- Home
- Entertainment
- TV Talk
- ಹಳೆಯ ಸಂಪ್ರದಾಯಕ್ಕೆ ಬ್ರೇಕ್; ಈ 3 ಸೀರಿಯಲ್‌ನಲ್ಲಿ ಮಿಂಚ್ತಿರೋದು ಅಮ್ಮನಲ್ಲ, ಅಪ್ಪಂದಿರು!
ಹಳೆಯ ಸಂಪ್ರದಾಯಕ್ಕೆ ಬ್ರೇಕ್; ಈ 3 ಸೀರಿಯಲ್‌ನಲ್ಲಿ ಮಿಂಚ್ತಿರೋದು ಅಮ್ಮನಲ್ಲ, ಅಪ್ಪಂದಿರು!
Emotional Father Characters: ಇತ್ತೀಚಿನ ದಿನಗಳಲ್ಲಿ ನಮ್ಮ ಮನೆಯ ಗಂಡು ಮಕ್ಕಳು ಸಹ ಟಿವಿ ಮುಂದೆ ಕುಳಿತಿರುತ್ತಾರೆ. ಕಾರಣವಿಷ್ಟೇ. ಈಗೀಗ ಅಪ್ಪಂದಿರ ಪಾತ್ರವನ್ನು ಧಾರಾವಾಹಿಗಳಲ್ಲಿ ಅದ್ಭುತವಾಗಿ ತೋರಿಸಲಾಗುತ್ತಿದೆ.

ಅಪ್ಪಂದಿರ ಪಾತ್ರ ಅದ್ಭುತ
ಕಿರುತೆರೆ ವೀಕ್ಷಕರಿಗೆ ಈ ವಿಷಯ ಚೆನ್ನಾಗೇ ಗೊತ್ತಿರುತ್ತದೆ. ಮೊದಲೆಲ್ಲಾ ಧಾರಾವಾಹಿಗಳೆಂದರೆ ಅಲ್ಲಿ ನಾಯಕಿಯರೇ ಹೈಲೆಟ್. ಮತ್ತೆ ಅಮ್ಮಂದಿರನ್ನೇ ಹೆಚ್ಚಾಗಿ ಫೋಕಸ್ ಮಾಡಲಾಗುತ್ತಿತ್ತು. ನೀವು ಗಮನಿಸಿರಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ಮನೆಯ ಗಂಡು ಮಕ್ಕಳು ಸಹ ಟಿವಿ ಮುಂದೆ ಕುಳಿತಿರುತ್ತಾರೆ. ಕಾರಣವಿಷ್ಟೇ. ಈಗೀಗ ಅಪ್ಪಂದಿರ ಪಾತ್ರವನ್ನು ಧಾರಾವಾಹಿಗಳಲ್ಲಿ ಅದ್ಭುತವಾಗಿ ತೋರಿಸಲಾಗುತ್ತಿದೆ. ಹಾಗಾದರೆ ಸದ್ಯ ಮೂಡಿ ಬರುತ್ತಿರುವ ಯಾವ ಧಾರಾವಾಹಿಗಳಲ್ಲಿ ತಂದೆಯ ಪಾತ್ರವನ್ನು ಎತ್ತಿ ತೋರಿಸಲಾಗಿದೆ. ನೋಡೋಣ ಬನ್ನಿ..
ಅಮೃತಧಾರೆ
ಅಬ್ಬಾ ಅಮೃತಧಾರೆ ಧಾರಾವಾಹಿ ಅಂದರೆ ಭೂಮಿಕಾ ಇರದಿದ್ರೂ ಪರ್ವಾಗಿಲ್ಲ. ನಮ್ಮ ಗೌತಮ್ ಇರಲೇಬೇಕು ಎನ್ನುವ ಮಂದಿ ಸಾಕಷ್ಟು ಜನರು ಇದ್ದಾರೆ. ಅದರಲ್ಲೂ ಗೌತಮ್ ಅಪ್ಪನಾದ ಮೇಲೆ ಅವರ ಪಾತ್ರಕ್ಕೆ ಮತ್ತಷ್ಟು ತೂಕ ಬಂದಿದೆ. ಸದ್ಯ ಧಾರಾವಾಹಿಯಲ್ಲಿ ಅಪ್ಪ-ಮಗ ಕದ್ದು ಮುಚ್ಚಿ ಓಡಾಡುತ್ತಿದ್ದರೂ ಇಲ್ಲಿ ಓರ್ವ ತಂದೆಯ ಭಾವನೆ ಎಲ್ಲರಿಗೂ ಇಷ್ಟವಾಗ್ತಿದೆ. ಅಪ್ಪನಾದವನಿಗೆ ಮಗನ ಬಗ್ಗೆ ಎಂಥ ಮಮಕಾರ ಇರುತ್ತದೆ. ಜವಬ್ದಾರಿ ಇರುತ್ತದೆ ಎನ್ನುವುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿರುವುದು ಕೂಡ ಧಾರಾವಾಹಿಗೆ ಪ್ಲಸ್ ಆಗಿದೆ. ಸದ್ಯ ಅಮೃತಧಾರೆಯಲ್ಲಿ ಮಗ ಆಕಾಶ್‌ಗೆ ಮಾತ್ರವಲ್ಲ, ವೀಕ್ಷಕರ ಫೇವರಿಟ್ ಅಪ್ಪನಾಗಿ ಮಿಂಚ್ತಿದ್ದಾರೆ ಗೌತಮ್.
