ನೆಲ ಒರೆಸುವಾಗ ಈ ಎರಡು ಪದಾರ್ಥವನ್ನ ನೀರಿನಲ್ಲಿ ಬೆರೆಸಿ..ಹಲ್ಲಿ, ಜಿರಲೆ ಹತ್ತಿರಕ್ಕೂ ಸುಳಿಯಲ್ಲ
DIY pest control mopping: ದಿನ ನಿತ್ಯ ನಾವು ಬಳಸುವ ಅಡುಗೆಮನೆಯ ಪದಾರ್ಥವನ್ನ ಒರೆಸುವ ನೀರಿನಲ್ಲಿ ಬೆರೆಸುವುದರಿಂದ ಮನೆ ಫಳ ಫಳ ಹೊಳೆಯುವುದಲ್ಲದೆ, ಫ್ರೆಶ್ ಆಗಿ ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜಿರಲೆಗಳು ಮತ್ತು ಹಲ್ಲಿಗಳು ಸಹ ಶಾಶ್ವತವಾಗಿ ಓಡಿಹೋಗುತ್ತವೆ.

ಜಿರಲೆ, ಹಲ್ಲಿಗಳು ಶಾಶ್ವತವಾಗಿ ಓಡಿಹೋಗ್ತವೆ
ಮಳೆಗಾಲ ಅಥವಾ ಥಂಡಿ ವಾತಾವರಣದಲ್ಲಿ ಮನೆಯಲ್ಲಿ ಜಿರಲೆಗಳು, ಹಲ್ಲಿಗಳು ಮತ್ತು ಇತರ ಕೀಟಗಳು ಹೆಚ್ಚಾಗುವುದು ಸಾಮಾನ್ಯ. ಮನೆಯನ್ನು ನಾವೆಷ್ಟೇ ಸ್ವಚ್ಛಗೊಳಿಸಿದರೂ ಇವು ಹಿಂದಿನಿಂದ ತೊಂದರೆ ಹೆಚ್ಚಿಸುತ್ತಲೇ ಇರುತ್ತದೆ. ಆದರೆ ಈ ಕೀಟಗಳನ್ನು ಕೆಲವು ಸರಳ ಮತ್ತು ನೈಸರ್ಗಿಕ ಮನೆಮದ್ದುಗಳಿಂದ ತೊಡೆದುಹಾಕಬಹುದು. ಹೌದು, ದಿನ ನಿತ್ಯ ನಾವು ಬಳಸುವ ಅಡುಗೆಮನೆಯ ಪದಾರ್ಥವನ್ನ ಒರೆಸುವ ನೀರಿನಲ್ಲಿ ಬೆರೆಸುವುದರಿಂದ ಮನೆ ಫಳ ಫಳ ಹೊಳೆಯುವುದಲ್ಲದೆ, ಫ್ರೆಶ್ ಆಗಿ ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜಿರಲೆಗಳು ಮತ್ತು ಹಲ್ಲಿಗಳು ಸಹ ಶಾಶ್ವತವಾಗಿ ಓಡಿಹೋಗುತ್ತವೆ.
ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿ
ಅಡುಗೆಮನೆ ಮತ್ತು ಸ್ನಾನಗೃಹದಲ್ಲಿ ಜಿರಲೆಗಳು ಮತ್ತು ಹಲ್ಲಿಗಳು ಕಾಣಿಸಿಕೊಳ್ಳುವುದರಿಂದ ಕೆಲವರು ಪದೇ ಪದೇ ಆ ಕಡೆ ನೋಡುತ್ತಾ, ಸ್ನಾನವನ್ನು ಸರಿಯಾಗಿ ಮಾಡದೆ, ಅಡುಗೆಯ ಕಡೆ ಗಮನಹರಿಸದೆ ಓಡಿ ಬರುವುದನ್ನು ನಾವೆಲ್ಲಾ ನೋಡಿದ್ದೇವೆ. ನಿಮಗೆ ಗೊತ್ತಿದೆಯೋ, ಇಲ್ಲವೋ ಈ ಕೀಟಗಳು ರಾತ್ರಿ ವೇಳೆ ಹೆಚ್ಚು ಸಕ್ರಿಯವಾಗಿರುತ್ತವೆ. ಪದೇ ಪದೇ ಸ್ವಚ್ಛಗೊಳಿಸುತ್ತಿದ್ದರೂ ಸಹ ಇವುಗಳನ್ನ ಮನೆಯಿಂದ ಓಡಿಸುವುದೇ ಸವಾಲಿನ ಕೆಲಸವಾಗುತ್ತದೆ. ಇನ್ನೇಲೆ ಆ ಟೆನ್ಷನ್ ನಿಮಗೆ ಇರುವುದಿಲ್ಲ. ಯಾಕಂತೀರಾ?. ನೆಲ ಒರೆಸುವಾಗ ಕೆಲವು ಸಾಮಾನ್ಯ ಅಡುಗೆಮನೆ ಪದಾರ್ಥವನ್ನ ನೀರಿನಲ್ಲಿ ಬೆರೆಸುವುದರಿಂದ ಜಿರಲೆಗಳು, ಹಲ್ಲಿಗಳು ಮನೆಯಿಂದ ದೂರವಿರುತ್ತವೆ. ಈ ಮನೆಮದ್ದು ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಇದು ಮನೆಯನ್ನು ಸ್ವಚ್ಛಗೊಳಿಸುವುದಲ್ಲದೆ, ಅನಗತ್ಯ ಕೀಟಗಳನ್ನು ಸಹ ತೊಡೆದುಹಾಕುತ್ತದೆ.
