- Home
- Entertainment
- TV Talk
- Nanda Gokula Serial ಮೀನಾ ರಿಯಲ್ ಪತಿ ಕೂಡ ನಟ, ಖಳನಾಯಕನನ್ನೇ ಪ್ರೀತಿಸಿ ಮದುವೆಯಾಗಿದ್ದ ನಟಿ! ಯಾರದು?
Nanda Gokula Serial ಮೀನಾ ರಿಯಲ್ ಪತಿ ಕೂಡ ನಟ, ಖಳನಾಯಕನನ್ನೇ ಪ್ರೀತಿಸಿ ಮದುವೆಯಾಗಿದ್ದ ನಟಿ! ಯಾರದು?
Nanda Gokula Serial Meena Real Name: ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಪಾತ್ರ ಮಾಡುತ್ತಿರುವ ನಟಿ ಮೇಘಾ ಎಸ್‌ವಿ ಅವರ ರಿಯಲ್ ಪತಿ ಕೂಡ ನಟ. ಸೀರಿಯಲ್‌ನಲ್ಲಿ ನಟಿಸುತ್ತಿರುವಾಗಲೇ ಅವರು ಲವ್ ಮಾಡಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು.

ಸೀರಿಯಲ್ ಸೆಟ್‌ನಲ್ಲಿ ಭೇಟಿ
ಧಾರಾವಾಹಿಯೊಂದರಲ್ಲಿ ನಟಿಸುವಾಗ ಮೇಘಾ ಹಾಗೂ ಸಂಜು ಭೇಟಿಯಾಗಿತ್ತು. ಆಗ ಸೀನಿಯರ್ ಅಂತ ಗುಡ್‌ಮಾರ್ನಿಂಗ್ ಹೇಳಬೇಕು ಅಂತ ಸಂಜು, ಮೇಘಾಗೆ ಹೇಳಿದ್ದರು. ಹೀಗೆ ನಿತ್ಯವೂ ಮೇಘಾ ಗುಡ್‌ಮಾರ್ನಿಂಗ್ ಹೇಳುತ್ತಿದ್ದರು, ಅತ್ತ ಸಂಜು ರ್ಯಾಗ್ ಮಾಡುತ್ತಿದ್ದರು. ಹೀಗೆ ಪರಿಚಯ ಆಗಿತ್ತು. ‘ಜೀವ ಹೂವಾಗಿದೆ’ ಧಾರಾವಾಹಿಯಲ್ಲಿ ಮೇಘಾ ಅತ್ತೆ ಮಗನ ಪಾತ್ರದಲ್ಲಿ ಸಂಜು ನಟಿಸಿದ್ದರು.
ಲಿಲ್ಲಿಪುಟ್ ಅಂತ ಹೆಸರಿಟ್ರು
ಧಾರಾವಾಹಿ ಸೆಟ್‌ನಲ್ಲಿ ಮೇಘಾ ಸ್ಕರ್ಟ್ ಹಾಕಿಕೊಂಡು ಓಡಾಡುತ್ತಿದ್ದರಂತೆ. ಹೀಗಾಗಿ ಸಂಜು, ಮೇಘಾಗೆ ಲಿಲ್ಲಿಪುಟ್ ಅಂತ ಹೆಸರಿಟ್ಟರು. ಈಗಲೂ ಮೊಬೈಲ್‌ನಲ್ಲಿ ಲಿಲ್ಲಿಪುಟ್ ಅಂತ ಹೆಸರಿಟ್ಟಿದ್ದಾರಂತೆ.
ಪ್ರೇಮ ನಿವೇದನೆ ಮಾಡಿದರು
ಕೆಲವು ದಿನಗಳ ಬಳಿಕ ಸಂಜು ಅವರು ಮೇಘಾಗೆ ಪ್ರೇಮ ನಿವೇದನೆ ಮಾಡಿದರು. ಇದು ನನಗೆ ಸೆಟ್ ಆಗಲ್ಲ ಅಂತ ಮೇಘಾ ಹೇಳಿದ್ದರಂತೆ. ಕೊನೆಗೂ ಆರು ತಿಂಗಳುಗಳ ಬಳಿಕ ಮೇಘಾ ಓಕೆ ಹೇಳಿದ್ದರು.
ಹುಡುಗನನ್ನು ಹುಡುಕುತ್ತಿದ್ದರು
“ಮನೆಯಲ್ಲಿ ನನಗೆ ಗಂಡು ನೋಡ್ತಿದ್ದರು. ಆಗ ಬಂದವರೆಲ್ಲ ಸೀರಿಯಲ್ ಮಾಡ್ತಾರಾ? ಡಾನ್ಸ್ ಇದೆಲ್ಲ ಬೇಡ. ನಮ್ಮ ಮನೆಗೆ ಬಂದ್ಮೇಲೆ ಏನೂ ಮಾಡೋದು ಬೇಡ, ಇಷ್ಟು ವರ್ಷ ಮಾಡಿದ್ದು ಸಾಕು ಅಂತ ಹೇಳಿದ್ದರು. ಹುಡುಗನ ಕಡೆಯವರು ಈ ರೀತಿ ಹೇಳಿರೋದು ಬೇಸರ ಆಯ್ತು. ಮುಂದೆ ನನ್ನ ಭವಿಷ್ಯ ಹೇಗೆ ಅಂತ ಯೋಚನೆ ಆಗಿತ್ತು. ಆಗ ಸಂಜು ನನ್ನ ರಂಗದವರೇ ಆಗಿದ್ದರಿಂದ ಅರ್ಥ ಮಾಡಿಕೊಳ್ತಾರೆ ಅಂತ ಅನಿಸಿತು. ಇನ್ನು ಪ್ರೇಮ ನಿವೇದನೆ ಕೂಡ ಮಾಡಿದ್ದಾರೆ, ಒಪ್ಕೊಳೋಣ ಅಂತ ಓಕೆ ಎಂದೆ” ಎಂದು ಮೇಘಾ ಹೇಳಿದ್ದರು.
ವಿಲನ್ ಪಾತ್ರ ಮಾಡುತ್ತಿದ್ದ ಸಂಜು
ಸಂಜು ಅವರು ಹೆಚ್ಚಾಗಿ ವಿಲನ್ ಪಾತ್ರ ಮಾಡುತ್ತಿದ್ದರು. ತಾನು ಪ್ರಪೋಸ್ ಮಾಡಿದರೆ ಹುಡುಗಿಗೆ ಏನು ಅನಿಸತ್ತೋ ಏನೋ ಅಂತ ಕೂಡ ಡೌಟ್ ಬಂದಿತ್ತಂತೆ. ಹೀಗಾಗಿ ಅವರು ಹಿಂಜರಿಕೆಯಿಂದಲೇ ಪ್ರೇಮ ನಿವೇದನೆ ಮಾಡಿದ್ದರು.
ರಾಜ ರಾಣಿ ಶೋನಲ್ಲಿ ಭಾಗಿ
ಕೊನೆಗೂ ಕುಟುಂಬಸ್ಥರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಯಿತು. ಅಷ್ಟೇ ಅಲ್ಲದೆ ‘ರಾಜ ರಾಣಿ’ ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

