ಈ 5 ವಸ್ತುಗಳನ್ನ ಮರೆತೂ ಕೂಡ ಮಂಚದ ಕೆಳಗಿಡಬಾರದು
what not to keep under bed: ಅನೇಕರು ಮಂಚದ ಕೆಳಗೆ ಕೂಡ ಹಲವು ವಸ್ತುಗಳನ್ನು ಇಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯ ಮತ್ತು ಮನಸ್ಸಿನ ಶಾಂತಿಗೆ ಹಾನಿಕರ. ಹಾಗಾದ್ರೆ ಮಂಚದ ಕೆಳಗೆ ಯಾವ ವಸ್ತುಗಳನ್ನು ಇಡಬಾರದು?.

ಯಾವ ವಸ್ತುಗಳನ್ನು ಇಡಬಾರದು?
ಇತ್ತೀಚಿನ ದಿನಗಳಲ್ಲಿ ಎಷ್ಟೇ ದೊಡ್ಡ ಮನೆಯಿದ್ದರೂ, ಸಾಮಾನು ಇಡೋಕೆ ಜಾಗ ಇಲ್ಲ ಅಂತ ಫೀಲ್ ಆಗೋರು ತುಂಬಾ ಜನ ಇದ್ದಾರೆ. ಮನೆಯ ಪ್ರತಿಯೊಂದು ಮೂಲೆಯಲ್ಲೂ ಕಪಾಟು ಮಾಡಿಸಿ, ಎಲ್ಲವನ್ನೂ ಅದರಲ್ಲಿ ಇಡ್ತಾರೆ. ಇದರ ಭಾಗವಾಗಿ, ಅನೇಕರು ಮಂಚದ ಕೆಳಗೆ ಕೂಡ ಹಲವು ವಸ್ತುಗಳನ್ನು ಇಡುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯ ಮತ್ತು ಮನಸ್ಸಿನ ಶಾಂತಿಗೆ ಹಾನಿಕರ. ಮಂಚದ ಕೆಳಗೆ ಯಾವ ವಸ್ತುಗಳನ್ನು ಇಡಬಾರದು? ಅದರಿಂದ ಆಗುವ ನಷ್ಟಗಳೇನು ನೋಡೋಣ.
ಆಹಾರ
ರಾತ್ರಿ ಹಸಿವಾದಾಗ ತಿನ್ನಲು ಸ್ನ್ಯಾಕ್ಸ್ ಅನ್ನು ಮಂಚದ ಕೆಳಗೆ ಇಡುವ ಅಭ್ಯಾಸ ಹಲವರಿಗಿದೆ. ಇದು ಅನುಕೂಲಕರ ಎನಿಸಿದರೂ, ಇದರಿಂದ ಹಲವು ಸಮಸ್ಯೆಗಳು ಬರಬಹುದು. ಆಹಾರದ ವಾಸನೆಗೆ ಇರುವೆ, ಸೊಳ್ಳೆ, ಇಲಿ, ಕೀಟಗಳು ಕೋಣೆಗೆ ಬರುತ್ತವೆ. ಇದರಿಂದ ವೈರಸ್, ಬ್ಯಾಕ್ಟೀರಿಯಾ ಬೆಳೆಯಬಹುದು. ಹಾಗಾಗಿ, ಇಂತಹ ತಪ್ಪು ಮಾಡಬೇಡಿ. ಆಹಾರ ಪದಾರ್ಥಗಳನ್ನು ಅಡುಗೆಮನೆಯಲ್ಲಿ, ಸ್ವಚ್ಛವಾದ ಡಬ್ಬದಲ್ಲಿ ಇಡಬೇಕು.
ಎಲೆಕ್ಟ್ರಾನಿಕ್ ವಸ್ತು
ಮಂಚದ ಕೆಳಗೆ ಕರೆಂಟ್ ವಸ್ತುಗಳು, ಹೀಟರ್, ಐರನ್ ಬಾಕ್ಸ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡುವುದು ಅಪಾಯಕಾರಿ. ಧೂಳು ಸೇರಿ ವೈರ್‌ಗಳು ಬಿಸಿಯಾಗಿ ಬೆಂಕಿ ಹೊತ್ತಿಕೊಳ್ಳಬಹುದು. ತೇವಾಂಶವಿರುವಲ್ಲಿ ವಿದ್ಯುತ್ ವಸ್ತುಗಳನ್ನು ಇಡುವುದರಿಂದ ಶಾರ್ಟ್ ಸರ್ಕ್ಯೂಟ್ ಅಪಾಯ ಹೆಚ್ಚುತ್ತದೆ. ಆದ್ದರಿಂದ, ಇವುಗಳನ್ನು ಮಂಚದ ಕೆಳಗೆ ಇಡಬೇಡಿ.
ಹರಿತವಾದ ವಸ್ತು
ಕೆಲವರು ಆತ್ಮರಕ್ಷಣೆಗಾಗಿ ಆಯುಧ ಅಥವಾ ಹರಿತವಾದ ವಸ್ತುಗಳನ್ನು ಮಂಚದ ಕೆಳಗೆ ಇಡುತ್ತಾರೆ. ಆದರೆ ಇದು ಅಪಾಯಕಾರಿ. ಮಕ್ಕಳಿರುವ ಮನೆಯಲ್ಲಿ ಈ ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ಇವುಗಳನ್ನು ಯಾವಾಗಲೂ ಲಾಕ್ ಮಾಡಿದ ಕಪಾಟಿನಲ್ಲಿ ಅಥವಾ ಮಕ್ಕಳಿಗೆ ಸಿಗದ ಜಾಗದಲ್ಲಿ ಇಡಬೇಕು.
ಶೂ ಅಥವಾ ಹಳೆಯ ಬಟ್ಟೆ
ಮಂಚದ ಕೆಳಗೆ ಶೂ ಅಥವಾ ಹಳೆಯ ಬಟ್ಟೆಗಳನ್ನು ಇಡುವ ಅಭ್ಯಾಸ ಹಲವರಿಗಿದೆ. ಆದರೆ ಇವು ಕೆಟ್ಟ ವಾಸನೆ, ಧೂಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಇದರಿಂದ ಅಲರ್ಜಿ ಸಮಸ್ಯೆ ಬರಬಹುದು. ಹಾಗಾಗಿ ಇವುಗಳನ್ನು ಮಂಚದ ಕೆಳಗೆ ಇಡಬಾರದು.
ಬಳಕೆಯಾಗದ ವಸ್ತು
ಬಳಕೆಯಾಗದ ವಸ್ತುಗಳನ್ನು ಕೂಡ ಮಂಚದ ಕೆಳಗೆ ಇಡಬಾರದು. ವಾಸ್ತು ಪ್ರಕಾರ ಇದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ನಿದ್ರೆಗೆ ಅಡ್ಡಿಯಾಗಬಹುದು. ಮಾನಸಿಕ ಸಮಸ್ಯೆಗಳೂ ಬರಬಹುದು. ಆದ್ದರಿಂದ, ಯಾವಾಗಲೂ ಮಂಚದ ಕೆಳಗಿನ ಜಾಗವನ್ನು ಸ್ವಚ್ಛವಾಗಿಡಬೇಕು.