುಚಿಕರ ಆಹಾರ ಸೇವನೆ ಮಾಡ್ತಿದ್ದಾರೆ. ಈಗಿನ ದಿನಗಳಲ್ಲಿ ಹೊಟೇಲ್ ಆಹಾರ ಸೇವನೆ ದೊಡ್ಡ ವಿಷ್ಯವಲ್ಲ. ವಾರದಲ್ಲಿ ಒಂದು ದಿನ ಹೊಟೇಲ್ ಆಹಾರ ತಿನ್ನುವ ಜನರು, ದೈಹಿಕ ವ್ಯಾಯಾಮದಿಂದ ಸಂಪೂರ್ಣ ದೂರವಿದ್ದಾರೆ ಎನ್ನುತ್ತಾರೆ ಡಾ. ನಾಗಮಲೇಶ್.

ಅಧಿಕ ಯೂರಿಕ್ ಆಸಿಡ್ ಹೊಂದಿರುವ ಜನರು ತಿನ್ನಬಾರದ ಹಣ್ಣುಗಳು

ಕೆಟ್ಟ ಹವ್ಯಾಸ : 

ಡಾಕ್ಟರ್ ನಾಗಮಲೇಶ್ ಅವರ ಪ್ರಕಾರ, ಹೃದಯಾಘಾತಕ್ಕೆ ಇನ್ನೊಂದು ಮುಖ್ಯ ಕಾರಣ ಆಲ್ಕೋಹಾಲ್, ಸ್ಮೋಕಿಂಗ್. ಯುವಕರಲ್ಲಿ ಇದ್ರ ಸೇವನೆ ಹೆಚ್ಚಾಗ್ತಿದೆ. ಇದಲ್ದೆ ಜನರು ಡ್ರಗ್ಸ್ ಸೇವನೆ ಹೆಚ್ಚು ಮಾಡಿದ್ದಾರೆ. ಯುವಕರಿಗೆ ಡ್ರಗ್ಸ್ ಸುಲಭವಾಗಿ ಸಿಗ್ತಿದೆ. ಇದು ಸಡನ್ ಡೆತ್ ಗೆ ಕಾರಣವಾಗ್ತಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಲೈಫ್ ಸ್ಟೈಲ್ ನಲ್ಲಿ ನಾವು ಮಾಡ್ತಿರುವ ತಪ್ಪೇನು? : ವರ್ಕ್ ಔಟ್ ಸಂಸ್ಕೃತಿ ನಮ್ಮಲ್ಲಿಲ್ಲ. ಜನರು ಅದ್ರಲ್ಲೂ ಯುವಕರು ಜಿಮ್, ವಾಕಿಂಗ್ ಮಾಡ್ತಿಲ್ಲ. ಹಿಂದಿನಂತೆ ಜನರು ಹೆಚ್ಚು ದೈಹಿಕ ಕೆಲ್ಸ ಮಾಡ್ತಿಲ್ಲ. ಇದ್ರಿಂದ ಹೃದಯಾಘಾತವಾಗ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಕಾರ್ಡಿಯೋ, ಸ್ಟ್ರೆಚ್ ಮತ್ತು ಮಸಲ್ ಸ್ಟ್ರೆಂಥ್ ಎಲ್ಲರದ ಮೇಲೂ ವರ್ಕ್ ಮಾಡ್ಬೇಕು. ವಾಕಿಂಗ್, ಜಿಮ್ ಬೋರ್ ಎನ್ನುವ ಯುವಕರು ಯಾವುದಾದ್ರೂ ಗೇಮ್ ಆಡ್ಬಹುದು. ಗೇಮ್ ಕೂಡ ನಮ್ಮ ಹೃದಯವನ್ನು ಗಟ್ಟಿಮಾಡುತ್ತೆ ಎಂದಿದ್ದಾರೆ ಡಾ. ನಾಗಮಲೇಶ್. ಸ್ಟ್ರೆಸ್ ಕೂಡ ಹೃದಯಾಘಾತಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅನಗತ್ಯ ವಿಷ್ಯಗಳು ನಮ್ಮ ಸ್ಟ್ರೆಸ್ ಹೆಚ್ಚು ಮಾಡುತ್ತೆ ಎಂದ ಅವರು, ಸೋಶಿಯಲ್ ಮೀಡಿಯಾ ಬಳಕೆ ಮಾಡುವ ಸಮಯದಲ್ಲಿ ವರ್ಕ್ ಔಟ್, ಆರೋಗ್ಯಕ್ಕೆ ಆದ್ಯತೆ ನೀಡಿ ಎಂದಿದ್ದಾರೆ. ಕಾಫಿ – ಟೀ ಬದಲು ಗ್ರೀನ್ ಟೀ ಸೇವನೆ ಮಾಡಿ, ಆಯಿಲ್ ನಲ್ಲಿ ಆಲಿವ್ ಆಯಿಲ್ ಬೆಸ್ಟ್ ಎಂದಿದ್ದಾರೆ.