ಲಕ್ಷ್ಮೀ ನಿವಾಸ
ಲಕ್ಷ್ಮೀ ನಿವಾಸ ಕಳೆದ ವಾರದ ಸಂಚಿಕೆಗಳಂತೂ ಸೂಪರ್ ಡೂಪರ್ ಹಿಟ್. ಧಾರಾವಾಹಿ ಪ್ರಸಾರವಾದ ಆರಂಭದಲ್ಲಿ ಲಕ್ಷ್ಮೀ ಪಾತ್ರ ಹೆಚ್ಚು ಪವರ್‌ಫುಲ್ ಆಗಿತ್ತು. ಆದರೆ ಎಂದೂ ಲಕ್ಷ್ಮೀ-ಶ್ರೀನಿವಾಸ್ ಮಕ್ಕಳು ತಿರುಗಿಬಿದ್ದರೋ ಅಂದಿನಿಂದ ಶ್ರೀನಿವಾಸ್ ಸ್ವಲ್ಪ ಖಡಕ್ ಆದರು. ಎಷ್ಟರಮಟ್ಟಿಗೆ ಅಂದ್ರೆ ಶ್ರೀನಿವಾಸ್ ವಕೀಲರ ಮುಂದೆ ವಾದ ಮಾಡಿದ ಶೈಲಿ, ನ್ಯಾಯಾಧೀಶರ ಮುಂದಿಟ್ಟ ಬೇಡಿಕೆ, ಮಕ್ಕಳಿಗೆ ಕಲಿಸಿದ ಪಾಠ ಸ್ವತಃ ನಿಜ ಜೀವನದ ಅಪ್ಪ ಅಮ್ಮಂದಿರೂ ತಮ್ಮ ಸ್ಥಾನವ್ನನೇ ಅಲ್ಲಿ ಕಲ್ಪಿಸಿಕೊಂಡು ಶ್ರೀನಿವಾಸ್ ಅವರಿಗೆ ಭೇಷ್ ಅಂದಿದ್ದರು. ಅಲ್ಲಿಗೆ ಲಕ್ಷ್ಮೀ ನಿವಾಸದಲ್ಲಿ ಅಪ್ಪ ಶ್ರೀನಿವಾಸ್‌ಗಿರುವ ಸ್ವಾಭಿಮಾನ ವೀಕ್ಷರಿಗೆ ಬಹಳ ಇಷ್ಟವಾಯ್ತು.
ಕರ್ಣ
ಇನ್ನು ಕರ್ಣ ಧಾರಾವಾಹಿಯಲ್ಲಿ ಆರಂಭದಲ್ಲಿ ರಮೇಶ್ ಪಾತ್ರವನ್ನ ವಿಲನ್ ಆಗಿ ತೋರಿಸಲಾಗಿತ್ತು. ಆದರೆ ಇಲ್ಲಿಯೂ ರಮೇಶ್ ಪಾತ್ರವನ್ನ ಪಾಸಿಟಿವ್ ಆಗಿ ತೋರಿಸಲಾಗುತ್ತಿದೆ. ಅಂದರೆ ಕರ್ಣನಿಗೆ ಸಪೋರ್ಟ್ ಮಾಡುತ್ತಾ ಅಪ್ಪನ ಪ್ರೀತಿ ತೋರಿಸುತ್ತಿರುವುದು ವೀಕ್ಷಕರಿಗೆ ಬಹಳ ಇಷ್ಟವಾಗ್ತಿದೆ. ಜೊತೆಗೆ ನೆಟ್ಟಿಗರು ಸಹ ಅಪ್ಪ-ಮಗನ ಪ್ರೀತಿ ಹೀಗೆ ಇರಲಿ ಎಂದು ಹಾರೈಸುತ್ತಿರುವುದನ್ನ ನಾವಿಲ್ಲಿ ಗಮನಿಸಬಹುದು. ಮುಂದೆ ಈ ಪಾತ್ರ ಹೇಗೆ ತಿರುವು ಪಡೆದುಕೊಳ್ಳುತ್ತದೆಯೋ ಗೊತ್ತಿಲ್ಲ. ಸದ್ಯಕ್ಕಂತೂ ರಮೇಶ್-ಕರ್ಣನ ಕಾಂಬಿನೇಶನ್ ವರ್ಕ್ ಔಟ್ ಆಗಿದೆ.
ನೀವೇನಂತೀರಾ?
ಉಳಿದಂತೆ ಬೇರೆ ಧಾರಾವಾಹಿಗಳಲ್ಲಿ ಪಾತ್ರಧಾರಿಗಳು ಅಪ್ಪನ ಪಾತ್ರವನ್ನ ಅದ್ಭುತವಾಗಿ ನಿಭಾಯಿಸುತ್ತಿದ್ದರೂ ಪಾತ್ರಗಳು ಅಷ್ಟೇನು ವೀಕ್ಷಕರ ಗಮನಸೆಳೆದಿಲ್ಲ. ಆದರೆ ಮೇಲ್ಕಂಡ ಮೂರು ಧಾರಾವಾಹಿಗಳಲ್ಲಿ ಅಪ್ಪನ ಪಾತ್ರ ಹೈಲೆಟ್ ಆಗಿರುವುದಂತೂ ಸುಳ್ಳಲ್ಲ. ನೀವೇನಂತೀರಾ?.