ಮದುವೆ ನಂತ್ರ ಮೊದಲ ಬಾರಿ ಹೆಂಡ್ತಿ ತವರುಮನೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಶಮಂತ್ ಗೌಡ
ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ನಟ, ಹಾಗೂ ರ್ಯಾಪರ್ ಶಮಂತ್ ಬ್ರೋ ಗೌಡ ತನ್ನ ಪತ್ನಿಯ ತವರೂರಿಗೆ ತೆರಳಿದ್ದು, ನಂಜನಗೂಡು ದೇಗುಲಕ್ಕೂ ಭೇಟಿ ಕೊಟ್ಟಿದ್ದಾರೆ.

ರ್ಯಾಪರ್ ಆಗಿ ಪರಿಚಿತರಾಗಿ ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟು ಕನ್ನಡಿಗರಿಗೆ ಚಿರಪರಿಚಿತರಾದ ಶಮಂತ್ ಬ್ರೋ ಗೌಡ, ಇದೀಗ ಇದೇ ಮೊದಲ ಬಾರಿಗೆ ಪತ್ನಿ ತವರೂರಿಗೆ ಭೇಟಿ ನೀಡಿದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಶಮಂತ್ ಪತ್ನಿ ಮೇಘನಾ ಊರು ನಂಜನಗೂಡು, ಅಲ್ಲಿಗೆ ಪತಿ -ಪತ್ನಿ ಮದುವೆಯಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿ, ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ, ಮೇಘನಾ ತವರುಮನೆ ದೇವರಾದ ನಂಜುಡೇಶ್ವರನ ದರ್ಶನ ಪಡೆದು ಬಂದಿದ್ದಾರೆ.
ಶಮಂತ್ ಬ್ರೋ ಗೌಡ ಹಾಗೂ ಅವರ ಬಹುಕಾಲದ ಗೆಳೆತಿಯಾದ ಮೇಕಪ್ ಆರ್ಟಿಸ್ಟ್ ಮೇಘನಾ ಇದೇ ವರ್ಷ ಮೇ 18 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು.
ಶಮಂತ್ ಬ್ರೋ ಗೌಡ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿಸುತ್ತಿದ್ದರು. ವೈಷ್ಣವ್ ಪಾತ್ರದಲ್ಲಿ ನಟಿಸಿದ್ದ ಶಮಂತ್ ಕನ್ನಡ ಸೀರಿಯಲ್ ಪ್ರಿಯರ ಮನ ಗೆದಿದ್ದರು. ಇದೀಗ ತೆಲುಗು ಸೀರಿಯಲ್ ನಲ್ಲೂ ನಟಿಸುತ್ತಿದ್ದಾರೆ ಶಮಂತ್.
ಲಕ್ಷ್ಮೀ ಬಾರಮ್ಮ ಸೀರಿಯಲ್ ಎಪ್ರಿಲ್ -ಮೇ ತಿಂಗಳಲ್ಲಿ ಕೊನೆಯಾಗಿತ್ತು. ಈ ಜನಪ್ರಿಯ ಧಾರಾವಾಹಿ ಕೊನೆಯಾಗುತ್ತಿದ್ದಂತೆ ಶಮಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಶಮಂತ್ ಜಾಹೀರಾತು, ಸೀರಿಯಲ್, ಹೀಗೆ ಹಲವು ಆಫರ್ ಗಳನ್ನು ಪಡೆದುಕೊಂಡು ಬ್ಯುಸಿಯಾಗಿದ್ದಾರೆ.