ಕೊನೆಗೂ ಎದುರು ಬದುರಾದ್ರೂ ಜಯಂತ್ ಮತ್ತು ಜಾಹ್ನವಿ… ಇನ್ನು ವಿಶ್ವನ ಕಥೆ ಅಷ್ಟೇ… !
ಅಪ್ಪ-ಅಮ್ಮನ ಮುಂದೆ ಸತ್ಯ ಹೇಳೋದಕ್ಕೆ ಹೊರಟ ಜಾಹ್ನವಿ ಮುಂದೆ ಜಯಂತ್ ಪ್ರತ್ಯಕ್ಷವಾಗಿದ್ದಾರೆ. ಕೊನೆಗೂ ಜಾನು ಬದುಕಿರೋದು ಜಯಂತ್ ಗೆ ಗೊತ್ತಾಗುತ್ತಾ? ಕಾದಿದೆ ಟ್ವಿಸ್ಟ್.

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿ ಕತೆ ಕೊಂಚ ನಿಧಾನವಾಗಿ ಸಾಗುತ್ತಿದೆ ಅನಿಸಿದರೂ, ಯಾವಾಗ ಜಾನು ಮತ್ತು ಜಯಂತ್ ಭೇಟಿ ಎಂದು ಕಾಯುವ ಬಹಳಷ್ಟು ಮಂದಿ ವೀಕ್ಷಕರು ಇದ್ದಾರೆ. ಇದೀಗ ಆ ಕಾಲವು ಸನ್ನಿಹಿತವಾದಂತಿದೆ.
ಅಷ್ಟಕ್ಕೂ ಸೀರಿಯಲ್ ನಲ್ಲಿ ಆಗುತ್ತಿರೋದು ಏನು? ಜಯಂತ್ ಗೆ ಇನ್ನೂ ಜಾನು ಬದುಕಿದ್ದಾಳೆ ಎನ್ನುವ ನಂಬಿಕೆ ಇದೆ. ಅಷ್ಟೇ ಅಲ್ಲ ವಿಶ್ವನೇ ಜಾನು ಬೆಸ್ಟ್ ಫ್ರೆಂಡ್ ಅನ್ನೋದು ಗೊತ್ತಾಗಿದೆ. ಅವರ ಮನೆಯಲ್ಲಿಯೇ ಜಾನು ಇದ್ದಾಳೆ ಎನ್ನುವ ಸಂಶಯದಿಂದ ಮನೆಯಲ್ಲೆಲ್ಲಾ ಹುಡುಕಾಟವನ್ನೂ ನಡೆಸಿಯಾಗಿದೆ ಆದರೆ ಜಾನು ಸಿಕ್ಕಿಲ್ಲ.
ಜಾಹ್ನವಿಯ ಸತ್ಯ ತಿಳಿದ ವಿಶ್ವ ಆಕೆಯನ್ನು ಈಗ ಆಕೆಯ ತಂದೆ -ತಾಯಿಯ ಮುಂದೆ ನಿಲ್ಲಿಸಿ, ಎಲ್ಲಾ ಸತ್ಯಗಳನ್ನು ಅವರ ಮುಂದೆ ಹೇಳೋದಕ್ಕೆ ಹೇಳಿದ್ದಾರೆ. ಆದರೆ ಜಾಹ್ನವಿಗೆ ಮಾತ್ರ ಇನ್ನಿಲ್ಲದ ಅಂಜಿಕೆ. ಆದರೂ ಧೈರ್ಯ ಮಾಡಿ, ವಿಶ್ವನ ಜೊತೆ ತಮ್ಮ ತಂದೆ ತಾಯಿಗಳ ಹೊಸ ಮನೆಗೆ ತೆರಳುತ್ತಾಳೆ ಜಾನು.