ಗರ್ಭ ನಿರೋಧಕ ಕಾಪರ್‌ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!

ಹೃದಯಾಘಾತದ ಲಕ್ಷಣ : 

ಹಾರ್ಟ್ ಅಟ್ಯಾಕ್ ಲಕ್ಷಣ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತದೆ. ಹೃದಯದಲ್ಲಿ ನೋವು, ಲೆಫ್ಟ್ ತೋಳಿನಲ್ಲಿ ನೋವು, ನೆಕ್ ಪೇನ್, ಗಡ್ಡದಲ್ಲಿ ನೋವು, ನಡೆದಾಗ ನೋವು ಹೆಚ್ಚಾಗುವುದು, ಸುಸ್ತು, ಅನಿಯಮಿತ ಬೆವರು ಸಾಮಾನ್ಯ ಲಕ್ಷಣ. ಆದ್ರೆ ಕೆಲವರಿಗೆ ಗ್ಯಾಸ್ಟ್ರಿಕ್ ನಂತೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಪತ್ತೆ ಮಾಡುವುದು ಕಷ್ಟ ಎಂದಿದ್ದಾರೆ. ಮಧುಮೇಹಿಗಳಿಗೆ ಯಾವುದೇ ನೋವಿಲ್ಲದೆ, ಬರೀ ಸುಸ್ತು, ಹೃದಯಾಘಾತದ ಲಕ್ಷಣವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಹೃದಯಾಘಾತವಾದ ತಕ್ಷಣ ಏನು ಮಾಡ್ಬೇಕು? :

 ಮನೆಯಲ್ಲಿ ಲಭ್ಯವಿದ್ರೆ ಆಸ್ಪಿರಿನ್ ತೆಗೆದುಕೊಳ್ಳಬಹುದು. ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗುವುದು ಒಳ್ಳೆಯದು. ವಾಕಿಂಗ್, ಡ್ರೈವಿಂಗ್ ಅವೈಡ್ ಮಾಡಬೇಕು, ತಕ್ಷಣ ಸಿಪಿಆರ್ ಮಾಡಿದ್ರೆ ರೋಗಿ ಬೇಗ ಸರ್ವೈವ್ ಆಗ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ಹೃದಯಾಘಾತದ ಅಪಾಯ ಯಾರಿಗೆ ಹೆಚ್ಚು? : 

ಮಧುಮೇಹಿಗಳಿಗೆ ಹೃದಯಾಘಾತದ ಅಪಾಯ ಹೆಚ್ಚು. ಡಯಾಬಿಟಿಸ್ ನಿಯಂತ್ರಣ ಮಾಡಿಕೊಳ್ಳದ, ಸ್ಮೋಕ್ ಮಾಡುವ, ಆಲ್ಕೋಹಾಲ್ ಸೇವನೆ ಮಾಡುವ, ಅತಿಯಾದ ಕೊಬ್ಬು ಹೊಂದಿರುವ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗೋದು ಹೆಚ್ಚು.

YouTube video player