- Home
- Entertainment
- TV Talk
- ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ… ನಿಧಿ ಜೊತೆ ಮದುವೆ ಮಾಡಿಸುವ ಮಾತು ಕೊಟ್ಟ ರಮೇಶ್! ಮುಂದೆ ಇದೆ ಬಿಗ್ ಟ್ವಿಸ್ಟ್
ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ… ನಿಧಿ ಜೊತೆ ಮದುವೆ ಮಾಡಿಸುವ ಮಾತು ಕೊಟ್ಟ ರಮೇಶ್! ಮುಂದೆ ಇದೆ ಬಿಗ್ ಟ್ವಿಸ್ಟ್
ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ನಿಧಿ ಮತ್ತು ಕರ್ಣ ಕುಡಿದ ಅಮಲಿನಲ್ಲಿ ತಮ್ಮ ಪ್ರೀತಿಯನ್ನು, ಮನಸ್ಸಿನ ಮಾತನ್ನು ಒಬ್ಬರಿಗೊಬ್ಬರು ಹೇಳಿಯಾಗಿದೆ. ಇದೀಗ ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ, ಇಬ್ಬರನ್ನು ಒಂದು ಮಾಡುವ ಮಾತು ಕೊಟ್ಟಿದ್ದಾರೆ ರಮೇಶ್. ಹಾಗಿದ್ರೆ ನಿಜವಾಗ್ಲೂ ರಮೇಶ್ ಬದಲಾಗಿ ಬಿಟ್ರಾ?

ನಿಧಿ-ಕರ್ಣ ಪ್ರೀತಿ ವಿನಿಮಯ
ಕರ್ಣ ಧಾರಾವಾಹಿ (Karna Serial) ದಿನದಿಂದ ದಿನಕ್ಕೆ ಅದ್ಭುತವಾಗಿ ಮೂಡಿ ಬರುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಪ್ರೀತಿ, ಪ್ರೇಮ, ಆಕ್ಷನ್ ಎಲ್ಲವೂ ಥ್ರಿಲ್ಲಿಂಗ್ ಆಗಿದೆ. ಈಗಾಗಲೇ ಕುಡಿದ ಅಮಲಿನಲ್ಲಿ ನಿಧಿ ಮತ್ತು ಕರ್ಣ ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರಿ ಹೇಳಿಕೊಂಡು, ವೀಕ್ಷಕರಿಗೆ ಪ್ರೀತಿಯ ಕಚಗುಳಿಯನ್ನು ಇಟ್ಟಿದ್ದಾಗಿದೆ. ಮುಂದೇನಾಗುತ್ತೆ?
ಅಪ್ಪನ ಮುಂದೆ ಪ್ರೀತಿ ಬಿಚ್ಚಿಟ್ಟ ಕರ್ಣ
ಇದೀಗ ಹೊಸದಾಗಿ ರಿಲೀಸ್ ಆಗಿರುವ ಪ್ರೊಮೋದಲ್ಲಿ ತೋರಿಸಿರುವಂತೆ ಕರ್ಣ ಕಳೆದು ಹೋದ ಕ್ಷಣಗಳನ್ನು ನೆನೆಸಿಕೊಂಡು, ಪ್ರೀತಿಯನ್ನು ಒಪ್ಪುವುದೋ, ಬಿಡೋದೋ ಎಂದು ಯೋಚನೆ ಮಾಡುತ್ತಿರಲು ಕರ್ಣನ ತೊಳಲಾಟವನ್ನು ನೋಡಿ ಅಪ್ಪ ರಮೇಶ್ ಬಳಿ ಬರುತ್ತಾರೆ.
ಕೊಟ್ಟ ಮಾತನ್ನು ಮುರಿಯುತ್ತಾನ ಕರ್ಣ
ರಮೇಶ್ ಬಳಿ ಕರ್ಣ ತಾನು ನಿಧಿಯನ್ನು ಪ್ರೀತಿ ಮಾಡುತ್ತಿರುವುದಾಗಿಯೂ, ಆದರೆ ಈಗಾಗಲೇ ಅಪ್ಪನಿಗೆ ತಾನು ಮದುವೆಯಾಗುವುದಿಲ್ಲ ಎಂದು ಪ್ರಾಮಿಸ್ ಮಾಡೀರೋದನ್ನು ಮೀರಲು ಸಾಧ್ಯವಿಲ್ಲವೆಂತಲೂ ಹೇಳುತ್ತಾನೆ ಕರ್ಣ.
ಕರ್ಣ-ನಿಧಿ ಮದುವೆಗೆ ಅಪ್ಪನ ಒಪ್ಪಿಗೆ
ಕರ್ಣನ ಮಾತನ್ನು ಕೇಳಿ ಅಪ್ಪ ರಮೇಶ್, ನಿನಗೆ ನಾನು ಈವಾಗ ಮಾತು ಕೊಡುತ್ತೇನೆ, ನೀವಿಬ್ಬರು ಒಂದಾಗುತ್ತೀರಿ, ಒಂದಾಗಬೇಕು ಎನ್ನುತ್ತಾ ನಿಧಿ ಮತ್ತು ಕರ್ಣನ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ರಮೇಶ್.
ನಿಜವಾಗ್ಲೂ ಬದಲಾದ್ರ ರಮೇಶ್
ಕರ್ಣ ಹುಟ್ಟಿನಿಂದಲೂ ಇಲ್ಲಿವರೆಗೂ ಬರೀ ದ್ವೇಷವನ್ನು ಸಾಧಿಸಿಕೊಂಡು ಬಂದಿದ್ದ ರಮೇಶ್, ಅಮ್ಮ ಮನೆಯಿಂದ ಹೊರಹಾಕಿದ ನಂತರ, ಕರ್ಣನ ಬಳಿ ಸಾರಿ ಕೇಳಿ ಮತ್ತೆ ಮನೆಗೆ ಕಾಲಿಟ್ಟಿದ್ದರು. ನಂತರ ದಿನಗಳಲ್ಲಿ ಒಳ್ಳೆತನವನ್ನು ತೋರಿಸುತ್ತಿದ್ದಾರೆ. ಹಾಗಾಗಿ ನಿಜವಾಗಿಯೂ ರಮೇಶ್ ಬದಲಾಗಿದ್ದಾರೆಯೇ ಎನ್ನುವ ಸಂಶಯ ಕಾಡುತ್ತಿದೆ.
ವೀಕ್ಷಕರು ಏನು ಹೇಳುತ್ತಾರೆ?
ರಮೇಶ ಅಂಕಲ್ ಏನೋ ಪ್ಲಾನ್ ಮಾಡಿದ್ದಾರೆ, ರಮೇಶ್ ಪ್ಲಾನ್ ಗೆಸ್ ಮಾಡೋದಕೆಕ್ ಸಾಧ್ಯಾನೆ ಇಲ್ಲ. ಇಲ್ಲಿ ಏನು ನಡಿತಿದೆ, ರಮೇಶ್ ದೊಡ್ಡದಾಗಿ ಏನೋ ಮಾಡೋದಕ್ಕೆ ರೆಡಿಯಾಗ್ತಿದ್ದಾರೆ ಎಂದಿದ್ದಾರೆ ವೀಕ್ಷಕರು. ಜೊತೆಗೆ ಫೈನಲಿ ಅಪ್ಪ ಒಪ್ಪಿಕೊಂಡು ಬಿಟ್ರಲ್ಲ, ಅದಕ್ಕೆ ಥ್ಯಾಂಕ್ಯೂ ಎನ್ನುತ್ತಿದ್ದಾರೆ ಜನ.
ನಿಧಿ -ಕರ್ಣ ಮದುವೆ ನಡೆಯುತ್ತಾ?
ಎಲ್ಲಾ ಅಡೆ ತಡೆಗಳನ್ನು ಮೀರಿ ನಿಧಿ ಕರ್ಣ ಜೋಡಿ ಪ್ರೀತಿ ಮಾಡಿಯಾಗಿದೆ, ಒಬ್ಬರಿಗೊಬ್ಬರು ಹೇಳಿಕೊಂಡಾಗಿದೆ. ಆದರೆ ನಿಜವಾಗಿಯೂ ಕರ್ಣ ಮತ್ತು ನಿಧಿ ಮದುವೆ ನಡೆಯುತ್ತಾ? ಹಲವು ವೀಕ್ಷಕರು ಇಲ್ಲ, ಕರ್ಣ ಮದುವೆ ನಡೆಯೋದು ನಿತ್ಯಾ ಜೊತೆಗೆ ಅಂತಿದ್ದಾರೆ. ಏನು ಆಗುತ್ತೆ ಅನ್ನೋದನ್ನು ಕಾದು ನೋಡಬೇಕು.