ಇನ್ನೇನು ಕಾರಿನಿಂದ ಕೆಳಕ್ಕೆ ಇಳಿಯಬೇಕು ಎನ್ನುವಷ್ಟರಲ್ಲಿ ಜಯಂತ್ ಕಾಣಿಸುತ್ತಾನೆ. ಹಲವು ದಿನಗಳಿಂದ ಜಯಂತ್ ನಿಂದ ತಪ್ಪಿಸಿಕೊಳ್ಳುತ್ತಿದ್ದ ಜಾಹ್ನವಿ ಕೊನೆಗೂ ತನ್ನ ತಂದೆ ತಾಯಿಗಳ ಸಮ್ಮುಖದಲ್ಲೇ ಗಂಡನನ್ನು ಭೇಟಿಯಾಗುತ್ತಾಳಾ? ಎನ್ನುವ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಜಯಂತ್ ಮತ್ತು ಜಾನೂ ಜೋಡಿಯನ್ನು ಇಷ್ಟಪಡುವವರು ಬೇಕಾದಷ್ಟು ಜನ ಇದ್ದಾರೆ. ಹೆಚ್ಚಿನ ಜನರು ಈ ಜೋಡಿ ಆದಷ್ಟು ಬೇಗನೆ ಒಂದಾಗಲಿ, ಇಬ್ಬರು ಸುಖವಾಗಿ ಬಾಳಲಿ ಎಂದು ಆಶಿಸುತ್ತಿದ್ದಾರೆ. ಜೊತೆಗೆ ಜಾನು ತನ್ನ ಮನೆಯವರ ಮುಂದೆ ಆದ್ರೂ ಕಾಣಿಸಿಕೊಳ್ಳೋದು ಉತ್ತಮ ಎಂದು ಹೇಳುತ್ತಿದ್ದಾರೆ.
ಇನ್ನೂ ಕೆಲವರು ಹಲವಾರು ಬಾರಿ ಇನ್ನೇನು ಜಯಂತ್ -ಜಾಹ್ನವಿ ಭೇಟಿಯಾಗುತ್ತಾರೆ ಎಂದು ತೋರಿಸಿ, ಕೊನೆಗೆ ಅದು ಆಗದೇ ಇರೋದನ್ನು ಗಮನಿಸಿ. ಖಂಡಿತವಾಗಿಯೂ ಇನ್ನೊಂದು ಎರಡು ವರ್ಷ ಆದರೂ ಇಬ್ಬರು ಎದುರುಬದುರಾಗೋದೇ ಇಲ್ಲ. ಸೀರಿಯಲ್ ಹೀಗೆ ಮುಂದುವರೆಯಲಿದೆ ಎಂದಿದ್ದಾರೆ.
ವೀಕ್ಷಕರಲ್ಲಿ ಹಲವರು ವಿಶ್ವನ ಬಗ್ಗೆ ಅನುಕಂಪ ತೋರಿದ್ದಾರೆ. ಅಯ್ಯೊ ಒಂದು ವೇಳೆ ವಿಶ್ವ ಮತ್ತು ಜಾನೂನ ಜೊತೆಯಾಗಿ ನೋಡಿದರೆ, ವಿಶ್ವನ ಕಥೆ ಮುಗಿದಂತೆ. ಆ ಸೈಕೋ ಜಯಂತ್ ಖಂಡಿತವಾಗಿಯೂ ಇಬ್ಬರನ್ನೂ ಸುಮ್ಮನೆ ಬಿಡಲಾರ ಎಂದು ಹೇಳುತ್ತಿದ್ದಾರೆ. ಅಂದ ಹಾಗೆ ಲಕ್ಷ್ಮೀ ನಿವಾಸ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಈ ಧಾರಾವಾಹಿಯಲ್ಲಿ ಅಶೋಕ್ ಜಂಬೆ, ಮಾಧುರಿ, ದಿಶಾ ಮದನ್, ದೀಪಕ್ ಸುಬ್ರಹ್ಮಣ್ಯ, ಚಂದನಾ ಅನಂತಕೃಷ್ಣ ಸೇರಿ ಹಲವು ನಟ-ನಟಿಯರು ನಟಿಸುತ್ತಿದ್ದಾರೆ.