- Home
- Entertainment
- TV Talk
- Naa Ninna Bidalaare ದುರ್ಗಾಗೆ 'ಬೆಸ್ಟ್ ಭರವಸೆಯ ನಾಯಕಿ' ಪ್ರಶಸ್ತಿ: ಅವಾರ್ಡ್ ಬಳಿಕ ಚೇಂಜ್ ಆಗೋಯ್ತು ಲುಕ್ಕು!
Naa Ninna Bidalaare ದುರ್ಗಾಗೆ 'ಬೆಸ್ಟ್ ಭರವಸೆಯ ನಾಯಕಿ' ಪ್ರಶಸ್ತಿ: ಅವಾರ್ಡ್ ಬಳಿಕ ಚೇಂಜ್ ಆಗೋಯ್ತು ಲುಕ್ಕು!
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ದುರ್ಗಾ ಪಾತ್ರಧಾರಿ ರಿಷಿಕಾ, ಜೀ ಕುಟುಂಬ ಅವಾರ್ಡ್ಸ್‌ನಲ್ಲಿ 'ಭರವಸೆಯ ನಾಯಕಿ' ಪ್ರಶಸ್ತಿ ಪಡೆದಿದ್ದಾರೆ. ಈ ಧಾರಾವಾಹಿಯು ಶರತ್, ಅಂಬಿಕಾ ಮತ್ತು ಅವರ ಮಗಳು ಹಿತಾಳ ಕಥೆಯಾಗಿದ್ದು, ಅಂಬಿಕಾಳ ಮರಣದ ನಂತರ ಆಕೆಯ ಆತ್ಮವು ದುರ್ಗಾಳ ಮೂಲಕ ತನ್ನ ಮಗಳನ್ನು ರಕ್ಷಿಸುವ ಸ್ಟೋರಿ…

ಕನಸು ಕಾಣುತ್ತಾ ಇರಿ
ಕನಸು ಕಾಣಿ, ಯಾವತ್ತೂ ನಿಲ್ಲಿಸಬೇಡಿ. ಒಂದಲ್ಲ ಒಂದು ದಿನ ಅದು ನನಸಾಗುತ್ತದೆ ಎನ್ನುವ ಮೂಲಕ ಜೀ ಕುಟುಂಬ ಅವಾರ್ಡ್ಸ್ (Zee Kutumba Awards)ನಲ್ಲಿ ಭರವಸೆಯ ನಾಯಕಿ ಪ್ರಶಸ್ತಿ ಪಡೆದಿದ್ದಾರೆ ನಾ ನಿನ್ನ ಬಿಡಲಾರೆ (Naa Ninna Bidallare) ದುರ್ಗಾ ಪಾತ್ರಧಾರಿ ರಿಷಿಕಾ.
ಅವಾರ್ಡ್ ಪಡೆದ ದುರ್ಗಾ
ಅವಾರ್ಡ್ ಸಿಗುತ್ತಿದ್ದಂತೆಯೇ ಖುಷಿಯಿಂದ ಕುಪ್ಪಳಿಸಿದ ನಟಿ, ಈ ಬಗ್ಗೆ ತುಂಬಾ ಸಂತೋಷ ವ್ಯಕ್ತಪಡಿಸಿದರು. ಜೀವನದಲ್ಲಿ ಕನಸು ಕಾಣುತ್ತಾ ಇದ್ದರೆ, ಅದು ಒಂದಿಲ್ಲೊಂದು ದಿನ ಸಕ್ಸಸ್ ಆಗತ್ತೆ ಎಂದರು. ಅಂದಹಾಗೆ, ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.
ಮೊದಲ ಸೀರಿಯಲ್ನಲ್ಲಿ ಗಮನ ಸೆಳೆದ ನಟಿ
ಮೊದಲ ಸೀರಿಯಲ್ನಲ್ಲಿ ಸೈಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.
ಮೇಕಪ್ ವಿಡಿಯೋ
ಇಂತಿಪ್ಪ ದುರ್ಗಾ ಉರ್ಫ್ ರಿಷಿಕಾ ಅವರು ಇದೀಗ ಅವಾರ್ಡ್ ಪಡೆದುಕೊಂಡಿರುವ ಬೆನ್ನಲ್ಲೇ ಮೇಕಪ್ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮೇಕಪ್ ಬಳಿಕ ತಾವು ಹೇಗೆ ಕಾಣಿಸಿಕೊಳ್ತೇವೆ ಎನ್ನೋದನ್ನು ತೋರಿಸಿದ್ದಾರೆ.
