- Home
- Entertainment
- TV Talk
- ಪೀರಿಯಡ್ಸ್ ಟೈಮ್‌ನಲ್ಲೂ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಮಾಡಿದ್ದೆ ಎಂದ ಖ್ಯಾತ ಕಿರುತೆರೆ ನಟಿ!
ಪೀರಿಯಡ್ಸ್ ಟೈಮ್‌ನಲ್ಲೂ ದೇವಸ್ಥಾನಕ್ಕೆ ಹೋಗಿ ದೇವಿ ದರ್ಶನ ಮಾಡಿದ್ದೆ ಎಂದ ಖ್ಯಾತ ಕಿರುತೆರೆ ನಟಿ!
Actress Prarthana Behere Shares Story of Visiting Temple During Menstruation ನಟಿ ಪ್ರಾರ್ಥನಾ ಬೆಹೆರೆ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಶಾಲಾ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.

ಇಂದು ಜಗತ್ತು ಬಹಳಷ್ಟು ಬದಲಾಗಿದೆ. ಆದರೆ ಕೆಲವು ಸ್ಥಳಗಳಲ್ಲಿ ಕೆಲವು ನಂಬಿಕೆಗಳು ಇನ್ನೂ ಹಾಗೆಯೇ ಇವೆ. ಅಂತಹ ಒಂದು ನಂಬಿಕೆಯೆಂದರೆ ಮುಟ್ಟಿನ ಸಮಯದಲ್ಲಿ ದೇವರನ್ನು ಪೂಜಿಸಬಾರದು ಎನ್ನುವುದು. ಮುಟ್ಟಿನ ಬಗ್ಗೆ ಹಲವು ರೀತಿಯ ನಂಬಿಕೆಗಳು ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿವೆ.
ವಿಶೇಷವಾಗಿ ಪೂಜೆ, ಉಪವಾಸ ಮತ್ತು ದೇವಾಲಯಗಳಿಗೆ ಹೋಗುವುದರ ಬಗ್ಗೆ ಬಹಳ ಕಟ್ಟುನಿಟ್ಟಿನ ನಿಯಮಗಳಿವೆ. ಮುಟ್ಟು ಒಂದು ನೈಸರ್ಗಿಕ ಪ್ರಕ್ರಿಯೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ.
ಈ ನಡುವೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ಪ್ರಾರ್ಥನಾ ಬೆಹೆರೆ ತಮ್ಮ ಋತುಚಕ್ರದ ಬಗ್ಗೆ ಪ್ರಮುಖ ಹೇಳಿಕೆ ಹೇಳಿದ್ದಾರೆ. ನಟಿ ಪ್ರಾರ್ಥನಾ ಶಾಲಾ ಶಿಕ್ಷಣವನ್ನು ಮುಗಿಸುವಾಗ ಪೀರಿಯಡ್ಸ್ ಸಮಯದಲ್ಲಿ ಆಗಿರುವ ಘಟನೆಯನೊಂದನ್ನ ಇತ್ತೀಚೆಗೆ ತಿಳಿಸಿದ್ದಾರೆ.
ಶಾಲೆ ಪ್ರವಾಸದ ಸಮಯದಲ್ಲಿ ನನಗೆ ಪೀರಿಯಡ್ಸ್ ಆಗಿತ್ತು. ಈ ವೇಳೆ ಕೆಲವರು 'ನೀನು ದೇವಿಯ ದರ್ಶನ ಪಡೆಯೋದು ಸಾಧ್ಯವಿಲ್ಲ' ಎಂದಿದ್ದರು. ಆದರೆ, ನಾನು ದೇವಸ್ಥಾನದ ಒಳಹೊಕ್ಕು ದೇವಿಯ ದರ್ಶನ ಪಡೆದು ಕ್ಷಮೆಯಾಚಿಸಿದ್ದೆ ಎಂದಿದ್ದಾರೆ.
"ಇಲ್ಲಿ ಒಂದು ಘಟನೆ ಹಂಚಿಕೊಳ್ಳಬೇಕು ಅಂತಾ ನನಗೆ ಆಸೆ ಇದೆ. ನಾನು ದೇವಿಯ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋದಾಗಲೆಲ್ಲಾ, ಅವಳು ನನ್ನ ತಾಯಿ ಅಂತ ನನಗೆ ಅನಿಸುತ್ತದೆ. ನಾನು ಶಾಲೆಯಲ್ಲಿದ್ದಾಗ ಗುಜರಾತ್‌ನ ಚಾಮುಂಡಿ ಮಾತೆಯ ದರ್ಶನಕ್ಕಾಗಿ ಹೋಗಿದ್ದೆವು. ಅಲ್ಲಿ ತುಂಬಾ ಮಜಾ ಮಾಡಿದೆವು. ಅಲ್ಲಿದ್ದಾಗಲೇ ನನಗೆ ಪೀರಿಯಡ್ಸ್ ಆಗಿತ್ತು. ಬಹುಶಃ ಅದು ನನ್ನ ನಾನು ಮೊದಲ ಅಥವಾ ಎರಡನೇ ಪೀರಿಯಡ್ಸ್ ಅದಾಗಿತ್ತು. ಇದರ ಬೆನ್ನಲ್ಲಿಯೇ ನನ್ನ ಎಲ ಸ್ನೇಹಿತೆಯರು ಹಾಗಾದರೆ ದೇವಸ್ಥಾನದಲ್ಲಿ ದೇವಿ ದರ್ಶನ ಮಾಡಲು ಸಾಧ್ಯವಿಲ್ಲ ಎಂದಿದ್ದರು.
'ಆ ಸಮಯದಲ್ಲಿ ನನಗೆ ಸ್ವಲ್ಪ ಮುಜುಗರವಾಯಿತು. ನಾನು ದರ್ಶನಕ್ಕೆ ಹೋಗದಿದ್ದರೆ ಎಲ್ಲರಿಗೂ ತಿಳಿಯುತ್ತದೆ. ಹಾಗಾಗಿ ನಾನು ದರ್ಶನಕ್ಕೆ ಹೋಗಿದ್ದೆ... ನಾನು ನನ್ನ ಸ್ನೇಹಿತರಿಗೆ ಹೇಳಿದೆ, ಅದು ನನಗೆ ಮುಖ್ಯವಲ್ಲ. ನಾನು ದರ್ಶನಕ್ಕೆ ಹೋಗುತ್ತೇನೆ..ಅದು ಒಳ್ಳೆಯದೋ ಕೆಟ್ಟದ್ದೋ ನನಗೆ ಗೊತ್ತಿಲ್ಲ ಆದರೆ ನಾನು ದರ್ಶನಕ್ಕೆ ಹೋಗುತ್ತೇನೆ...' ಎಂದು ತಿಳಿಸಿದ್ದೆ.
"ದರ್ಶನಕ್ಕೆ ಹೋದ ನಂತರ, ನಾನು ದೇವಿಗೆ ಕ್ಷಮೆಯಾಚಿಸಿದೆ... ದೇವಿ, ನೀನು ನನ್ನ ತಾಯಿ ಮತ್ತು ನೀನು ಕೂಡ ಒಬ್ಬ ಮಹಿಳೆ... ಆದ್ದರಿಂದ ನಿನಗೆ ಈ ನೋವು ಮತ್ತು ಸಂಕಟ ತಿಳಿದಿದೆ... ನೀನು ನನ್ನನ್ನು ಕ್ಷಮಿಸುವೆ ಎಂದು ನನಗೆ ತಿಳಿದಿದೆ... ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನನ್ನು ಕ್ಷಮಿಸಿ... ನಾನು ಯಾವುದೇ ದೇವತೆಯ ದರ್ಶನಕ್ಕೆ ಹೋದಾಗಲೆಲ್ಲಾ, ನಾನು ನನ್ನ ತಾಯಿ ಮತ್ತು ನನ್ನ ಅತ್ತೆಯನ್ನು ಅವರಲ್ಲಿ ನೋಡುತ್ತೇನೆ..." ಎಂದು ನಟಿ ಹೇಳಿದ್ದಾರೆ.