- Home
- Entertainment
- TV Talk
- Annayya Serial: ಎಲ್ರಿಗೂ ಚಳ್ಳೆ ಹಣ್ಣು ತಿನ್ನಿಸಿ ಮತ್ತೆ ಪಾರು ಪ್ಲಾನ್ ಉಲ್ಟಾ ಮಾಡ್ತಾನಾ ವೀರಭದ್ರ?
Annayya Serial: ಎಲ್ರಿಗೂ ಚಳ್ಳೆ ಹಣ್ಣು ತಿನ್ನಿಸಿ ಮತ್ತೆ ಪಾರು ಪ್ಲಾನ್ ಉಲ್ಟಾ ಮಾಡ್ತಾನಾ ವೀರಭದ್ರ?
ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರ-ಪಾರು ಜಟಾಪಟಿ ಮತ್ತೆ ಮುಂದುವರೆದಿದೆ. ಈ ಬಾರಿ ಗೆಲುವು ಪಾರುವಿನದಾಗುತ್ತಾ ಅಥವಾ ವೀರಭದ್ರನಾ ಪ್ಲಾನ್ ಮೇಲುಗೈ ಆಗುತ್ತಾ? ಎಂಬುದನ್ನ ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

ಸನ್ನೆ ಮಾಡಿದ ಶಾರದಮ್ಮ
'ಅಣ್ಣಯ್ಯ' ಧಾರಾವಾಹಿಯಲ್ಲಿ ಶಿವು ಅಮ್ಮ ಶಾರದಮ್ಮ ಮಾದಪ್ಪನ ಮನೆ ಸೇರಾಯ್ತು. ಕಸಗುಡಿಸಲೆಂದು ಕೋಣೆಯೊಂದಕ್ಕೆ ಬಂದ ಗುಂಡು ಶಾರದಮ್ಮನನ್ನು ನೋಡಿ ಹೆದರುತ್ತಾಳೆ. ಕೊನೆಗೆ ತನ್ನ ಮಾವ ಮಾದಪ್ಪನನ್ನು ಕರೆದು ಮಾವ "ಇಲ್ಲಿ ಯಾರೋ ಬಂದಿದ್ದಾರೆ" ಬನ್ನಿ ಎಂದು ಕೂಗುತ್ತಾಳೆ. ಆಗ ಓಡಿ ಬರುವ ಮಾದಪ್ಪ, "ಇವರು ನಿಮ್ಮ ಅಮ್ಮನೇ ಕಣಮ್ಮ" ಎಂದು ಹೇಳಬೇಕು. ಅಷ್ಟರಲ್ಲಿ ಶಾರದಮ್ಮ ಸನ್ನೆ ಮಾಡಿ "ತಾನು ತಾಯಿ ಎಂಬ ವಿಷಯ ತಿಳಿಸಬೇಡ" ಎಂದು ಹೇಳುತ್ತಾಳೆ.
"ನಿಮ್ಮಂಥವರಿಗೆ ಹೀಗಾಗಬಾರದಿತ್ತು"
ಇತ್ತ ಪಾರು ಅಪ್ಪ ವೀರಭದ್ರ ತನಗೆ ಸ್ಟ್ರೋಕ್ ಆಗಿದೆ ಎಂದು ಹೇಳಿ ಹಾಸಿಗೆಯಲ್ಲಿ ಮಲಗಿದ್ದಾನೆ. ಊರವರೆಲ್ಲಾ ಬಂದು ಕುಶಲೋಪರಿ ವಿಚಾರಿಸಿ "ನಿಮ್ಮಂಥವರಿಗೆ ಹೀಗಾಗಬಾರದಿತ್ತು" ಎಂದು ಸಾಂತ್ವಾನ ಹೇಳುತ್ತಿದ್ದಾರೆ. ಇದೆಲ್ಲಾ ವೀರಭದ್ರನ ನಾಟಕ ಎಂಬುದು ಎಳ್ಳಷ್ಟು ಯಾರಿಗೂ ಅನುಮಾನ ಬಂದಿಲ್ಲ.
ಓಡೋಡಿ ಬಂದ ಶಿವು
ಮಾವ ವೀರಭದ್ರನಿಗೆ ಹೀಗಾಯ್ತಲ್ಲ ಎಂದು ಶಿವು ಕೂಡ ಪಾರು ಜೊತೆ ಓಡೋಡಿ ಬಂದಿದ್ದಾನೆ. ಜೊತೆಗೆ ಮಾವನ ಅವಸ್ಥೆ ಕಂಡು ಬೇಸರಗೊಂಡಿದ್ದಾನೆ. ಪಾರುಗೆ ಮೊದ ಮೊದಲು ಚೂರು ಅನುಮಾನ ಬರುವುದಿಲ್ಲ. ಆಕೆಯ ಅಮ್ಮ, ಚಿಕ್ಕಮ್ಮ ಕೂಡ ವೀರಭದ್ರನ ಜೊತೆಗೆ ನಿಂತು ಆರೈಕೆ ಮಾಡುತ್ತಿದ್ದಾರೆ.
ವೀರಭದ್ರನ ಪರವಾಗಿಯೇ ಇದೆ ವರದಿ
ಆದರೆ ಇಂದಿನ ಸಂಚಿಕೆಯಲ್ಲಿ ವೀರಭದ್ರನ ಅಪರಾವತಾರ ಬಟಾಬಯಲಾಗುವ ಹಾಗೆ ಕಾಣುತ್ತಿದೆ ಅಥವಾ ವೀರಭದ್ರನೇ ಪಾರುಗೆ ಚಳ್ಳೆ ಹಣ್ಣು ತಿನ್ನಿಸುತ್ತಾನಾ ನೋಡಬೇಕಿದೆ. ಏಕೆಂದರೆ ಪಾರುಗೆ ಅಪ್ಪ ವೀರಭದ್ರನ ಬಗ್ಗೆ ಅನುಮಾನ ಬಂದಿದೆ. ಹಾಗಾಗಿ ಮನೆಗೆ ಬರುವ ಡಾಕ್ಟರ್ ಎಕ್ಸ್‌ರೇಯನ್ನ ನೋಡಿದ್ದಾಳೆ. ಅದರಲ್ಲಿ ವರದಿ ವೀರಭದ್ರನ ಪರವಾಗಿಯೇ ಇದೆ.
ಪಾರುಗೆ ಮಣ್ಣು ಮುಕ್ಕಿಸುತ್ತಾನಾ?
ಅಷ್ಟಕ್ಕೆ ಬಿಡದ ಪಾರು ಮಾತ್ರೆಯನ್ನು ಸಹ ಗಮನಿಸಿದ್ದಾಳೆ. ಹಾವಭಾವ ನೋಡುತ್ತಿದ್ದಾಳೆ. ಪಾರುಗೆ ತನ್ನಪ್ಪ ನಾಟಕ ಮಾಡುತ್ತಿರುವುದು ಪ್ರೂವ್ ಮಾಡಬೇಕಿದೆ. ಈಗ ಕಾಫಿ ಲೋಟ ಹಿಡಿದು ಅಪ್ಪ ವೀರಭದ್ರನ ಕೋಣೆಗೆ ಬಂದಿದ್ದಾಳೆ. ಜೊತೆಗೆ ಅವನ ಮುಂದೆ ನಿಂತು ನೀನಾಡುತ್ತಿರುವುದು ಡ್ರಾಮಾ ಎಂಬುದು ನನಗೆ ಗೊತ್ತು ಎನ್ನುತ್ತಲೇ ಇನ್ನೇನು ಆ ಕಡೆ ತಿರುಗಬೇಕು. ಅಷ್ಟರಲ್ಲಿ ಅಲ್ಲಿ ವೀರಭದ್ರ ಎದ್ದು ಕುಳಿತಿದ್ದಾನಾ? ಅಥವಾ ಪಾರುಗೆ ಮಣ್ಣು ಮುಕ್ಕಿಸುತ್ತಾನಾ? ಎಂಬುದನ್ನ ಇವತ್ತಿನ ಸಂಚಿಕೆ ನೋಡಿದರೆ ತಿಳಿಯುತ್ತದೆ.
ವೀರಭದ್ರನಾ ಪ್ಲಾನ್ ಮೇಲುಗೈ ಆಗುತ್ತಾ?
ಸದ್ಯ ಅಣ್ಣಯ್ಯ ಧಾರಾವಾಹಿಯಲ್ಲಿ ವೀರಭದ್ರ-ಪಾರು ಜಟಾಪಟಿ ಮತ್ತೆ ಮುಂದುವರೆದಿದೆ. ಈ ಬಾರಿ ಗೆಲುವು ಪಾರುವಿನದಾಗುತ್ತಾ, ಅಥವಾ ವೀರಭದ್ರನಾ ಪ್ಲಾನ್ ಮೇಲುಗೈ ಆಗುತ್ತಾ? ಎಂಬುದನ್ನ ಕಾದು ನೋಡಬೇಕಿದೆ.