- Home
- Entertainment
- TV Talk
- Ramachari Serial ಬಿಟ್ಮೇಲೆ ಹೊಸ ಮೈಲಿಗಲ್ಲು ಹತ್ತಿದ ನಟಿ; ಎಲ್ಲರಿಂದ ಮೆಚ್ಚುಗೆಯ ಸುರಿಮಳೆ!
Ramachari Serial ಬಿಟ್ಮೇಲೆ ಹೊಸ ಮೈಲಿಗಲ್ಲು ಹತ್ತಿದ ನಟಿ; ಎಲ್ಲರಿಂದ ಮೆಚ್ಚುಗೆಯ ಸುರಿಮಳೆ!
ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಧಾರಾವಾಹಿಯನ್ನು ಬಿಡ್ತಾರೆ. ಅಂದಹಾಗೆ ರಾಮಾಚಾರಿ ಧಾರಾವಾಹಿ ನಟಿಯೊಬ್ಬರು ಸೀರಿಯಲ್ ಬಿಟ್ಟ ಬಳಿಕ ಎಜ್ಯುಕೇಶನ್ ಕಂಪ್ಲೀಟ್ ಮಾಡಿದ್ದಾರೆ. ಈ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೈಲಿಗಲ್ಲು ಏರಿದ್ರು
ರಾಮಾಚಾರಿ ಧಾರಾವಾಹಿಯಲ್ಲಿ ಆರಂಭದಲ್ಲಿ ರುಕ್ಮಿಣಿ ಪಾತ್ರದಲ್ಲಿ ನಟಿ ದೇವಿಕಾ ಭಟ್ ನಟಿಸಿದ್ದರು. ಈಗ ಅವರು ಶಿಕ್ಷಣದಲ್ಲಿ ಒಂದು ಹಂತದ ಮೈಲಿಗಲ್ಲು ಏರಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಎಂಬಿಎ ಮುಗಿಸಿದ್ರು
ಅಂದಹಾಗೆ ದೇವಿಕಾ ಭಟ್ ಅವರು ಎಂಬಿಎ ಮುಗಿಸಿದ್ದಾರೆ. ಪ್ರಾಜೆಕ್ಟ್, ಅಸೈನ್‌ಮೆಂಟ್, ಕ್ಲಾಸ್ ಎಂದು ಅವರು ಒಟ್ಟಿನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಾಮಾಚಾರಿ ಬಿಟ್ಟಿದ್ದು ಯಾಕೆ?
ಎಂಬಿಎ ಮುಗಿಸಿದ ದೇವಿಕಾ ಭಟ್ ಅವರಿಗೆ ಅನೇಕರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಂದಹಾಗೆ ಇವರು ಯಾವ ಕಾರಣಕ್ಕೆ ರಾಮಾಚಾರಿ ಸೀರಿಯಲ್ ಬಿಟ್ಟರು ಎನ್ನೋದು ಮಾತ್ರ ಇನ್ನೂ ನಿಗೂಢವಾಗಿದೆ.
ಸಿನಿಮಾದತ್ತ ಗಮನ
ರಾಮಾಚಾರಿ ಧಾರಾವಾಹಿ ಬಿಟ್ಟ ನಂತರ ದೇವಿಕಾ ಭಟ್ ಅವರು ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಶಿಕ್ಷಣವನ್ನು ಮುಗಿಸಿರುವ ದೇವಿಕಾ ಭಟ್ ಈಗ ಸಿನಿಮಾದತ್ತ ಪೂರ್ಣಪ್ರಮಾಣದಲ್ಲಿ ಗಮನ ಕೊಡಬಹುದು.
ಹೊಸ ರುಕ್ಮಿಣಿ
ಈಗ ರಾಮಾಚಾರಿ ಧಾರಾವಾಹಿಯ ರುಕ್ಮಿಣಿಯ ಪಾತ್ರಕ್ಕೆ ಹೊಸ ನಟಿಯ ಆಗಮನವಾಗಿದೆ. ಶೀಘ್ರವೇ ಈ ಧಾರಾವಾಹಿ ಮುಕ್ತಾಯ ಆಗಲಿದೆ ಎಂದು ಕೂಡ ಹೇಳಲಾಗುತ್ತಿದೆ.