ನಾ ನಿನ್ನ ಬಿಡಲಾರೆ ಸೀರಿಯಲ್ ಸ್ಟೋರಿ
ಇನ್ನು ನಾನಿನ್ನ ಬಿಡಲಾರೆ ಸೀರಿಯಲ್ ಕುರಿತು ಹೇಳುವುದಾದರೆ, ಶರತ್ ಮತ್ತು ಅಂಬಿಕಾ ಮದುವೆಯಾಗಿ ಹಿತಾ ಎನ್ನುವ ಮಗಳು ಇರುತ್ತಾಳೆ. ಇಬ್ಬರಿಗೂ ಆಕೆಯ ಮೇಲೆ ಪಂಚಪ್ರಾಣ. ಆದರೆ ಓರ್ವ ಲೇಡಿ ವಿಲನ್ ಸೀರಿಯಲ್ನಲ್ಲಿ ಇರಲೇಬೇಕಲ್ವೆ? ಅವಳೇ ಮಾಯಾ. ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳ ಕೊ*ಲೆ ಮಾಡ್ತಾಳೆ.
ಸೀರಿಯಲ್ನಲ್ಲಿ ವಿಲನ್
ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ಅದೊಂದು ಸಂದರ್ಭದಲ್ಲಿ ಅಪ್ಪನ ಮೇಲೂ ಕೋಪಿಸಿಕೊಳ್ಳುವ ಸನ್ನಿವೇಶ ಎದುರಾಗಿ ಮಾತನ್ನೇ ಬಿಡುತ್ತಾಳೆ. ಇತ್ತ ಮಾಯಾ ಹಿತಾಳನ್ನೂ ಕೊಲ್ಲಲು ಸಂಚು ರೂಪಿಸ್ತಾಳೆ. ಆಗ ಸತ್ತು ಹೋದ ತಾಯಿ ಅಂಬಿಕಾ ರಕ್ಷಣೆ ಬರುತ್ತಾಳೆ.
ಒಳ್ಳೆಯ ಸ್ವಭಾವದ ದುರ್ಗಾ
ಶರತ್ ಕಂಪೆನಿಯಲ್ಲಿ ಕೆಲಸ ಮಾಡುವ ಎಡವಟ್ಟು ದುರ್ಗಾ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದು, ಆಕೆಯನ್ನು ತನ್ನ ಪತಿಯ ಜೊತೆ ಮದ್ವೆ ಮಾಡಿಸಬೇಕು ಎನ್ನುವ ಆಸೆ ಅಂಬಿಕಾಗೆ. ಅವಳು ತಾನು ಯಾರೆಂದು ಹೇಳದೇ ದುರ್ಗಾಗೆ ಮಾತ್ರ ಕಾಣಿಸಿಕೊಂಡು ಫ್ರೆಂಡ್ ಆಗಿದ್ದಾಳೆ.
ಎಡವಟ್ಟು ರಾಣಿ ಮೇಲೆ ವೀಕ್ಷಕರಿಗೆ ಲವ್
ಆದರೆ ಆಕೆಯ ಎಡವಟ್ಟಿನಿಂದ ಶರತ್ಗೆ ಆಕೆಯನ್ನು ಕಂಡ್ರೆ ಇನ್ನಿಲ್ಲದ ಕೋಪ. ಆದರೆ, ಈಗ ಶರತ್-ಅಂಬಿಕಾ ಮಗಳು ಹಿತಾಳನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಆಕೆಯ ಮೇಲೆ ಹಿತಾಳಿಗೂ ಅದಮ್ಯ ಪ್ರೀತಿ. ಅದೇ ಇನ್ನೊಂದೆಡೆ, ಪರಿಸ್ಥಿತಿ ಒತ್ತಡಕ್ಕೆ ಸಿಕ್ಕು ವಿಲನ್ ಜೊತೆ ಶರತ್ ಎಂಗೇಜ್ಮೆಂಟ್ ಆಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ನಾಯಕ ಶರತ್ ಪಾತ್ರದಲ್ಲಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದ ನೀತಾ ಅಶೋಕ್, ಅಂಬಿಕಾ ಪಾತ್ರದಲ್ಲಿದ್ದಾರೆ. ದುರ್ಗಾಗಳಾಗಿ ರಿಷಿಕಾ ಹಾಗೂ ವಿಲನ್ ಆಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ.