- Home
- Entertainment
- TV Talk
- ಜೊತೆಯಲ್ಲಿದ್ದೇ ಖೆಡ್ಡಾ ತೋಡಿದ ರಮೇಶ್; ನಿತ್ಯಾ-ಕರ್ಣ ಮದ್ವೆ ಹಿಂದಿನ ರೂವಾರಿ ಇವರೇ ನೋಡಿ!
ಜೊತೆಯಲ್ಲಿದ್ದೇ ಖೆಡ್ಡಾ ತೋಡಿದ ರಮೇಶ್; ನಿತ್ಯಾ-ಕರ್ಣ ಮದ್ವೆ ಹಿಂದಿನ ರೂವಾರಿ ಇವರೇ ನೋಡಿ!
Nitya Karna marriage: ಒಟ್ಟಾರೆ ಮದುವೆ ತಯಾರಿಗಳು ಸುಗಮವಾಗಿ ನಡೆಯುವ ಹೊತ್ತಿನಲ್ಲೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಹೇಗಿದ್ದರೂ ನಿತ್ಯಾ ಮದುವೆಯಾಗುವುದು ಕರ್ಣನನ್ನ ಎಂಬುದು ಪ್ರೊಮೊ ನೋಡಿ ಗೊತ್ತಾಗಿದೆ. ಆದರೆ ಅದರ ಹಿಂದಿನ ರೂವಾರಿ ಯಾರು? ಎಂಬ ಸುಳಿವೀಗ ಸಿಕ್ಕಿದೆ.

ವೀಕ್ಷಕರಿಗಿತ್ತು ಕುತೂಹಲ
'ಕರ್ಣ' ಧಾರಾವಾಹಿ ಈಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಷ್ಟು ದಿನ ಕರ್ಣ ಯಾಕೆ ನಿಧಿ ಬಿಟ್ಟು ನಿತ್ಯಾ ಮದ್ವೆಯಾಗುತ್ತಿದ್ದಾನೆ ಅನ್ನೋ ಕುತೂಹಲ ವೀಕ್ಷಕರಿಗಿತ್ತು. ಆದರೀಗ ಅದಕ್ಕೆ ತಕ್ಕಮಟ್ಟಿಗೆ ಉತ್ತರ ಸಿಕ್ಕಂತಾಗಿದೆ. ಹೌದು, ನಿಧಿ-ಕರ್ಣನ ಜೊತೆಗೆ ಇದ್ದುಕೊಂಡೇ ಇಂಥ ಆಟವಾಡಿದವರು ಯಾರು?, ನಿಜಕ್ಕೂ ಮದ್ವೆ ನಿಲ್ಲೋಕೆ ಇವರೇ ಕಾರಣನಾ?. ಇಲ್ಲಿದೆ ನೋಡಿ ಮಾಹಿತಿ.
ನಿಧಿ ಮತ್ತು ಅಜ್ಜಿಗೆ ಖುಷಿ
ಸದ್ಯ ಧಾರಾವಾಹಿಯಲ್ಲಿ ನಿತ್ಯಾ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ನಿತ್ಯಾ ಮದುವೆಯಾಗಿ ಗಂಡನ ಮನೆಗೆ ತೆರಳುತ್ತಿರುವುದರಿಂದ ಆಕೆಯ ಕುಟುಂಬ ಅವಳ ಆಸೆ, ಆಕಾಂಕ್ಷೆಯನ್ನ ಪೂರೈಸಲು ಸಜ್ಜಾಗಿದೆ. ಕರ್ಣನ ಕಂಡರೇನೇ ನಿತ್ಯಾ ಉರಿದು ಬೀಳುವುದರಿಂದ ಆಕೆಗೆ ಗೊತ್ತಿಲ್ಲದ ಹಾಗೆ ಮನೆಗೆ ಬಂದು ಬಹಳ ಚೆನ್ನಾಗಿ ಮನೆಯನ್ನು ಸಿಂಗರಿಸುತ್ತಿದ್ದಾನೆ. ಇದನ್ನು ನೋಡಿ ನಿಧಿ ಮತ್ತು ಅಜ್ಜಿಗೆ ಖುಷಿಯಾಗಿದೆ.
ಅದರ ಹಿಂದಿನ ರೂವಾರಿ ಯಾರು?
ದೇವರ ಪೂಜೆ ಮುಗಿದ ನಂತರ ಕೆಲವೊಂದು ಶಾಸ್ತ್ರಕ್ಕೆ ಸೋದರ ಮಾವ ಇರಬೇಕು ಅಂದಾಗ ಬಹುಶಃ ಮಾರುವೇಷದಲ್ಲಿರುವ ಕರ್ಣನನ್ನೇ ನಿಧಿ ಕರೆದುಕೊಂಡು ಬರುವ ಹಾಗೆ ಕಾಣುತ್ತಿದೆ. ಒಟ್ಟಾರೆ ಮದುವೆ ತಯಾರಿಗಳು ಸುಗಮವಾಗಿ ನಡೆಯುವ ಹೊತ್ತಿನಲ್ಲೇ ಭರ್ಜರಿ ಟ್ವಿಸ್ಟ್ ಎದುರಾಗಿದೆ. ಹೇಗಿದ್ದರೂ ನಿತ್ಯಾ ಮದುವೆಯಾಗುವುದು ಕರ್ಣನನ್ನ ಎಂಬುದು ಪ್ರೊಮೊ ನೋಡಿ ಗೊತ್ತಾಗಿದೆ. ಆದರೆ ಅದರ ಹಿಂದಿನ ರೂವಾರಿ ಯಾರು? ಎಂಬ ಸುಳಿವೀಗ ಸಿಕ್ಕಿದೆ.
ಮುಂದಾಗುವ ಘಟನೆ ಬಗ್ಗೆ ಮುನ್ಸೂಚನೆ
ಹೌದು. ಅದು ಬೇರೆ ಯಾರೂ ಅಲ್ಲ. ಕರ್ಣನ ಅಪ್ಪ ರಮೇಶ್. ಇಷ್ಟು ದಿನ ಕರ್ಣ-ನಿಧಿ ಜೊತೆಯಲ್ಲಿ ಇದ್ದುಕೊಂಡೇ ಆಟವಾಡಿದವರು. ಈಗ "ಕರ್ಣನ ಮದುವೆ ನಿಧಿ ಜೊತೆಗಲ್ಲ, ನಿತ್ಯಾ ಜೊತೆಯಾಗುತ್ತದೆ" ಎಂದು ತನ್ನ ತಂಗಿ ಹಾಗೂ ಸ್ವಂತ ಮಗನ ಬಳಿ ರೂಂನಲ್ಲಿ ರಮೇಶ್ ಹೇಳುತ್ತಿದ್ದಾನೆ. ಇದನ್ನು ಈಗ ಕರ್ಣನ ತಾಯಿ ಕದ್ದು ಕೇಳಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಈ ವಿಷಯವನ್ನ ಕರ್ಣನ ಬಳಿ ಹೇಳಿದ್ದಾರೆ. ನಿನ್ನಪ್ಪ ನಿತ್ಯಾ ಜೊತೆ ಮದುವೆ ಮಾಡಿಸಲು ಹೊರಟ್ಟಿದ್ದಾರೆಂದು. ಅದೇ ಸಮಯಕ್ಕೆ ಜೋಗತವ್ವ ಬಂದು ಕರ್ಣನ ಜೀವನದಲ್ಲಿ ಮುಂದಾಗುವ ಘಟನೆ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಮೊದಲಿನಿಂದಲೂ ಕಿರಿ ಕಿರಿ
ಅಲ್ಲಿಗೆ ಇಷ್ಟಕ್ಕೆಲ್ಲಾ ಕಾರಣ ರಮೇಶ್ ಎಂಬುದು ಈಗ ಸ್ಪಷ್ಟ. ನಿತ್ಯಾ ಮದುವೆಯಾಗುವ ಹುಡುಗ ಪುಕ್ಕಲು ಸ್ವಭಾವದವ. ಜೊತೆಗೆ ಆತನ ಮನೆಯವರು ಮದುವೆ ವಿಚಾರದಲ್ಲಿ ಮೊದಲಿನಿಂದಲೂ ಕಿರಿ ಕಿರಿ ಮಾಡುತ್ತಿದ್ದರು. ಹಾಗಾಗಿ ನಿತ್ಯಾ ಮದ್ವೆಯಾಗಬೇಕಾದ ಹುಡುಗ ಮದುವೆ ಮನೆಯಿಂದ ಕಾಣೆಯಾಗಲು ರಮೇಶ್ ಕುಮ್ಮಕ್ಕು ನೀಡಬಹುದು.
ನಿಜಕ್ಕೂ ವೀಕ್ಷಕರಿಗೆ ಶಾಕ್
ಇನ್ನೇನು ಅಪ್ಪ ರಮೇಶ್ ಒಳ್ಳೆಯವನಾಗುತ್ತಿದ್ದಾನೆ ಎಂದು ಜನರು ಅಂದುಕೊಳ್ಳುವಷ್ಟರಲ್ಲಿ ಈಗ ಮತ್ತೆ ತನ್ನ ಹಳೆಯ ವರಸೆ ತೋರಿಸಿರುವುದು ನಿಜಕ್ಕೂ ವೀಕ್ಷಕರಿಗೆ ಶಾಕ್ ಆಗಿದೆ. ಅದೇನೇ ಇರಲಿ, ಅಪ್ಪ ಮಾಡುತ್ತಿರುವ ದ್ರೋಹ ಕರ್ಣನ ಕಿವಿಗೆ ಬಿದ್ದ ಮೇಲೂ ಅವನಿಗೆ ನಿತ್ಯಾ ಜೊತೆ ಮದುವೆಯಾಗುತ್ತಿದೆ. ಬಹುಶಃ ಅಜ್ಜಿಯನ್ನ ತುಂಬಾ ಪ್ರೀತಿ ಮಾಡುವ ಕರ್ಣ ಅವರ ಮಾತಿಗೆ ಬೆಲೆ ಕೊಟ್ಟು ಮದುವೆಯಾಗುತ್ತಾನೆ ಎಂಬುದು ಹಲವರ ಅನಿಸಿಕೆ. ಇತ್ತ ನಿತ್ಯಾಗೂ ತನ್ನ ತಂಗಿ ನಿಧಿ ಪ್ರೀತಿ ಮಾಡುತ್ತಿರುವುದು ಕರ್ಣ ಎಂಬ ವಿಚಾರ ಗೊತ್ತಿರದಿರುವುದು ಸಹ ಒಂದು ರೀತಿ ಎಡವಟ್ಟಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆ
ಒಟ್ಟಾರೆ ನಿತ್ಯಾ-ಕರ್ಣನ ಮದುವೆ ಎಲ್ಲರಿಗೂ ಒಂದು ರೀತಿ ಬೇಸರ ತರಿಸಿದ್ದು, ನಾವೀಗ ಈ ಧಾರಾವಾಹಿ ನೋಡಲ್ಲ, ಬೇರೆ ಧಾರಾವಾಹಿಗೆ ಶಿಫ್ಟ್ ಆಗುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿರುವುದನ್ನ ನೀವೂ ನೋಡಬಹುದು.