ಹೀಗೆ ಮಾಡಿ ನೀವು
ನೀವು ಮಾಡಬೇಕಾಗಿರುವುದು ಇಷ್ಟೇ..ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವಾಗ ಒರೆಸುವ ನೀರಿಗೆ 4-5 ಚಮಚ ಉಪ್ಪು ಮತ್ತು 2 ನಿಂಬೆಹಣ್ಣಿನ ರಸವನ್ನು ಸೇರಿಸಿ. ಉಪ್ಪು ಮೇಲ್ಮೈ ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ನಿಂಬೆಯ ಹುಳಿ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಇದೇ ಮಿಶ್ರಣವನ್ನು ನೆಲ, ಗೋಡೆಗಳು ಮತ್ತು ಪೀಠೋಪಕರಣಗಳ ಮೇಲೆ ಬಳಸಬಹುದು.
ಪರಿಸರ ಸ್ವಚ್ಛ
ನಿಂಬೆಯ ತಾಜಾತನ ಮತ್ತು ಹುಳಿ ಜಿರಲೆಗಳು ಮತ್ತು ಇತರ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ನಿಯಮಿತವಾಗಿ ಬಳಸುವುದರಿಂದ ನಿಮ್ಮ ಮನೆಯಲ್ಲಿ ಜಿರಲೆ ಸಮಸ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ನಿಮ್ಮ ಪರಿಸರವನ್ನು ಸ್ವಚ್ಛವಾಗಿರಿಸುತ್ತದೆ.
ಪರಿಮಳಯುಕ್ತ
ಬೇಕಾದರೆ 5-6 ಕರ್ಪೂರ ಪುಡಿಮಾಡಿ ನೀರಿಗೆ ಸೇರಿಸಿ. ನಂತರ, ಕೆಲವು ಹನಿ ಲವಂಗ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮನೆಯನ್ನು ಒರೆಸಲು ಬಳಸಿ. ಕರ್ಪೂರ ಮತ್ತು ಲವಂಗ ಎಣ್ಣೆ ನೈಸರ್ಗಿಕ ಕೀಟನಾಶಕಗಳಾಗಿ ಕಾರ್ಯನಿರ್ವಹಿಸುತ್ತವೆ, ಜಿರಲೆಗಳು ಮತ್ತು ಇತರ ಕೀಟಗಳನ್ನ ಬರದಂತೆ ತಡೆಯುತ್ತವೆ. ಅವು ಮನೆಯನ್ನು ಸ್ವಚ್ಛವಾಗಿ ಪರಿಮಳಯುಕ್ತವಾಗಿ ಇಡುತ್ತವೆ.
ಸೂಕ್ಷ್ಮಜೀವಿಗಳಿಂದ ಮುಕ್ತ
ಉಪ್ಪಿನ ಶುಚಿಗೊಳಿಸುವ ಸಾಮರ್ಥ್ಯ ಮತ್ತು ನಿಂಬೆ ರಸದ ಸುವಾಸನೆಯು ಮನೆಯನ್ನು ಹೊಳೆಯುವಂತೆ ಮಾಡುವುದಲ್ಲದೆ, ಸೂಕ್ಷ್ಮಜೀವಿಗಳನ್ನು ಸಹ ತೆಗೆದುಹಾಕುತ್ತವೆ. ನಿಂಬೆಯ ಹುಳಿಯು ಜಿರಲೆಗಳು ಮತ್ತು ಇತರ ಕೀಟಗಳು ಮನೆಯಲ್ಲಿ ಉಳಿಯಲು ಅವಕಾಶ ನೀಡುವುದಿಲ್ಲ, ಇದರಿಂದಾಗಿ ಪರಿಸರವು ಸ್ವಚ್ಛ ಮತ್ತು ಸುರಕ್ಷಿತವಾಗಿರುವುದು. ಇದು ನೀವು ಪ್ರತಿದಿನ ಬಳಸಬಹುದಾದ ಸುಲಭ, ನೈಸರ್ಗಿಕ ಮತ್ತು ಆರ್ಥಿಕ ಪರಿಹಾರವಾಗಿದೆ. ಇದು ನಿಮ್ಮ ಮನೆಯನ್ನು ಸ್ವಚ್ಛವಾಗಿ, ಸೂಕ್ಷ್ಮಜೀವಿಗಳಿಂದ ಮುಕ್ತವಾಗಿ ಮತ್ತು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.