ಇತ್ತೀಚಿನ ದಿನಗಳಲ್ಲಿ 7-8 ವರ್ಷದಲ್ಲೇ ಹೆಣ್ಣು ಮಕ್ಕಳಿಗೆ ಪಿರಿಯಡ್ಸ್ ಆಗುತ್ತಿರೋದು ಯಾಕೆ?
ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗಿಯರು 7-8 ವರ್ಷ ವಯಸ್ಸಿನಲ್ಲೇ ಋತುಮತಿಯಾಗೋದನ್ನು ಕಾಣಬಹುದು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಋತುಚಕ್ರವಾಗುವುದಕ್ಕೆ ಕೆಲವು ವಿಶೇಷ ಕಾರಣಗಳಿವೆ, ಅದರ ಬಗ್ಗೆ ನೀವು ತಿಳಿದಿರಲೇಬೇಕು.

ದೈಹಿಕ ಬದಲಾವಣೆಗಳು
ಇಂದಿನ ಯುವ ಪೀಳಿಗೆಯಲ್ಲಿ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಕಂಡುಬರುತ್ತಿವೆ. ಸಾಮಾನ್ಯವಾಗಿ ಹದಿಹರೆಯದಲ್ಲಿ ಬರುವ ಅನೇಕ ದೈಹಿಕ ಬದಲಾವಣೆಗಳು, 7-8 ವರ್ಷ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿವೆ.
7-8 ವರ್ಷದಲ್ಲೇ ಪಿರಿಯಡ್ಸ್
ಈ ಬದಲಾವಣೆಯು ಹುಡುಗಿಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೇವಲ 7-8 ವರ್ಷ ವಯಸ್ಸಿನ ಚಿಕ್ಕ ಹುಡುಗಿಯರು ಸಹ ಋತುಮತಿಯಾಗುತ್ತಿದ್ದಾರೆ. ಇದು ಕಳವಳಕಾರಿ ವಿಷಯ. ಯಾಕೆ ಹೆಣ್ಣು ಮಕ್ಕಳು ಸಣ್ಣ ಪ್ರಾಯದಲ್ಲಿಯೇ ಋತುಮತಿಯಾಗುತ್ತಿದ್ದಾರೆ ಅನ್ನೋದನ್ನು ನೋಡೋಣ.
ಅಕಾಲಿಕ ಪ್ರೌಢಾವಸ್ಥೆಯ ಪರಿಣಾಮ
ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮೈ ನೆರೆಯುತ್ತಿದ್ದಾರೆ. ಈ ಸ್ಥಿತಿಯನ್ನು ಅಕಾಲಿಕ ಪ್ರೌಢಾವಸ್ಥೆ ಎಂದು ಕರೆಯಲಾಗುತ್ತದೆ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಅಕಾಲಿಕ ಪ್ರೌಢಾವಸ್ಥೆ ಎಂದರೇನು?
ಅಕಾಲಿಕ ಪ್ರೌಢಾವಸ್ಥೆ ಎಂದರೆ ಮಕ್ಕಳು ಸಾಮಾನ್ಯಕ್ಕಿಂತ ಮೊದಲೇ ಪ್ರೌಢಾವಸ್ಥೆಗೆ ಬರುವ ಸ್ಥಿತಿ. ಹುಡುಗಿಯರಲ್ಲಿ ಇದು ಸಾಮಾನ್ಯವಾಗಿ 8 ವರ್ಷಕ್ಕಿಂತ ಮೊದಲು ಪ್ರಾರಂಭವಾಗುವ ಋತುಚಕ್ರದ ರೂಪದಲ್ಲಿ ಪ್ರಕಟವಾಗುತ್ತದೆ. ಈ ಸ್ಥಿತಿಯು ಹಾರ್ಮೋನುಗಳ ಬದಲಾವಣೆಗಳಿಂದ (hormonal changes) ಉಂಟಾಗುತ್ತದೆ, ಇದು ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತದೆ.
ಅಕಾಲಿಕ ಪ್ರೌಢಾವಸ್ಥೆಗೆ ಕಾರಣಗಳು
ಈ ಸ್ಥಿತಿಯ ಹಿಂದೆ ಹಲವು ಕಾರಣಗಳಿರಬಹುದು. ಇಂದಿನ ಕೆಟ್ಟ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣ. ಅಲ್ಲದೆ, ಬದಲಾಗುತ್ತಿರುವ ಪರಿಸರ ಅಥವಾ ಹವಾಮಾನ ಬದಲಾವಣೆಯೂ ಇದರ ಹಿಂದಿನ ಪ್ರಮುಖ ಕಾರಣವಾಗಿರಬಹುದು. ಇತ್ತೀಚಿನ ದಿನಗಳಲ್ಲಿ, ಮಕ್ಕಳ ಆಹಾರದಲ್ಲಿ ಎಲ್ಲವೂ ಕಲಬೆರಕೆ ಅಥವಾ ರಾಸಾಯನಿಕಗಳಿಂದ ತುಂಬಿದೆ. ಗರ್ಭದಿಂದಲೇ ಚುಚ್ಚುಮದ್ದು ಮತ್ತು ಔಷಧಿಗಳ ಅಭ್ಯಾಸದಿಂದಾಗಿ, ಮಕ್ಕಳ ದೇಹವು ಭ್ರೂಣದ ಹಂತದಲ್ಲಿಯೇ ರಾಸಾಯನಿಕಗಳೊಂದಿಗೆ ಸಂಪರ್ಕಕ್ಕೆ ಬರುತ್ತದೆ.
ಜನನದ ನಂತರದ ಪರಿಸ್ಥಿತಿಗಳು
ಮಗುವಿನ ಜನನದ ನಂತರ, ಹಾಲಿನಿಂದ ಹಿಡಿದು ಆಹಾರದವರೆಗೆ ಎಲ್ಲವೂ ಕಲಬೆರಕೆಯಾಗುತ್ತದೆ. ಇದಲ್ಲದೆ, ಮಕ್ಕಳ ಉತ್ತಮ ಬೆಳವಣಿಗೆಗೆ ಬೆಳವಣಿಗೆಯ ಹಾರ್ಮೋನುಗಳನ್ನು ಬಳಸಲಾಗುತ್ತದೆ, ಇದು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಿದೆ. ಇದಲ್ಲದೆ, ಪ್ಲಾಸ್ಟಿಕ್‌ನಲ್ಲಿರುವ ಆಹಾರ ಪ್ಯಾಕೇಜಿಂಗ್‌ನಲ್ಲಿ ಕಂಡುಬರುವ ಬಿಪಿಎ (ಬಿಸ್ಫೆನಾಲ್ ಎ) ನಂತಹ ರಾಸಾಯನಿಕಗಳು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತವೆ.