ಭೂಮಿಕಾ, ಗೌತಮ್...ಇವರೆಲ್ಲರ ಮಧ್ಯೆ ಜಾಣೆಯಾಗಿದ್ದು ಗೆಟಪ್ ಬದಲಾಯಿಸಿದ ಮಲ್ಲಿಯಂತೆ!
Viewers Comments on Malli: ಇತ್ತ ಆಸ್ತಿ-ಪಾಸ್ತಿಯನ್ನೆಲ್ಲಾ ಬಿಟ್ಟು ಬಂದು ಗೌತಮ್ ಕಾರ್ ಡ್ರೈವರ್ ಅಗಿದ್ದಾನೆ. ಹಾಗೆಯೇ ಭೂಮಿ ಟೀಚರ್ ಆಗಿದ್ದಾಳೆ. ಗೌತಮ್-ಭೂಮಿ ಇಬ್ಬರ ಗೆಟಪ್ ಚೇಂಜ್ ಆಗಿದೆ. ಆದರೆ ಇವರಿಬ್ಬರ ಗೆಟಪ್‌ಗಿಂತ ಮಲ್ಲಿ ಡ್ರೆಸ್ ಕೋಡ್ ಬದಲಾಗಿರುವುದು ವೀಕ್ಷಕರ ಗಮನಕ್ಕೆ ಬಿದ್ದಿದೆ.

ಚೂರು ಪಾರು ಹೊಸ ಬೆಳವಣಿಗೆ
ಭೂಮಿಕಾ-ಗೌತಮ್‌ಗೋಸ್ಕರನೇ ಅಮೃತಧಾರೆ ಧಾರಾವಾಹಿ ನೋಡುತ್ತಿದ್ದವರು ನಮ್ಮ ವೀಕ್ಷಕರು. ಆದರೆ ಯಾವಾಗ ಇವರಿಬ್ಬರೂ ದೂರ ದೂರವಾದರೋ ಅಂದಿನಿಂದ ಎಲ್ಲರೂ ಇವರಿಬ್ಬರೂ ಒಂದಾಗುವುದು ಯಾವಾಗ ಅಂತ ಕಾಯ್ತಾನೆ ಇದ್ದಾರೆ ನೋಡಿ. ಈ ಮಧ್ಯೆ ಧಾರಾವಾಹಿಯಲ್ಲಿ ಚೂರು ಪಾರು ಹೊಸ ಬೆಳವಣಿಗೆಯಾಗುತ್ತಿರುವುದನ್ನ ನೀವೂ ಗಮನಿಸಬಹುದು.
ವೀಕ್ಷಕರಿಗೆ ಅನಿಸಿದ್ದೇನು ಗೊತ್ತಾ?.
ಹಾಗೂ ಹೀಗೂ ಗೌತಮ್‌ಗೆ ತಿಳಿಯದಂತೆಯೇ ಆಕೆಯ ಮಗಳು ಕೈ ಸೇರಿದ್ದಾಯ್ತು. ಇದು ಅದೃಷ್ಟದ ಮಗು ಎಂದು ಗೌತಮ್ ವಠಾರದಲ್ಲಿರುವ ಜನರು ಖುಷಿ ಪಡುತ್ತಿದ್ದಾರೆ. ಇದರಿಂದ ಸ್ವಭಾವಿಕವಾಗಿಯೇ ಗೌತಮ್‌ಗೂ ಖುಷಿಯಾಗಿದೆ. ಇನ್ನು ಗೌತಮ್-ಭೂಮಿಕಾ ಮಗ ಆಕಾಶ್ ತಾತ-ಅಜ್ಜಿಯನ್ನು ಭೇಟಿಯಾಗಿದ್ದಾನೆ. ಇದನ್ನೆಲ್ಲಾ ಭೂಮಿ ದೂರದಿಂದಲೇ ನಿಂತು ನೋಡುತ್ತಾ ಕಣ್ಣೀರು ಹಾಕು್ತಿದ್ದಾಳೆ. ಆದರೆ ಇದನ್ನೆಲ್ಲಾ ನೋಡಿದ ನಮ್ಮ ಧಾರಾವಾಹಿ ವೀಕ್ಷಕರಿಗೆ ಅನಿಸಿದ್ದೇನು ಗೊತ್ತಾ?.
ನಮ್ಮ ಮಲ್ಲಿಯೇ ಜಾಣೆ
ಇತ್ತ ಆಸ್ತಿ-ಪಾಸ್ತಿಯನ್ನೆಲ್ಲಾ ಬಿಟ್ಟು ಬಂದು ಗೌತಮ್ ಕಾರ್ ಡ್ರೈವರ್ ಅಗಿದ್ದಾನೆ. ಹಾಗೆಯೇ ಭೂಮಿ ಟೀಚರ್ ಆಗಿದ್ದಾಳೆ. ಗೌತಮ್-ಭೂಮಿ ಇಬ್ಬರ ಗೆಟಪ್ ಚೇಂಜ್ ಆಗಿದೆ. ಆದರೆ ಇವರಿಬ್ಬರ ಗೆಟಪ್‌ಗಿಂತ ಮಲ್ಲಿ ಡ್ರೆಸ್ ಕೋಡ್ ಬದಲಾಗಿರುವುದು ವೀಕ್ಷಕರ ಗಮನಕ್ಕೆ ಬಿದ್ದಿದೆ. ಜೊತೆಗೆ ಇವರಿಗೆಲ್ಲಾ ಹೋಲಿಸಿದರೆ ನಮ್ಮ ಮಲ್ಲಿಯೇ ಜಾಣೆ ಅಂತೆ.
ಸುತಾರಾಂ ಸೂಟ್ ಆಗ್ತಿಲ್ಲ
ಹೌದು, ಇತ್ತ ಗೌತಮ್ ಜೊತೆ ಮೊದಲಿನಂತಿರಲೂ ಒಪ್ಪದ ಭೂಮಿಕಾ ಹಠ ನೋಡಿ ಎಲ್ಲರಿಗೂ ಸಾಕಾಗಿದೆ. ಇನ್ನುಆ ಮಗು ಯಾರೆಂದು ತಿಳಿಯದೆ ಭೂಮಿಕಾ ಅಪ್ಪ-ಅಮ್ಮ ಅಕಾಶ್ ಜೊತೆ ಕ್ಲೋಸ್ ಆಗಿರುವುದು ಒಂದು ರೀತಿ ಓವರ್ ಅನಿಸಿದೆ. ಇನ್ನು ಗೌತಮ್‌ಗೆ ಸೂಟ್ ಬಿಟ್ಟು ಆ ಡ್ರೈವರ್ ಡ್ರೆಸ್ ಸುತಾರಾಂ ಸೂಟ್ ಆಗ್ತಿಲ್ಲ. ಹಾಗಾಗಿ ಇವರೆಲ್ಲರನ್ನೂ ಒಂದಾಗಿಸಲು ಕಾಯುತ್ತಿರುವ ಮಲ್ಲಿ ಕೊಂಚ ಬದಲಾಗಿದ್ದಾಳೆ.
ಮಲ್ಲಿ ಗೆಟಪ್ ಚೇಂಜ್
ಹೌದು. ಮಲ್ಲಿ ಭಾಷೆ ಚೇಂಚ್ ಆಗಿಲ್ಲ, ಆದ್ರೆ ಗೆಟಪ್ ಚೇಂಜ್ ಆಗಿದೆ. ಮದುವೆಗಿಂತ ಮುಂಚೆ ಲಂಗ -ದಾವಣಿ, ಮದವೆಯಾದ್ಮೇಲೆ ಸೀರೆ ಮಾತ್ರ ಧರಿಸುತ್ತಿದ್ದ ಮಲ್ಲಿ ಈಗ ಚೂಡಿದಾರ್ ಧರಿಸುತ್ತಿದ್ದಾಳೆ. ಈ ದಿರಿಸಿನಲ್ಲಿ ಸಖತ್ತಾಗೇ ಕಾಣಿಸುತ್ತಿರೋ ಮಲ್ಲಿ, ಭೂಮಿಕಾ ಹಾಗೂ ಗೌತಮಿ ಬಗ್ಗೆ ಕೆಲವು ವೀಕ್ಷಕರು ಮಾಡಿರುವ ಕಾಮೆಂಟ್ಸ್ ಹೀಗಿದೆ ನೋಡಿ..
ಹೀಗಿದೆ ವೀಕ್ಷಕರ ಕಾಮೆಂಟ್ಸ್...
*ಆ ಭೂಮಿಕಾ ಹುಚ್ಚಾಟ, driver ಗೆಟಪ್ suit ಆಗದೇ ಒದ್ದಾಟದಲ್ಲಿರೋ ಗೌತಮ್, ಇಷ್ಟರ ಮಧ್ಯೆ ಜಾಣೆಯಾಗಿದ್ದು ಮಲ್ಲಿ ಗೆಟಪ್ ಬದಲಾಯಿಸಿ ಭಾರ್ಗವಿ ಆದ ರಾಧಾ ಅವರು.
*ಮಲ್ಲಿ ಗ್ರೇಟ್ ಗ್ರೇಟ್
*ಸೂಪರ್ ಮಲ್ಲಿ
*ಗುಂಡು ಜೊತೆ ಮಾತ್ರ ಅಪ್ಪು ಇರಬಾರದ ಭೂಮಿಕಾ.
*ಟೀಚರ್‌ದು ಓವರ್ ಆಕ್ಟಿಂಗ್… ಎಂಬುದು ಪ್ರೊಮೊ ನೋಡಿದ ವೀಕ್ಷಕರ ಕಾಮೆಂಟ್ಸ್.