ಶ್ರೀ ರಾಘವೇಂದ್ರ ಮಹಾತ್ಮೆಯಲ್ಲಿ ರಾಯರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ಈ ಜನಪ್ರಿಯ ನಟ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿರುವ ಶ್ರೀ ರಾಘವೇಂದ್ರ ಮಹಾತ್ಮೆಯಲ್ಲಿ ಶೀಘ್ರದಲ್ಲಿ ರಾಯರ ಬಾಲ್ಯ ಜೀವನ ಮುಗಿದು ಯೌವ್ವನಕ್ಕೆ ಕಾಲಿಡಲಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರಕ್ಕೆ ಕನ್ನಡ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದ ನಟ ಶ್ರೇಯಸ್ ಕಶ್ಯಪ್ ಆಯ್ಕೆಯಾಗಿದ್ದಾರೆ.

ಶ್ರೀ ರಾಘವೇಂದ್ರ ಮಹಾತ್ಮೆ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಎಂದರೆ ಅದು ಶ್ರೀ ರಾಘವೇಂದ್ರ ಮಹಾತ್ಮೆ. ರಾಯನ ಜೀವನದ ಕಥೆಯನ್ನು ಹೇಳುತ್ತಿರುವ, ಜಗಕ್ಕೆ ರಾಯರ ಪವಾಡಗಳನ್ನು ಸಾರುವ ಈ ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದೆ.
ರಾಯರ ಪಾತ್ರಕ್ಕೆ ಜನಪ್ರಿಯ ನಟ
ಇಲ್ಲಿವರೆಗೆ ರಾಘವೇಂದ್ರ ಸ್ವಾಮಿಗಳ ಬಾಲ್ಯದ ಕಥೆ ಪ್ರಸಾರವಾಗುತ್ತಿತ್ತು, ಬಾಲ್ಯದಲ್ಲಿ ರಾಯರು ಮಾಡಿರುವಂತಹ ಸಮಾಜ ಸೇವೆ ಕಾರ್ಯಗಳ ಮೂಲಕವೇ ಹೇಗೆ ಜಗದ್ದೋದ್ದಾರ ಮಾಡುತ್ತಿದ್ದಾರೆ ಅನ್ನೋದು ಪ್ರಸಾರವಾಗುತ್ತಿದೆ. ಇದೀಗ ರಾಯರು ಯೌವ್ವನಕ್ಕೆ ಕಾಲಿಡುವ ಸಮಯ ಬಂದಿದೆ. ರಾಯರ ಪಾತ್ರಕ್ಕೆ ಹೊಸ ನಟನ ಆಗಮನವೂ ಆಗಿದೆ.
ರಾಯರ ಪಾತ್ರದಲ್ಲಿ ನಟಿಸುತ್ತಿರುವ ನಟ ಯಾರು?
ಇಲ್ಲಿವರೆಗೆ ಜನರಲ್ಲಿ ಬಹಳ ಕುತೂಹಲವಿತ್ತು ರಾಯರ ಪಾತ್ರದಲ್ಲಿ ಯಾವ ನಟ ನಟಿಸಲಿದ್ದಾರೆ ಎನ್ನುವ ಬಗ್ಗೆ. ಅದಕ್ಕಾಗಿಯೇ ಜನ ಕಾಯುತ್ತಿದ್ದರು. ಇದೀಗ ಶ್ರೀ ರಾಘವೇಂದ್ರ ಮಹಾತ್ಮೆಯ ಹೊಸ ಅಧ್ಯಾಯದ ಪ್ರೊಮೋ ರಿಲೀಸ್ ಆಗಿದ್ದು. ರಾಯರ ಪಾತ್ರದಲ್ಲಿ ಶ್ರೇಯಸ್ ಕಷ್ಯಪ್ ಅವರು ನಟಿಸುತ್ತಿದ್ದಾರೆ.
ಯಾರು ಈ ಶ್ರೇಯಸ್ ಕಷ್ಯಪ್
ಶ್ರೇಯಸ್ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮನೆದೇವ್ರು, ತ್ರಿವೇಣಿ ಸಂಗಮ, ನಂದಿನಿ, ಮತ್ತೆ ಮಾಯಾಮೃಗ ಸೀರಿಯಲ್ ಗಳಲ್ಲಿ ನಟಿಸಿದ್ದರು. ಇದೀಗ ರಾಘವೇಂದ್ರ ಮಹಾತ್ಮೆಯಲ್ಲಿ ರಾಯರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ರಂಗಭೂಮಿ ಕಲಾವಿದ
ಮೈಸೂರಿನಲ್ಲಿ ಹುಟ್ಟಿ ಬೆಳೆದ ಶ್ರೇಯಸ್ ಕಷ್ಯಪ್, ಆರಂಭದಲ್ಲಿ ಇನ್ಫೋಸೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಇವರು ರಂಗಭೂಮಿ ಕಲಾವಿದರಾಗಿದ್ದು, ಹಲವಾರು ನಾಟಕದಲ್ಲಿ ನಟಿಸಿದ್ದಾರೆ. ಅಲ್ಲಿಂದಲೇ ಅವರಿಗೆ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದ್ದು, ಸದ್ಯ ರಾಘವೇಂದ್ರ ಸ್ವಾಮಿಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
ಧಾರಾವಾಹಿ ಕುರಿತು ಶ್ರೇಯಸ್ ಕಷ್ಯಪ್ ಹೇಳಿದ್ದೇನು?
ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಹಾಗೂ ಪರಮಪೂಜ್ಯ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ , ರಾಯರ ಪಾತ್ರದಲ್ಲಿ – “ಶ್ರೀ ರಾಘವೇಂದ್ರ ಮಹಾತ್ಮೆ” ಧಾರಾವಾಹಿ ನಿಮ್ಮ ಮುಂದೆ! ಶ್ರೀ ಸುಖದಾರೇ ಪಿಕ್ಚರ್ಸ್ ನಿರ್ಮಾಣದಲ್ಲಿ, ನವೀನ್ ಕೃಷ್ಣ ಅವರ ನಿರ್ದೇಶನದಲ್ಲಿ, Zee ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:00 ಗಂಟೆಗೆ ಪ್ರಸಾರವಾಗುತ್ತದೆ. ಹರಸಿ, ಹಾರೈಸಿ ಎಂದು ಬೇಡಿಕೊಂಡಿದ್ದಾರೆ.
ನವೀನ್ ಕೃಷ್ಣ ನಿರ್ದೇಶನ
ಶ್ರೀ ರಾಘವೇಂದ್ರ ಮಹಾತ್ಮೆಯ ನಿರ್ಮಾಣ ಮತ್ತು ಕ್ರಿಯೇಟಿವ್ ಹೆಡ್ ಆಗಿ ಮಹೇಶ್ ಸುಖಧರೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಟ, ನಿರ್ದೇಶಕ ನವೀನ್ ಕೃಷ್ಣ ಅವರು ಹೊತ್ತಿದ್ದಾರೆ. ಇನ್ನು ಈ ಧಾರಾವಾಹಿಗೆ ಮಣಿಕಾಂತ್ ಕದ್ರಿ ಅಮೋಘ ಸಂಗೀತವಿದೆ. ಇಲ್ಲಿವರೆಗೂ ಧಾರಾವಾಗಿ ಅದ್ಭುತವಾಗಿ ಮೂಡಿ ಬಂದಿದೆ.